ರಾಷ್ಟ್ರಪತಿ, ಪ್ರಧಾನಿ ಅಂತಿಮ ನಮನ, ಮಧ್ಯಾಹ್ನ ಅಂತ್ಯಕ್ರಿಯೆ

ನವದೆಹಲಿ ಆ 7 (ಯುಎನ್ಐ ) ಅಗಲಿದ ಮಾಜಿ ಕೇಂದ್ರ   ಸಚಿವೆ ಸುಷ್ಮಾ ಸ್ವರಾಜ್ ಅವರ ನಿವಾಸಕ್ಕೆ ಬುಧವಾರ ರಾಷ್ಟ್ರಪತಿ  ರಾಂನಾಥ್ ಕೋವಿಂದ್,  ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು  ಪ್ರಧಾನಿ  ನರೇಂದ್ರ ಮೋದಿ ಮತ್ತು  ದೆಹಲಿ ಮುಖ್ಯಮಂತ್ರಿ  ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ  ಗಣ್ಯರು  ಭೇಟಿ  ನೀಡಿ ಅಂತಿಮ ನಮನ ಸಲ್ಲಿಸಿದರು.  

ಅವರ ಕಳೆಬರಹವನ್ನು ನಿವಾಸದಲ್ಲಿ  11 ಗಂಟೆಯವರೆಗೆ ಇಡಲಾಗುವುದು  ನಂತರ ಪಕ್ಷದ ಕೇಂದ್ರ ಕಚೇರಿಗೆ  ತಂದು   ಕಾರ್ಯಕರ್ತರು ಮತ್ತು ಮುಖಂಡರಿಗೆ ಗೌರವ ಸಲ್ಲಿಸಲು ಅವಕಾಶ   ಮಾಡಿಕೊಡಲಾಗುವುದು ಎಂದು ಪಕ್ಷದ ಕಾರ್ಐದ್ಯಕ್ಷ  ಜೆ ಪಿ ನಡ್ಡಾ ಹೇಳಿದ್ದಾರೆ . 

ನಂತರ  ಮಧ್ಯಾಹ್ನ 3 ಗಂಟೆಗೆ ಲೋಧಿ ಶವಾಗಾರದಲ್ಲಿ  ಸಕಲ ಸರ್ಕರಿ ಗೌರವಗಳೊಂದಿಗೆ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ.