ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನುದಾನ

ಲೋಕದರ್ಶನ ವರದಿ

ಶಿರಹಟ್ಟಿ 12: ಸಮಾಜದಲ್ಲಿನ ಜನರಿಗೆ ಪಾರಂಪರಿಕ ಜಾಗೃತಿ ಮೂಡಿಸಲು ದೇವಸ್ಥಾನಗಳ ಅಭಿವೃದ್ಧಿ ಅಗತ್ಯವಿದೆ ಎಂದು ಜಿಲ್ಲಾ ನಿರ್ದೇಶಕರಾದ ಶಿವಾನಂದ ಆಚಾರ್ಯ ತಿಳಿಸಿದರು. ಹೊಸೂರು ಗ್ರಾಮದ ಈಶ್ವರ ದೇವಸ್ಥಾನಕ್ಕೆ ಧರ್ಮಸ್ಥಳ ಯೋಜನೆಯ ಪೂಜ್ಯ ವೀರೇಂದ್ರ ಹೆಗ್ಗಡೆಯವರು ರೂ.50000/- ಡಿ.ಡಿ ವಿತರಿಸಿ ಪ್ರಸ್ತುತ ದಿನ ಟಿ.ವ್ಹಿ, ಮೊಬೈಲ್ಗಳಿಂದಾಗಿ ಮಕ್ಕಳಲ್ಲಿ ಭಕ್ತಿ, ನಂಬಿಕೆ, ತಾಳ್ಮೆಯ ಕೊರತೆಎದ್ದುಕಾಣುತ್ತದೆ. ಇದನ್ನು ಸರಿ ದೂಗಿಸಿಕೊಂಡು ಹೋಗಲು ಪಾರಂಪರಿಕವಾಗಿ ಬಂದಿರುವ ಭಜನೆ, ಜ್ಞಾನ ಇವುಗಳ ಅರಿವನ್ನು ಮೂಡಿಸಲು ಪ್ರತಿಗ್ರಾಮದಲ್ಲಿ ಸ್ವಚ್ಛ, ದೇವಸ್ಥಾನದ ಅಭಿವೃದ್ಧಿಅವಶ್ಯಕತೆ ಇದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಶಿವಪ್ರಕಾಶ ಮಹಾಜನ್ಶೆಟ್ಟರ್ ನಿಕಟ ಪೂರ್ವ ಅಧ್ಯಕ್ಷ ಜಿಲ್ಲಾಜನ ಜಾಗೃತಿ ವೇದಿಕೆ ಗದಗ ಇವರು ಮಾತನಾಡಿ ಪೂಜ್ಯವೀರೇಂದ್ರ ಹೆಗ್ಗಡೆಯವರು ಕೆರೆ ಅಭಿವೃದ್ಧಿ, ದೇವಸ್ಥಾನ ಅಭಿವೃದ್ಧಿ, ಸ್ವಉದ್ಯೋಗದ ಅಭಿವೃದ್ಧಿಗಳಿಗೆ ವಿಶೇಷ ಗಮನ ಹರಿಸುವುದನ್ನು ನೋಡಿದರೆ ಸರಕಾರ ಮಾಡಬೇಕಾದ ಕೆಲಸವನ್ನು ಪೂಜ್ಯರು ಮಾಡಿಸುತ್ತಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಶಿವಣ್ಣ ಎಸ್, ಊರಿನಗಣ್ಯರು, ಗ್ರಾಮ ಪಂಚಾಯತ ಸದಸ್ಯರಾದ ಕೆಂಪಯ್ಯರವರು ಮತ್ತು ದೇವಸ್ಥಾನದ ಕಮೀಟಿಯವರು ಭಾಗವಹಿಸಿದ್ದರು.