ಮೈಸೂರು, ನ.22 : ಚುನಾವಣೆ ಎಂದ ಮೇಲೆ ತಂತ್ರ- ಪ್ರತಿತಂತ್ರಗಳು ರೂಪಿಸಲು ಒಬ್ಬರು ಇನ್ನೊಬ್ಬರ ಬೆಂಬಲ ಕೇಳುವುದು ಸಹಜ. ಹೀಗಾಗಿ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ, ಹುಣಸೂರು ಚುನಾವಣೆಗೆ ಶಾಸಕ ಜಿ.ಟಿ.ದೇವೇಗೌಡ ಬೆಂಬಲ ಕೇಳಿರಬಹುದು. ಆದರೆ ತಾವು ಜಿ.ಟಿ.ದೇವೆಗೌಡರ ಜೊತೆ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಣಸೂರಿನಲ್ಲಿ ನಮ್ಮ ಪಕ್ಷದ ಅಭ್ಯಥರ್ಿ ಕಣಕ್ಕಿಳಿಸಿದ್ದಾರೆ ಎಂದು ಭಾವಿಸಿ ಜಿ.ಟಿ.ದೇವೇಗೌಡರು ಜೆಡಿಎಸ್ ಗೆ ಬೆಂಬಲ ಕೊಟ್ಟರೆ ಸ್ವಾಗತ. ತಾವಾಗಿಯೇ ಬೆಂಬಲ ಕೇಳುವುದಿಲ್ಲ. ಬಿಜೆಪಿ ಒತ್ತಡ ತಂತ್ರ ಅನುಸರಿಸಿ ಚುನಾವಣೆ ಗೆಲ್ಲಲು ಹೊರಟಿದೆ ಎಂದು ದೂರಿದರು.
ಹಿರೆಕೆರೂರು ಜೆಡಿಎಸ್ ಅಭ್ಯಥರ್ಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಯವರನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಲು ಯಡಿಯೂರಪ್ಪ ಪುತ್ರ ಸಭೆ ನಡೆಸಿದ್ದಾರೆ. ಅದೇ ರೀತಿ ರಂಭಾಪುರಿ ಸ್ವಾಮೀಜಿಯು ನಮ್ಮ ಅಭ್ಯಥರ್ಿಯನ್ನು ಹಿಂದೆ ಸರಿಯುವಂತೆ ಮಾಡಲು ಮನವೊಲಿಸುತ್ತಿದ್ದಾರೆ. ಇಷ್ಟು ಒತ್ತಡಗಳನ್ನು ಹೇರಿ ಚುನಾವಣೆ ಗೆಲ್ಲುವ ಅಗತ್ಯ ಇದೆಯಾ ? ಎಂದು ಅವರು ಪ್ರಶ್ನಿಸಿದರು.
ಸ್ವಾಮೀಜಿಗೆ ಕರೆದು ಟಿಕೆಟ್ ಕೊಟ್ಟಿರಲಿಲ್ಲ. ಅವರೆ ನಿಮ್ಮ ಪಕ್ಷದಿಂದ ಟಿಕೆಟ್ ಕೊಡಿ ಎಂದು ಬಂದಿದ್ದರು, ಅದೇ ರೀತಿ ಅವರ ಅಭಿಮಾನಿಗಳು ಒತ್ತಡ ಹಾಕಿದ್ದರು ಎಂದರು.