ವಿವಿಧ ಅಭಿವೃದ್ಧಿಗೆ ಅಡತಡೆ ಇಲ್ಲದೇ ಕಾರ್ಯ: ಮ್ಯಾಗೇರಿ

ಲೋಕದರ್ಶನವರದಿ

ಶಿಗ್ಗಾವಿ04 : ತಾಲೂಕಿನ ಗಂಗ್ಯಾನೂರ ಗ್ರಾಮವನ್ನು ಹೊಸ ಗ್ರಾಮವನ್ನಾಗಿ ನಿಮರ್ಾಣ ಮಾಡುವ ನಿಟ್ಟಿನಲ್ಲಿ ವಿವಿಧ ಗ್ರಾಮಗಳ ಸವರ್ಾಂಗೀಣ ಅಭಿವೃದ್ಧಿ ಮತ್ತು ತಾಲೂಕಿನ ಕ್ಷೇತ್ರದ ವಿವಿಧ ಅಭಿವೃದ್ದಿಗೆ ಅಡತಡೆ ಇಲ್ಲದೇ ಕಾರ್ಯಗಳಾಗುತ್ತಿವೆ ಎಂದು ಬಿಜೆಪಿ ತಾಲೂಕಾದ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.

ತಾಲೂಕಿನ ಗಂಗ್ಯಾನೂರ ಗ್ರಾಮದಲ್ಲಿ ಎಸ್ಸಿಪಿ ಟಿಎಸ್ಪಿ ಯೋಜನೆ ಅಡಿಯ ಲೋಕೊಪಯೋಗಿ ಇಲಾಖೆಯ ವತಿಯಿಂದ 19 ಲಕ್ಷ ರೂ ಗಳಲ್ಲಿ ನಿಮರ್ಾಣವಾಗುತ್ತಿರುವ ಸಿ ಸಿ ರಸ್ತೆ ಮತ್ತು ಗ್ರಾಮದ ಅಗಟಾರದ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ನಂತರ ನಡೆದ ಗ್ರಾಮದ ಸರಕಾರಿ ಶಾಲೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 235 ಮೀಟರ್ ಸಿ ಸಿ ರಸ್ತೆ ಯನ್ನು ನಿಮರ್ಿಸಲಾಗುತ್ತಿದ್ದು ಅಭಿವೃದ್ದಿಗೆ ಎಂದೂ ನಿಲುಗಡೆ ಇಲ್ಲದಂತೆ ಕ್ಷೇತ್ರದ ಶಾಸಕರಾದ ಬಸವರಾಜ ಬೊಮ್ಮಾಯಿಯವರು ಕಂಕಣಬದ್ದರಾಗಿದ್ದಾರೆ ಅವರ ಕ್ಷೇತ್ರಕ್ಕೆ ಕೊಟ್ಟ ಒತ್ತು ರಾಜ್ಯದ ಎಲ್ಲ ಜಿಲ್ಲೆಗೂ ಸಹಿತ ನೀಡುವ ನಿಟ್ಟಿನಲ್ಲಿ ಕಾಯರ್ೋನ್ಮುಖವಾಗಿದ್ದರೂ ಸಹಿತ ತಾಲೂಕಿನ ಅಭಿವೃದ್ದಿಗೆ ಸದಾ ಚಿಂತನಾಶೀಲರಾಗಿದ್ದಾರೆ ಜೊತೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ಮಾಡಲು ಸಂಭಂದಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.

ಅಭಿವೃದ್ಧಿ ಎಂಬುದು ನಿಂತ ನೀರಾಗದೇ ಸದಾ ಚಲಿಸುತ್ತಿರುವ ನೀರಿನಂತಿರಬೇಕು ಆ ನಿಟ್ಟಿನಲ್ಲಿ ಸಿ ಸಿ ರಸ್ತೆ, ಗಟಾರ ವ್ಯವಸ್ಥೆ, ಡಾಂಬರೀಕರಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಅಭಿವೃದ್ದಿ ಯೋಜನೆಗಳು ಸಕಾಲಕ್ಕೆ ಜನತೆಗೆ ಮುಟ್ಟುವ ಕಾರ್ಯದ ಕುರಿತು ಕ್ರಮವನ್ನು ಜರುಗಿಸಲಾಗುತ್ತಿದೆ, ಮಾರುತಿ ನಗರಕ್ಕೆ 30 ಲಕ್ಷ ರೂಗಳನ್ನು ಹಾಗೂ ಬಸವ ನಗರಕ್ಕೆ 20 ಲಕ್ಷ ರೂಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದು ಆ ಕೆಲಸಗಳನ್ನೂ ಸಹಿತ ಪ್ರಾರಂಭಿಸುವ ಉತ್ಸಾಹದಲ್ಲಿ ಶಾಸಕರಿದ್ದಾರೆ ಜೊತೆಗೆ ಗಂಗ್ಯಾನೂರ ಗ್ರಾಮವು 23 ನೇ ವಾಡರ್ಿಗೆ ಸೇರಿದ್ದರಿಂದ ವಾಡರ್ಿನ ಚುನಾವಣೆಯಲ್ಲಿ ಬರವಸೆ ನೀಡಿದಂತೆ ವಾಡರ್ಿನ ಸದಸ್ಯೆ ಸಂಗೀತ ವಾಲ್ಮೀಕಿಯವರು ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿಯವರ ಗಮನ ಸೆಳೆದು ಅನುಧಾನ ತಂದು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ ಈ ಸೇವೆ ನಿರಂತರವಾಗಿರುತ್ತದೆ ಜನತೆಯ ಸೇವೆ ಮಾಡಲು ಇದೊಂದು ಸದಾವಕಾಶ ಎಂದರು.

23 ನೇ ವಾಡರ್ಿನ ಸದಸ್ಯೆ ಸಂಗೀತಾ ವಾಲ್ಮೀಕಿ ಮಾತನಾಡಿ ನನ್ನ ಗೆಲುವಿನಲ್ಲಿ ವಾಡರ್ಿನ ಜನರ ಋಣವಿದೆ ಅದನ್ನು ಅಭಿವೃದ್ದಿ ಮೂಲಕ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಇದಕ್ಕೆ ಬೊಮ್ಮಾಯಯವರ ಶ್ರಮವಿದ್ದು ಅವರ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚಿನ ಕಾರ್ಯಗಳನ್ನು ಮಾಡಲಾಗುವುದು ಎಂದರು.

ಮಾಜಿ ಬಿಜೆಪಿ ಅದ್ಯಕ್ಷ ದೇವಣ್ಣ ಚಾಕಲಬ್ಬಿ, ಎಪಿಎಂಸಿ ನಾಮ ನಿದೇಶಿತ ಸದಸ್ಯ ಯಲ್ಲಪ್ಪ ಬಗಾಡೆ, ಮುಖಂಡರಾದ ಗೋವಿಂದಪ್ಪ ವಾಲ್ಮೀಕಿ, ನಾಗಪ್ಪಜ್ಜ ಬಾರಕೇರ, ಉಡಚಪ್ಪ ಬಾರಕೇರ, ಪರಸಪ್ಪ ಸುಣಗಾರ, ನಾಗರಾಜ ಗಂಗೆನೂರ ಸೇರಿದಂತೆ ಇಂಜೀನಿಯರುಗಳು ಹಾಗೂ ಗಂಗ್ಯಾನೂರ ಗ್ರಾಮದ ಗ್ರಾಮಸ್ಥರು ಇದ್ದರು.