ತಾಳಿಕೋಟೆ 02: ಪ್ರಧಾನ ಮಂತ್ರಿ ಅವಾಸ ಯೋಜನೆ(ಹೌಸಿಂಗ್ ಫಾರ್ಆಲ್) ಹಾಗೂ ವಾಜಪೇಯಿ ವಸತಿ ಮತ್ತು ಡಾ.ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ತಾಳಿಕೋಟೆ ಪಟ್ಟಣಕ್ಕೆ 600 ಮನೆಗಳು ಮಂಜೂರಾಗಿದ್ದು ಕೇಂದ್ರ ಹಾಗೂ ರಾಜ್ಯ ಸಕರ್ಾರದಿಂದ ಅಧಿಕೃತ ಆದೇಶ ಕಳೆದ ಫೆಬ್ರವರಿ ತಿಂಗಳಲ್ಲಿ ಮಂಜೂರಾಗಿರುತ್ತದೆ ಎಂದು ಪುರಸಭಾ ಅಧ್ಯಕ್ಷೆ ಶ್ರೀಮತಿ ಅಕ್ಕಮಹಾದೇವಿ ಕಟ್ಟಿಮನಿ ಅವರು ತಿಳಿಸಿದ್ದಾರೆ.
ಸದರಿ ಮನೆಗಳನ್ನು ಜಿ ಪ್ಲಸ್ 1 ವಾದರಿಯಲ್ಲಿ ನಿಮರ್ಾಣ ಮಾಡುವ ಕುರಿತು ಪ್ರತಿ ಮನೆಗೆ 4 ಲಕ್ಷ 50 ಸಾವಿರ ರೂ.ಯುನಿಟ್ ಕಟ್ಟ ಇದ್ದು ಸದರಿ 4 ಲಕ್ಷ 50 ಸಾವಿರ ಪೈಕಿ 1 ಲಕ್ಷ 20 ಸಾವಿರ ರೂ.ಯು ಕೇಂದ್ರ ಸಕರ್ಾರದಿಂದ ಅನುದಾನ 1 ಲಕ್ಷ 50 ಸಾವಿರ ರೂ. ರಾಜ್ಯ ಸಕರ್ಾರದಿಂದ ಅನುದಾನ ಉಳಿದ 1 ಲಕ್ಷ 80 ಸಾವಿರ ರೂ. ಫಲಾನುಭವಿ ವಂತಿಗೆ ಹೀಗೆ ಒಟ್ಟು 4 ಲಕ್ಷ 50 ಸಾವಿರ ರೂ. ದಲ್ಲಿ ಮನೆಗಳನ್ನು ನಿಮರ್ಿಸಲು ಯೋಜನಾ ವರಧಿಗೆ ಮಂಜೂರಾತಿ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಆಯ್ಕೆಯಾದ ಫಲಾನುಭವಿಗಳು ರೂ. 1 ಲಕ್ಷ 80 ಸಾವಿರ ರೂ. ಪೈಕಿ ಮುಂಗಡವಾಗಿ 50 ಸಾವಿರ ರೂ.ಗಳನ್ನು ತುಂಬಬೇಕಾಗುವದು ಉಳಿದ 1 ಲಕ್ಷ 30 ಸಾವಿರ ರೂ. ಹಣವನ್ನು ಬ್ಯಾಂಕ್ ಮುಖಾಂತರ ಸಾಲಪಡೆದು ಹಣ ಹೊಂದಾಣಿಕೆ ಮಾಡಿ ಮನೆಗಳನ್ನು ನಿರ್ವಹಣೆ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಅದೇ ರೀತಿ ಈಗಾಗಲೇ 600 ಫಲಾನುಭವಿಗಳ ಆಯ್ಕೆಯನ್ನು ಈ ಹಿಂದಿನ ಅವಧಿಯಲ್ಲಿ ಆಗಿರುತ್ತದೆ ಈ 600 ಜನ ಫಲಾನುಭವಿಗಳ ಪೈಕಿ ಅಂದಾಜು ಇನ್ನೂರು ಫಲಾನುಭವಿಗಳು ವಂತಿಗೆ ತುಂಬಿರುತ್ತಾರೆ ಉಳಿದ ಫಲಾನುಭವಿಗಳ ಸಹ ಕೂಡಲೇ ವಂತಿಗೆ ತುಂಬಿದಲ್ಲಿ ಮನೆ ನಿಮರ್ಾಣ ಕುರಿತು ಮುಂದಿನ ಕ್ರಮ ಜರುಗಿಸಲಾಗುವದು ಎಂದು ಕಟ್ಟಿಮನಿ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪುರಸಭೆ ಮುಖ್ಯಾಧಿಕಾರಿಗಳನ್ನು ಸಂಪಕರ್ಿಸಿ ಅಗತ್ಯ ಮಾಹಿತಿ ಪಡೆಯಬಹುದಾಗಿದೆ ಎಂದು ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ ಅವರು ತಿಳಿಸಿದ್ದಾರೆ.