ವಾಲ್ಮೀಕಿ ಜಿಲ್ಲಾ ಉಪಾಧ್ಯಕ್ಷರಾಗಿ ಜಿ.ಎನ್.ವೀರೇಶ ಆಯ್ಕೆ
ಹೂವಿನಹಡಗಲಿ 25: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ವಿಜಯನಗರ ಜಿಲ್ಲಾ ಉಪಾಧ್ಯಕ್ಷರನ್ನಾಗಿ ವೀರೇಶ ಜಿ ಎನ್. ಆಯ್ಕೆ ಮಾಡಲಾಗಿದೆ. ಸಂಘಟನೆಯ ರಾಜ್ಯ ಮುಖಂಡರನ್ನು ಹಾಗೂ ಜಿಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಸಂಘಟನೆಯನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಿರೆಂದು ಆಶೀಸುತ್ತೇನೆ. ವಾಲ್ಮೀಕಿ ನಾಯಕ ಸಮುದಾಯದ ಸಂಘಟನೆ ಕಾರ್ಯಾದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯುವ ಘಟಕದ ಸಬಲೀಕರಣ, ಸಂಘಟನೆ ತೊಡಗಿಸಿಕೊಳ್ಳಿ ಎಂದು ವಾಲ್ಮೀಕಿ ಸಂಘಟನೆ ರಾಜ್ಯ ಅದ್ಯಕ್ಷರಾದ ಡಾ.ಟಿ.ಆರ್.ತುಳಸಿರಾಮ್.ಜಿಲ್ಲಾದ್ಯಕ್ಷರಾದ ಕಿರಣ ಗುಜ್ಜಲ್ ಆದೇಶ ಮಾಡಿದ್ದಾರೆ.