ಪಂಚಭೂಗಳಲ್ಲಿ ಲೀನರಾದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ

Funeral of former Chief Minister SM Krishna

ಬೆಂಗಳೂರು 11: ಬೆಂಗಳೂರು ಕನಸುಗಾರ ಎಂದು ಪ್ರಸಿದ್ಧಿ ಪಡೆದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಅಂತ್ಯ ಸಂಸ್ಕಾರವನ್ನು ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಸಕಲ ಸಕರ್ಾರಿ ಗೌರವಗಳೊಂದಿಗೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿಸಲಾಯಿತು. ಮೊಮ್ಮಗ ಅಮತ್ರ್ಯ ಹೆಗ್ಡೆ ಚಿತೆಗೆ ಅಗ್ನಿಸ್ಪರ್ಶ ನೀಡಿದರು.

ಮೂರು ಸುತ್ತು ಕುಶಾಲ ತೋಪು ಸಿಡಿಸಿ ಗೌರವ ನಮನ ಸಲ್ಲಿಸಲಾಯಿತು. ಸಿಎಂ ಸಿದ್ಧರಾಮಯ್ಯ ಸೇರಿ ಗಣ್ಯರು ಗೌರವ ನಮನ ಸಲ್ಲಿಸಿದರು.

ಅಂತ್ಯಕ್ರಿಯೆಗೆ 1000ಕೆಜಿ ಗಂಧದ ಕಟ್ಟಿಗೆ ಹಾಗೂ 300ಕೆ.ಜಿ ಬಗೆಬಗೆಯ ಹೂವುಗಳು ಹಾಗೂ 50ಕೆ.ಜಿ ತುಪ್ಪ ಬಳಕೆ ಮಾಡಲಾಗಿದೆ.