ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

ಕಾಗವಾಡ:

ಮಂಗಸೂಳಿ ಗ್ರಾಮದ ದಲಿತ ಕುಟುಂಬದಲ್ಲಿ ಜನಿಸಿದ ವಿಕ್ರಮ ಪರಶುರಾಮ ಭಂಡಾರೆ(31) ದಾರ್ಜಿಲಿಂಗ(ಸಿಲಿಗುಡ)ದಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕ ಅನಾರೋಗ್ಯದಿಂದ ನಿಧನ ಹೊಂದರು. ಇಂದು ಹುಟ್ಟೂರ ಮಂಗಸೂಳಿಯಲ್ಲಿ ಅಂತ್ಯಯಾತ್ರೆ ಹಮ್ಮಿಕೊಂಡು ಸಾವಿರಾರು ಗ್ರಾಮಸ್ಥರಿಂದ ಶ್ರದ್ಧಾಂಜಲಿ ಸಲ್ಲಿಸಿ, ಅಂತ್ಯಕ್ರೀಯೆ ಮಾಡಿದರು.

ಶುಕ್ರವಾರರಂದು ದಾರ್ಜಿಲಿಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಸೈನಿಕ ವಿಕ್ರಮ ಭಂಡಾರೆ ಅನಾರೋಗ್ಯದಿಂದ ನಿಧನ ಹೊಂದರು. ಅವರ ಶವ ಮಂಗಸೂಳಿಯಲ್ಲಿ ರವಿವಾರರಂದು ತೆಗೆದುಕೊಂಡು ಬಂದ ಬಳಿಕ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಬಿ.ಎಸ್.ಎಫ್. ಸೈನಿಕರು, ಕಾಗವಾಡ, ಅಥಣಿ ಪೊಲೀಸ್ ಇಲಾಖೆ ವತಿಯಿಂದ ಡಿವೈಎಸ್ಪಿ ಗಿರೀಶ, ಇತರ ಅಧಿಕಾರಿಗಳು, ಪೊಲೀಸ್ರು ಗೌರವಂದನೆ ಸಲ್ಲಿಸಿದರು.

ಅಥಣಿ ಎಪಿಎಂಸಿ ಅಧ್ಯಕ್ಷ ರವೀಂದ್ರ ಪೂಜಾರಿ, ಗ್ರಾಮ ಪಂಚಾಯತಿ ಅಧ್ಯಕ್ಷ ಅಮರ ಪಾಟೀಲ, ಎಲ್ಲ ಸದಸ್ಯರು, ಗ್ರಾಮಸ್ಥರು ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ತೆರೆದ ವಾಹನದಿಂದಗ್ರಾಮದ ಪ್ರಮುಖ ಬಿದಿಗಳಿಂದ ಅಂತ್ಯಯಾತ್ರೆಕೈಗೊಂಡರು.ಈ ವೇಳೆ ಎಲ್ಲ ಸಮಾಜದವರು ದೇಶ ರಕ್ಷಣಕ್ಕಾಗಿ ನಮ್ಮಗ್ರಾಮದಯುವಕ ಶಹಿದನಾಗಿದ್ದರಿಂದ "ವಿಕ್ರಮ ಭಂಡಾರೆ ಅಮರರ ಹೇ" ಎಂದು ಘೋಷಣೆ ಕೂಗಿದರು. ಸಂಪೂರ್ಣ ದಿನನಿತ್ಯದ ವ್ಯವಹಾರ ಸ್ಥಗೀತಗೊಳಿಸಿ ಗ್ರಾಮದಿಂದ ಶ್ರದ್ಧಾಂಜಲಿ ಸಲ್ಲಿಸಿದರು.

ಮಂಗಸೂಳಿ ಗ್ರಾಮದ ಮುಖಂಡರು, ಅಥಣಿ ಎಪಿಎಂಸಿ ಅಧ್ಯಕ್ಷ ರವೀಂದ್ರ ಪೂಜಾರಿ ಮಾತನಾಡುವಾಗ, ವಿಕ್ರಮ ಭಂಡಾರೆ ಬಡ ಕುಟುಂಬದಲ್ಲಿ ಜನಿಸಿ, ದೇಶದ ರಕ್ಷಣೆಗಾಗಿ ಹೋದ ನಮ್ಮ ಯುವಕ ಶಹಿದನಾಗಿದ್ದಾನೆ. ಸಂಪೂರ್ಣ ಗ್ರಾಮದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಹೇಳಿ, ಸನ್ 2004 ರಿಂದ ಬಿ.ಎಸ್.ಎಫ್ ವತಿಯಿಂದ ನಿವೃತ್ತಿ ನಂತರ ನೀಡುವ ಪೆನಶೆನ್ ಸ್ಥಗೀತಗೊಳಿಸಿದ್ದಾರೆ. ಈ ಕುಟುಂಬ ಸಂಕಷ್ಟದಲ್ಲಿ ಸಿಲುಕುತ್ತಿದೆ. ಈ ಕಾರಣ ಸರ್ಕಾರ ಅವರ ಪತ್ನಿಗೆ ಸೇವೆಯಲ್ಲಿ ತೆಗೆದುಕೊಳ್ಳಬೇಕು ಮತ್ತು ಸಹಾಯ ನೀಡಬೇಕೆಂದು ಕೇಳಿಕೊಂಡರು.

ಮಂಗಸೂಳಿ ಗ್ರಾಮದಲ್ಲಿ ಮುಖಂಡರು, ಜಿಲ್ಲೆಯ ದಲಿತ ಒಕ್ಕುಟ ಸಮೀತಿ ಸಂಚಾಲಕ ಸಂಜಯ ತಳವಲಕರ ಮಾತನಾಡುವಾಗ, ಗ್ರಾಮದ ಎಲ್ಲ ಸಮಾಜದವರು ಶಹೀದ ವಿಕ್ರಮ ಭಂಡಾರೆ ಈತನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ಕುಟುಂಬ ಸಮಸ್ಯೆಯಲ್ಲಿದ್ದು ರಾಜ್ಯ ಸರ್ಕಾರ ಮತ್ತು ನೂತನ ಸಚಿವ ಶ್ರೀಮಂತ ಪಾಟೀಲ ಹೆಚ್ಚಿನ ಗಮನ ಹರಿಸಿ, ಈ ಯೋಧನ ಮನೆಗೆ ಸಹಾಯ, ಸಹಕಾರ ನೀಡಬೇಕೆಂದರು.

ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಅಮರ ಪಾಟೀಲ, ಮಾಜಿ ಅಧ್ಯಕ್ಷರಾದ ಚಿದಾನಂದ ಮಾಳಿ, ಬಾಬಾಸಾಹೇಬ ಪಾಟೀಲ, ಇನ್ನೂಳಿದ ಗ್ರಾಪಂ ಸದಸ್ಯರು, ಪಿಕೆಪಿಎಸ್ ಸದಸ್ಯರು, ಸಮಾಜದ ಮುಖಂಡರು, ಶಹಿದ ಜವಾನನ ಕುಟುಂಬದವರು ಪಾಲ್ಗೊಂಡಿದ್ದರು. ಶಹಿದ ಜವಾನ ವಿಕ್ರಮ ಭಂಡಾರೆ ಈತನಿಗೆ 4 ವರ್ಷದ ಪುತ್ರ, ತಂದೆ, ತಾಯಿ, ಪತ್ನಿ, ಓರ್ವ ಸಹೋದರ ಇದ್ದು, ಈ ಘಟಣೆಯಿಂದ ಶೋಕ್ ವ್ಯಕ್ತಪಡಿಸುತ್ತಿದ್ದರು.