ಪ್ರಜೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದ ಆದ್ಯ ಕರ್ತವ್ಯ: ನಿಶಾನಿ

ಲೋಕದರ್ಶನವರದಿ

ರಾಣೇಬೆನ್ನೂರು 10: ರಾಜ್ಯದ ಸವರ್ಾಂಗೀಣ ಅಭಿವೃದ್ದಿಯ ಜೊತೆಗೆ ನಾಗರೀಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು.  ಪ್ರಜೆಗಳ ಸೇವೆ ಮಾಡಿ ಅವರುಗಳ ಋಣ ತೀರಿಸುವುದು, ರೈತ ಮತ್ತು ಬಡವರ ಏಳ್ಗೆಗೆ ಶೃಮಿಸುವುದು. 

 ಮತದಾನದ ಸಂದರ್ಭದಲ್ಲಿ ಹಣದಾಸೆ ಬಿಟ್ಟು ಮತದಾರರಿಗೆ ನಿಯತ್ನಿಂದ ಮತದಾನ ಮಾಡಲು ಜಾಗೃತಿ ಮೂಡಿಸುವ ಧ್ಯೇಯವನ್ನು ಹೊತ್ತು ಅಸ್ತಿತ್ವಕ್ಕೆ ತರಲಾಗುತ್ತಿರುವ ಕನರ್ಾಟಕ ನಿಯತ್ ಪಕ್ಷ [ಕೆ.ಎನ್.ಪಿ]ಕ್ಕೆ ಮುಂದಿನ ದಿಮಾನಗಳಲ್ಲಿ ಉಜ್ವಲ ಭವಿಷ್ಯವಿದೆ ಎಂದು ಪಕ್ಷದ ಕಾನೂನು ಸಲಹೆಗಾರ ಹಾಗೂ ಸುಪ್ರಿಂಕೋಟರ್್ ನ್ಯಾಯವಾದಿ  ಅನಿಲ್ ನಿಶಾನಿ  ಹೇಳಿದರು.

    ಸೋಮವಾರ  ನಗರದ ನೇಕಾರ ಕಾಲೋನಿಯಲ್ಲಿ ಗುರುಲಿಂಗ ಜಂಗಮ ರಾಜನಾರಾಯಣಸ್ವಾಮಿ ಹಾಗೂ ಕಾಶಿ ದೇವಸ್ಥಾನದ ಆವರಣದಲ್ಲಿ ಕನರ್ಾಟಕ ನಿಯತ್ ಪಕ್ಷದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಾಜ್ಯದಲ್ಲಿ ಸದ್ಯ ಪ್ರಾದೇಶಿಕ ಪಕ್ಷಗಳ ಅವಶ್ಯಕತೆಯಿದೆ.

     ಕೆಎನ್ಪಿಗೆ ಅಧಿಕೃತ ಪಕ್ಷವೆಂದು ಘೋಷಿಸಲು ಎಲ್ಲ ಪ್ರಕ್ರಿಯೆಗಳು ಚುನಾವಣಾ ಆಯೋಗದಲ್ಲಿ ನಡೆಯುತ್ತಿವೆ. ಶೀಘ್ರವೇ ಈ ಪಕ್ಷಕ್ಕೆ ರಾಜಕೀಯದ ಮಾನ್ಯತೆ ದೊರೆಯಲಿದೆ ಎಂದರು.

   ಅಧ್ಯಕ್ಷತೆ ವಹಿಸಿದ್ದ ಕನರ್ಾಟಕ ನಿಯತ್ ಪಕ್ಷದ  ಅಧ್ಯಕ್ಷ ಚಂದ್ರಶೇಖರಯ್ಯ ಕುಲಕಣರ್ಿ(ಕನವಳ್ಳಿಮಠ) ಮಾತನಾಡಿ ಪ್ರಜೆಗಳಿಗೋಸ್ಕರ ದುಡಿಯವ ಸಲುವಾಗಿ ಈ ಪಕ್ಷ ಅಸ್ತಿತ್ವಕ್ಕೆ ಬರಲಿದೆ. 

   ರೈತರ ಕಷ್ಟ ನೋವುಗಳನ್ನು ಯಾವುದೇ ಸಕರ್ಾರ ಇವರೆಗೂ ಬಗೆಹರಿಸುತ್ತಿಲ್ಲ, ರೈತರು ಅನೇಕ ಸಮಸ್ಯೆಗಳನ್ನು ಅನುಭವಿಸಿ ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 

  ಉಭಯ ಸಕರ್ಾರಗಳು  ರೈತರ ಬಗೆಗೆ ಸ್ವಂದಿಸುತ್ತಿಲ್ಲ ಎಂದು ವಿಷಾಧಿಸಿದರು.

    ಸುಪ್ರಿಕೋಟರ್್ ನ್ಯಾಯವಾದಿ ಅನಿಲ ಕಾತರಕಿ,  ಉಪಾಧ್ಯಕ್ಷ ಪ್ರಕಾಶ ಮಡಿವಾಳರ, ಶಾಂತಯ್ಯ ಹಿರೇಮಠ, ರೇವಣಪ್ಪ ಕುರುಬರ, ಮಲ್ಲಯ್ಯ ಹಿರೇಮಠ, ಬಸವರಾಜ ಮರಿಯಾನಿ, ಕೊಟ್ರೇಶ ತೊಗಸರ್ಿಮಠ, ಗಂಗಣ್ಣ ಮಡಿವಾಳರ, ಬಸವಣ್ಣೆಪ್ಪ ಅಂಗಡಿ, ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತಿತರು ಇದ್ದರು.