ಕಾಳಿನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಅಂತ್ಯಸಂಸ್ಕಾರ


ಲೋಕದರ್ಶನ ವರದಿ

ಹಳಿಯಾಳ 18: ಸೋಮವಾರ ಸಂಜೆ ತಮ್ಮ ಗ್ರಾಮದ ಪಕ್ಕದ ಕಾಳಿನದಿ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಬೊಮ್ಮನಳ್ಳಿ ಗ್ರಾಮದ ಒಂದೇ ಕುಟುಂಬದ ನಾಲ್ವರ ಮೃತ ಶರೀರಗಳು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನೀರಿನಿಂದ ಹೊರತೆಗೆದು ಮೃತರ ಅಂತ್ಯಕ್ರಿಯೆಯು ಮಂಗಳವಾರ ಸಂಜೆ ನೆರವೇರಿತು.

ಕಾಳಿನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನೀರಿನಲ್ಲಿ ಮುಳುಗುತ್ತಿದ್ದ ರಾಮಿಬಾಯಿ ಧೂಳು ಗಾವಡೆ ಇವರನ್ನು ಮೇಲೆತ್ತಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರಿಗೆ ಆಹುತಿಯಾದರೆ ರಾಮಿಬಾಯಿ ಅದೃಷ್ಟವಶಾತ್ ಬದುಕಿದಳು. ಆಳದ ನೀರಿನಡಿಯ ಕಲ್ಲುಗಳ ಸಂದಿಗಳಡಿ ಸಿಕ್ಕಿಹಾಕಿಕೊಂಡು ಮೃತರ ಶರೀರಗಳನ್ನು ಹೊರತೆಗೆಯಲು ಮಧ್ಯರಾತ್ರಿಯವರೆಗೆ ವಿಶೇಷ ಕಾಯರ್ಾಚರಣೆ ನಡೆಯಿತು. ಹಳಿಯಾಳ ಸಿಪಿಐ ಬಿ.ಎಸ್. ಲೋಕಾಪುರ ಅವರು ತಮ್ಮ ಸಿಬ್ಬಂದಿಗಳು ಹಾಗೂ ತುತರ್ುಸೇವೆ ಇಲಾಖೆಯವರು, ದಾಂಡೇಲಿಯ ಮುಳುಗುತಜ್ಞ ಈಜುಪಟುಗಳೊಂದಿಗೆ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ದಾಂಡೇಲಿ ಡಿವೈಎಸ್ಪಿ ಮೋಹನ ಪ್ರಸಾದ ಇವರು ಕೂಡ ಅಲ್ಲಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದರು.

ಕುಟುಂಬದ ಆಧಾರಸ್ಥಂಭವಾಗಿದ್ದ ತಂದೆ ಧೂಳು ಗಾವಡೆ (48), ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಆತನ ಇಬ್ಬರು ಮಕ್ಕಳಾದ ಗಾಯತ್ರಿ (9), ಕೃಷ್ಣಾ (7) ಹಾಗೂ ಸಹೋದರ ಬೀರು ಈತನ 7 ವರ್ಷದ ಮಗ ಸತೀಶ ಹೀಗೆ ಒಟ್ಟು ನಾಲ್ವರ ಸಾವು ಕಂಡು ಇಡೀ ಗ್ರಾಮಸ್ಥರು ಮಮ್ಮಲ ಮರುಗಿದರು. ಬೊಮ್ಮನಳ್ಳಿ ಊರಿನ ಜನತೆ ಹಾಗೂ ನತದೃಷ್ಟ ಕುಟುಂಬದ ಸಂಬಂಧಿಕರು ಜೊತೆಗೂಡಿ ಧಾಮರ್ಿಕ ವಿಧಿ-ವಿಧಾನಗಳೊಂದಿಗೆ ಅಂತಿಮ ಸಂಸ್ಕಾರವನ್ನು ನೆರವೇರಿಸಿ ಕಣ್ಣೀರಿನ ವಿದಾಯ ನೀಡಿದರು.

  ಸಂತ್ರಸ್ತ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಯೋಗ್ಯ ಪರಿಹಾರ ಕೊಡಿಸಲಾಗುವುದು. ಇದು ನಮ್ಮ ಆದ್ಯ ಕರ್ತವ್ಯವಾಗಿದ್ದು ಅದನ್ನು ನಿಭಾಯಿಸಲಾಗುತ್ತದೆ.

ಈ ದುರ್ಘಟನೆಯ ಸಂದರ್ಭದಲ್ಲಿ ಪಕ್ಕದ ಕೇಗದಾಳ ಗ್ರಾಮದ ಡುಮಿಂಗ್ ಜುಜೆ ಸಿದ್ಧಿ ಇವರು ತಕ್ಷಣ ಕಾರ್ಯಪ್ರವೃತ್ತರಾದರು. ಮುಳುಗುತ್ತಿದ್ದ ರಾಮಿಬಾಯಿ ಧೂಳು ಗಾವಡೆ ಇವರನ್ನು ನೀರಿನಿಂದ ಬೇಗನೆ ಹೊರತೆಗೆದು ಬದುಕಿಸುವಲ್ಲಿ ಯಶಸ್ವಿಯಾಗಿದ್ದು ಈ ಬಗ್ಗೆ ಡುಮಿಂಗ್ ಅವರ ಕಾರ್ಯವನ್ನು ಸಚಿವ ಆರ್.ವಿ. ದೇಶಪಾಂಡೆ ಶ್ಲಾಘಿಸಿದರು.

ಬೊಮ್ಮನಳ್ಳಿ ಗ್ರಾಮಸ್ಥರು ತಮ್ಮ ಗ್ರಾಮದ ಪಕ್ಕದಲ್ಲಿಯೇ ಇರುವ ಕಾಳಿನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ಅಪಾಯಕಾರಿ ನೀರಿನಲ್ಲಿ ಅವಘಡ ಸಂಭವಿಸುವ ಘಟನೆಗಳು ಮತ್ತೊಮ್ಮೆ ಸಂಭವಿಸಬಾರದು. 

ಹೀಗಾಗಿ ನದಿಯ ಪಕ್ಕದಲ್ಲಿ ಬಟ್ಟೆ ತೊಳೆಯುವ ಹಾಗೂ ಅದಕ್ಕೆ ಅವಶ್ಯಕ ನೀರಿನ ವ್ಯವಸ್ಥೆ ಮಾಡಲು ಸೂಕ್ತ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ಸಚಿವ ಆರ್.ವಿ. ದೇಶಪಾಂಡೆಯವರು ಅಲ್ಲಿಗೆ ಬಂದಿದ್ದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ, ಉಪವಿಭಾಗಾಧಿಕಾರಿ ಅಭಿಜಿನ್ ಇವರಿಗೆ ಸೂಚಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲಕೃಷ್ಣ ಬ್ಯಾಕೋಡ್, ತಹಶೀಲ್ದಾರ ವಿದ್ಯಾಧರ ಗುಳಗುಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರಅಹ್ಮದ ಮುಲ್ಲಾ, ತಾಲೂಕ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಡಾ. ಮಹೇಶ ಕುರಿಯವರ, ಸಿಪಿಐ ಬಿ.ಎಸ್. ಲೋಕಾಪುರ ಇದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೋವರ್ೆಕರ, ಆ ಭಾಗದ ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣಾ ಪಾಟೀಲ, ತಾಲೂಕ ಪಂಚಾಯತ ಸದಸ್ಯೆ ಜಯಶ್ರೀ ಗಾವಡೆ, ಭಾಗವತಿ ಗ್ರಾಮ ಪಂಚಾಯತ ಅಧ್ಯಕ್ಷ ರಾಮಚಂದ್ರ ಬುಲರ್ಿ, ಪ್ರಮುಖರಾದ ಬೊಮ್ಮು ಎಡಗೆ, ಅಂಬಿಕಾನಗರ ಗ್ರಾಮ ಪಂಚಾಯತಿಯ ಅಧ್ಯಕ್ಷ ಜಾನು ಕೊಕರೆ ಮೊದಲಾದವರು ಹಾಜರಿದ್ದರು.

ಸಚಿವ ಆರ್ ವಿ ದೇಶಪಾಂಡೆ ಭೇಟಿ, ಸಾಂತ್ವನ

ಕಂದಾಯ ಸಚಿವರಾದ ಕ್ಷೇತ್ರದ ಶಾಸಕ ಆರ್.ವಿ. ದೇಶಪಾಂಡೆಯವರು ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯಿಂದ ಮಂಗಳವಾರ ಬೆಳಿಗ್ಗೆ ಧಾವಿಸಿ ಬಂದು ಬೊಮ್ಮನಳ್ಳಿಗೆ ತೆರಳಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಘಟನೆ ನನ್ನ ಮನಸ್ಸಿಗೆ ಅತ್ಯಂತ ನೋವು ಹಾಗೂ ಆಘಾತ ತಂದಿದೆ. ಇಂತಹ ದುರ್ಘಟನೆಗಳು ಯಾರ ಜೀವನದಲ್ಲಿಯೂ ಸಹ ಬರಬಾರದು. ಗೌಳಿ ಸಮುದಾಯದ ಬಡ ಕುಟುಂಬದ ಯಜಮಾನ ಹಾಗೂ ಆತನ ಮಕ್ಕಳ ಸಾವು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ. ಈ ದುಃಖವನ್ನು ಭರಿಸುವ ಶಕ್ತಿ ಆ ಕುಟುಂಬಕ್ಕೆ ಭಗವಂತನು ದಯಪಾಲಿಸಲಿ ಎಂದರು.