ಕೊಪ್ಪಳ ಬಂದಗೆ ಸಂಪೂರ್ಣ ಬೆಂಬಲ -ಚೋಪ್ರಾ ಘೋಷಣೆ
ಕೊಪ್ಪಳ 21: ನಗರಕ್ಕೆ ಸಮೀಪ ಎಂ ಎಸ್ ಪಿ ಎಲ್ ಇಂದ ಕೊಪ್ಪಳದಲ್ಲಿ ವಿಸ್ತೀರ್ಣ ಗೊಳ್ಳಲಿರುವ ಬೃಹತ್ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ವಿರೋಧಿಸಿ ಇದೇ ದಿ 24 ರಂದು ಕೊಪ್ಪಳ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸದರಿ ಬಂದ್ ಗೆ ಕೊಪ್ಪಳದ ಜೈನ್ ಸಮಾಜ ಸೇರಿದಂತೆ ಸಮಾಜದ ವಿವಿಧ ಸಂಘಟನೆ ಗಳು ಸಂಪೂರ್ಣ ಬೆಂಬಲ ನೀಡಿರುವದಾಗಿ ಜೈನ್ ಸಮಾಜದ ಮುಖಂಡ ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಹೇಂದ್ರ ಚೋಪ್ರಾ ಘೋಷಿಸಿದ್ದಾರೆ, ಈ ಕುರಿತು ಹೇಳಿಕೆ ನೀಡಿದ ಆವರು ಗವಿಮಠದ ಪರಮಪೂಜ್ಯ ಗವಿಸಿದ್ದೇಶ್ವರ ಮಹಾಸ್ವಾಮಿಗಳು ರವರ ಸೂಚನೆ ಮತ್ತು ಕರೆ ಮೇರೆಗೆ ಕೊಪ್ಪಳದ ಸಂಪೂರ್ಣ ಪ್ರವಾಸಿ ರಾಜಸ್ಥಾನಿ ಒಳಗೊಂಡಂತೆ ಜೈನ್ ಸಮುದಾಯದ ವ್ಯಾಪಾರಸ್ಥರು ಕೊಪ್ಪಳ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದೆ ಎಂದು ಮಹೇಂದ್ರ ಚೋಪ್ರಾ ತಿಳಿಸಿದ್ದಾರೆ, ಆ ದಿನ ಎಲ್ಲಾ ವ್ಯಾಪಾರ ವಹಿವಾಟ ಸ್ಥಗಿತಗೊಳಿಸಿ ಕೊಪ್ಪಳ ಬಂದ್ ಗೆ ಸಹಕಾರ ಮತ್ತು ಬೆಂಬಲ ನೀಡುವುದಾಗಿ ನಿರ್ಣಯಿಸಲಾಗಿದೆ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.