ಲೋಕದರ್ಶನವರದಿ
ಹರಪನಹಳ್ಳಿ,ಮೇ 18 : ಅನಿಷ್ಠ ದೇವದಾಸಿ ಪದ್ದತಿ ನಿಮೂರ್ಲನವಾಗಲು ಸಕರ್ಾರ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದ್ದು ಸಂಘ ಸಂಸ್ಥೆಗಳ ನೆರವಿಂದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿಯ ಸಾರ್ಮಥ್ಯ ಸೌಧದಲ್ಲಿ ಅಜೀಮ್ ಪ್ರೇಮಜೀ ಅವರ ಪ್ರಯೋಜಿತದಲ್ಲಿ ಸೀಡ್ಸ್ ಸಂಸ್ಥೆ ಸೋಮವಾರ ಹಮ್ಮಿಕೊಂಡಿದ್ದ ದಮನಿತ ದೇವದಾಸಿ ಮಹಿಳೆಯರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಅನಕ್ಷರಸ್ಥರು ಹಾಗೂ ಅಥರ್ಿಕವಾಗಿ ಹಿಂದುಳಿದವರಲ್ಲೇ ಈ ಅನಿಷ್ಠ ಪದ್ದತಿ ರೂಡಿಯಲ್ಲಿದೆ. ರಾಜ್ಯ ಸಕರ್ಾರ ಮಾಜಿ ದೇವದಾಸಿ ಮಹಿಳೆಯರಿಗೆ ಮಾಶಾಸನ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಸಮಾಜದ ಮುಖಿವಾಹಿನಿಗೆ ಇಂತಹ ಮಹಿಳೆಯರು ಆಗಮಿಸಿ ಜೀವನ ಸಾಗಿಸಲು ಸಕರ್ಾರ ಕಾರ್ಯಕ್ರಮಗಳನ್ನು ರೂಪಿಸಿದೆ.
ಕೊರೊನಾ ವೈರಸ್ ದಾಳಿಯ ಭೀತಿಯಿಯಲ್ಲಿರುವ ಇಂತಹ ಮಹಿಳೆಯರಿಗೆ ಸೀಡ್ಸ್ ಸಂಸ್ಥೆ ನೆರವು ನೀಡುತ್ತಿರುವುದು ಒಳ್ಳೆಯದು ಎಂದರು.
ಸೀಡ್ಸ ಸಂಸ್ಥೆಯ ಸಂಚಾಲಕ ಸಂಜೀವಯ್ಯ ಮಾತನಾಡಿ, ಪಟ್ಟಣದ 48 ಮಹಿಳೆಯರು ಸೇರಿದಂತೆ ತಾಲ್ಲೂಕಿನಲ್ಲಿ 656 ಮಹಿಳೆಯರನ್ನು ಗುರುತಿಸಲಾಗಿದ್ದು ಪ್ರತಿಯೊಬ್ಬರಿಗೂ ದಿನಸಿ ಕಿಟ್ ನೀಡುತ್ತಿದ್ದೇವೆ. ರೂ.1200ಕ್ಕೂ ಅಧಿಕ ಮೊತ್ತದ ಬೇಳೆ, ಗೋದಿಹಿಟ್ಟು, ಸಕ್ಕರೆ, ಜೋಳ, ಸೋಪು, ಸಾಂಬರ ಪುಡಿ, ಬಿಸ್ಕತ್ ಸೇರಿರುವ ಒಂದು ಕಿಟ್ನ್ನು ನೀಡುತ್ತಿದ್ದೇವೆ. ತಾಲ್ಲೂಕಿನಲ್ಲಿರುವ ಪತ್ರಿಯೊಬ್ಬರಿಗೆ ಅವರ ಗ್ರಾಮಗಳಿಗೆ ತೆರಳಿ ವಿತರಿಸಲಿದ್ದೇವೆ ಎಂದರು.
ಕನರ್ಾಟಕ ರಾಜ್ಯ ದೇವದಾಸಿ ವಿಮೋಚನ ಸಂಘದ ರಾಜ್ಯಾಧ್ಯಕ್ಷೆ ಟಿ.ವಿ.ರೇಣುಕಮ್ಮ, ಸಂಯೋಜನಾಧಿಕಾರಿ ಟಿ.ಪ್ರಜ್ಞಾ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಮುಖಂಡರಾದ ಸಣ್ಣ ಹಾಲಪ್ಪ, ರಾಘವೇಂದ್ರಶೆಟ್ಟಿ, ನಾಗರಾಜ ಜೈನ್, ಸಂತೋಷ್, ಲೊಕೇಶ್, ಎಸಿ ಪ್ರಸನ್ನಕುಮಾರ ವಿ.ಕೆ., ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ತಹಶೀಲ್ದಾರ ಡಾ.ನಾಗವೇಣಿ, ಸಿಪಿಐ ಕೆ.ಕುಮಾರ ಹಾಗೂ ಇತರರು ಭಾಗವಹಿಸಿದ್ದರು.