ಜಿ.ಎಸ್.ರಾಮಚಂದ್ರಗೆ ಸನ್ಮಾನ

ಲೋಕದರ್ಶನವರದಿ

ರಾಣೇಬೆನ್ನೂರು ಜೂ.9: ಸ್ಥಳೀಯ ಯೂನಿಯನ್ ಬ್ಯಾಂಕ್ ಶಾಖಾ ವ್ಯವಸ್ಥಾಪ ಜಿ.ಎಸ್.ರಾಮಚಂದ್ರ ಸೇವಾ ನಿವೃತ್ತಿಗೊಂಡಿದ್ದು, ಅವರನ್ನು  ಹಾವೇರಿ ವಲಯ ಬ್ಯಾಂಕ್ ಸಿಬ್ಬಂದಿಗಳ ವತಿಯಿಂದ ದಂಪತಿ ಸಮೇತ ಸನ್ಮಾನಿಸಿ ಬಿಳ್ಕೊಡಲಾಯಿತು.  

   ಈ ಸಂದರ್ಭದಲ್ಲಿ ಮಾತನಾಡಿದ  ಜಿ.ಎಸ್.ರಾಮಚಂದ್ರ ಅವರು, ನೌಕರಿ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. 

  ಸಿಗುವುದು ಅಪರೂಪ ಸಿಕ್ಕ ಅವಕಾಶವನ್ನು ಬಳಸಿಕೊಂಡು ಜನಪರ ಕಾರ್ಯಗಳನ್ನು ಮಾಡುವುದೇ ನಿಜವಾದ ಧರ್ಮವಾಗಿದೆ ಎಂದರು.  

        ತಮ್ಮ ಸೇವಾ ಅವಧಿಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಮಾಡಿದ ತೃಪ್ತಿ ತಮಗಿದೆ ಎಂದ ಅವರು ಬಡವರು, ವ್ಯಾಪಾರಸ್ಥರು, ರೈತರಿಗೆ ಮತ್ತಿತರೆ ವರ್ಗದವರ ವರಮಾನ ತಕ್ಕಂತೆ ಸಾಲವನ್ನು ನೀಡಿ ಅವರು ಆಥರ್ಿಕವಾಗಿ ಪ್ರಗತಿ ಸಾಧಿಸಲು ಸಹಕಾರಿ ಎಂದರು. 

                  ವೇದಿಕೆಯಲ್ಲಿ  ಜಿಲ್ಲೆಯ ಎಲ್ಲ ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.