ಲೋಕದರ್ಶನ ವರದಿ
ಶಿರಹಟ್ಟಿ: ಮಾನವ ಹಾಗೂ ಭೂಮಿಯ ಮೇಲೆ ಜೀವಿಸುವಂತಹ ಎಲ್ಲ ಜೀವಿಗಳಿಗೂ ನೀರು ಅತ್ಯವಶ್ಯವಾಗಿದ್ದು, ಪ್ರಸ್ತುತ ದಿನಗಳಲ್ಲಿ ಸಕಾಲಕ್ಕೆ ಮಳೆ ಬಾರದೆ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಆದ ಕಾರಣ ಕೆರೆ ಪುನಃಶ್ಚೇನದಿಂದ ಅಂತರ್ಜಲಮಟ್ಟ ಹೆಚ್ಚಳಕ್ಕಾಗಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯ್ದ ಗ್ರಾಮಗಳಲ್ಲಿನ ಕೆರೆಗಳ ಪುನರುಜ್ಜೀವನಗೊಳಸಿ ಅಂತರ್ಜಲ ಹೆಚ್ಚಿಸಲಿಕ್ಕೆ ಶ್ರಮಿಸುತ್ತಿರುವುದು ಶ್ಲಾಘೀನಿಯ ಎಂದು ಬನ್ನಿಕೊಪ್ಪದ ಜಪದಕಟ್ಟಿ ಮಠದ ಸುಜ್ಞಾನದೇವಾ ಶಿವಾಚಾರ್ಯ ಶ್ರೀಗಳು ಅಭಿಪ್ರಾಯಪಟ್ಟರು.
ತಾಲೂಕಿನ ತಾರಿಕೊಪ್ಪ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಗ್ರಾಮದ ಕೆರೆ ಪುನಶ್ಚೇತನಗೋಳಿಸಿ ಗ್ರಾಮಕ್ಕೆ ಹಸ್ತಾಂತರ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು. ಮನುಷ್ಯ ಹಾಗೂ ಸಕಲ ಜೀವ ರಾಸಿಗಳಿಗೂ ನೀರು ಬಹಳ ಅವಶ್ಯ. ಆದ್ದರಿಂದ ಗ್ರಾಮದ ಜನತೆ ಕೆರೆಯನ್ನು ಸ್ವಚ್ಛವಾಗಿ ಇಟ್ಟುಕೊಂಡು ಮೂಕ ಪ್ರಾಣಿ ಸೇರಿದಂತೆ ಸರ್ವರೂ ಕುಡಿಯಲು ಬಳಸುವಂತಹ ವಾತಾವರಣ ಕಲ್ಪಿಸಬೇಕು ಎಂದು ಹೇಳಿದರು.
ನಂತರ ಪ್ರಾದೇಶಿಕ ನಿದರ್ೇಶಕ ಪುರುಷೋತ್ತಮ ಪಿ.ಕೆ. ಮಾತನಾಡಿ. ಕೆರೆ ಅಭಿವೃದ್ಧಿಯಿಂದ ಸುಮಾರು 500 ಎಕರೆ ಕೃಷಿ ಭೂಮಿಗೆ ನೀರು ಸಿಗುತ್ತದೆ. ಕೆರೆಯಲ್ಲಿ ನೀರು ಸಂಗ್ರಹವಾಗುವುದರಿಂದ ಅಕ್ಕಪಕ್ಕದ ಜಮೀನುಗಳಲ್ಲಿರುವ ಬೋರವಲ್ಗಳು ಮರಳಿ ರಿಚಾರ್ಜ ಆಗುತ್ತವೆ. ಅಲ್ಲದೇ 910 ಕುಟುಂಬಗಳಿಗೆ ನೀರಿನ ಅಭಾವ ತಪ್ಪುತ್ತದೆ. ಆದ್ದರಿಂದ ಗ್ರಾಮದ ಜನತೆ ಕೆರೆಯ ಸುತ್ತಲು ಸ್ವಚ್ಚತೆ ಕಾಪಾಡಿಕೊಂಡು ಬರಗಾಲದಲ್ಲೂ ಕೆರೆ ನೀರನ್ನು ಮರು ಬಳಕೆ ಮಾಡುವುದರ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಿ ಮುಂದಿನ ಪಿಳ್ಳಿಗೆಗೆ ನೀರನ್ನು ಉಳಿಸಬೇಕು ಎಂದು ಹೇಳಿದರು.
ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಮತ್ತು ಶಿವಪ್ರಕಾಶ ಮಹಾಜನಶಟ್ಟರ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಚೌಳವ್ವ ಲಮಾಣಿ, ಲಕ್ಷ್ಮಣಗೌಡ ಪಾಟೀಲ, ಮಂಜಪ್ಪ ಕರಿಎತ್ತಿನ, ಸುರೇಶ ಪಾಟೀಲ, ಈರಣ್ಣ ಶಿರನಹಳ್ಳಿ, ಕಲ್ಲನಗೌಡ್ರ ಶೀರಕೋಳ, ಬಸವರಾಜ ಹಡಪದ ಸೇರಿದಂತೆ ಧರ್ಮಸ್ಥಳ ಸಂಘದ ಅಧ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.