ನವದೆಹಲಿ, ಡಿ 17 : ಸರಕು ಮತ್ತು ಸೇವಾ ತೆರಿಗೆ ಜಿ ಎಸ್ ಟಿ ಮಂಡಳಿ ಸಭೆ ಬುಧವಾರ ನಡೆಯಲಿದ್ದು ಇದಕ್ಕೂ ಮುನ್ನ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೋಮವಾರ 35,298 ಕೋಟಿ ರೂ ಜಿ ಎಸ್ ಟಿ ಪರಿಹಾರ ಬಿಡುಗಡೆ ಮಾಡಿದೆ.ಬುಧವಾರದ ಸಭೆಯಲ್ಲಿ ಆದಾಯ ಹೆಚ್ಚಳ ಕುರಿತಂತೆ ಚರ್ಚೆ ನಡೆಯುವ ನಿರೀಕ್ಷೆ ಇದೆ. ಕಳೆದ ವರ್ಷದ ನವೆಂಬರ್ ಗೆ ಹೋಲಿಸಿದರೆ ಈ ವರ್ಷದ ನವೆಂಬರ್ ನಲ್ಲಿ ಜಿ ಎಸ್ ಟಿ ಸಂಗ್ರಹ ಶೇಕಡ 5 ರಷ್ಟು ಏರಿಕೆ ಕಂಡಿದೆ. ಕಳೆದ ತಿಂಗಳ ಜಿ ಎಸ್ ಟಿ ಸಂಗ್ರಹ ಒಂದು ಲಕ್ಷದ ಮೂರು ಸಾವಿರ ಕೋಟಿ ರೂ ಗೂ ಹೆಚ್ಚಿದೆ.