ಲೋಕದರ್ಶನ ವರದಿ
ಬೆಳಗಾವಿ 16: ಸಾಹಸ ಪ್ರವೃತ್ತಿಯು ಮನುಷ್ಯನನ್ನು ಎತ್ತರಕ್ಕೇ ಏರಿಸುತ್ತದೆ. ಅಂತಹ ಸಾಹಸ ಮನೋಬಾವದಿಂದಲೇ ಬಾಳೇಶ ಸಸಾಲಟ್ಟಿಯವರು ಯಶಸ್ಸನ್ನು ಕಂಡಿದ್ದಾರೆ. ಅವರ ಪ್ರವಾಸ ಕೃತಿಗಳು ಎಲ್ಲರಿಗೂ ಮಾರ್ಗದರ್ಶಕವಾಗಿವೆ. ಪುಸ್ತಕದ ಓದಿನಿಂದ ಜೀವನ ಸುಖಮಯವಾಗುತ್ತದೆ ಎಂದು ವಿಶ್ರಾಂತ ನ್ಯಾಯಮೂತರ್ಿ ಎ. ಎಸ್. ಪಾಶ್ಚಾಪೂರೆ ಅವರಿಲ್ಲಿ ಹೇಳಿದರು.
ಶಿವಾ ಆಪ್ಸೆಟ್ ಮತ್ತು ಸಾಕ್ಷಿ ಆಸ್ಪತ್ರೆ ಬೀಳಗಿ ಇವರ ಸಂಯುಕ್ತ ಆಶ್ರಯದಲಿ ಬಾಳೇಶ ಸಸಾಲಟ್ಟಿಯವರ "ಏಕಾಂಗಿ ಪಯಣ" ಎಂಬ ಪ್ರವಾಸ ಕೃತಿ ಬಿಡುಗಡೆ ಮಾಡಿದ ಅವರು ಮೇಲಿನಂತೆ ಅಭಿಪ್ರಾಯ ವ್ಯಕ್ತ ಪಡಿಸಿದರು. ಮುಂದೆ ಮಾತನಾಡುತ್ತ ಅವರು ಬಾಳೇಶರ ಜೀವನೋತ್ಸಾಹ ಮೆಚ್ಚುವಂತಹದ್ದು ಎಂದರು.
ಹಿರಿಯ ಸಾಹಿತಿ ಪತ್ರಕರ್ತ ಎಲ್. ಎಸ್. ಶಾಸ್ತ್ರಿಯವರು ಕೃತಿ ಪರಿಚಯ ಮಾಡುತ್ತ ಬಾಳೇಶರು ತಮ್ಮ ಪ್ರವಾಸ ಸ್ಥಳಗಳ ಸೂಕ್ಷ್ಮ ಒಳನೋಟವನ್ನು ಕಟ್ಟಿಕೊಟ್ಟದ್ದು ಪರಿಣಾಮಕಾರಿ ಶೈಲಿಯೊಂದಿಗೆ ಸಾಕಷ್ಟು ಮಾಹಿತಿಗಳನ್ನು ನೀಡುವ ಮೂಲಕ ಈ ಕೃತಿ ಪ್ರವಸಿಗರಿಗೆ ಬಹಳ ಉಪಯುಕ್ತ ಕೈಪಿಡಿಯಂತಿವೆ ಎಂದು ಹೆಳಿದರು.
ಮುಖ್ಯ ಅತಿಥಿಗಲಾಗಿ ಆಗಮಿಸಿದ್ದ ಹಿರಿಯ ಕವಿ ಡಾ. ಜಿನದತ್ತ ದೇಸಾಯಿ, ಪ್ರೋ ಜ್ಯೋತಿ ಹೊಸೂರ, ಶ್ರೀ ಮೃತ್ಯುಂಜಯಸ್ವಾಮಿ ಹಿರೇಮಠ ಮತ್ತು ಲೇಖಕ ಬಾಳೇಶ ಸಸಾಲಟಿ ಇವರು ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ಪ್ರವಾಸ ಸಾಹಿತ್ಯವೆಂದರೆ ಐತಿಹಾಸಿಕ ದಾಖಲೆಗಳಿದ್ದಂತೆ ಸಾಹಿತ್ಯದಿಂದ ಸಂಸ್ಕಾರ , ಸಂಸ್ಕೃತಿ ಬೆಳೆಯುತ್ತದೆ. ನಮ್ಮ ದೇಶದ ಸಂಸ್ಕೃತಿಯ ಪ್ರಭಾವ ಬೇರೆ ದೇಶಗಳ ಮೇಲೂ ಆಗಿರುವುದು ಗಮನಾರ್ಹವೆಂದರು.
ಸಾನಿಧ್ಯ ವಹಿಸಿಮಾತನಾಡಿದ ಕಾರಂಜಿಮಠದ ಶ್ರೀಗುರುಸಿದ್ಧ ಮಹಾಸ್ವಾಮಿಗಳು ಪ್ರವಾಸ ಜೀವನಾನುಭವ ಹೆಚ್ಚಿಸುತ್ತದಾದ್ದರಿಂದ ಇನ್ನೂ ತಾರುಣ್ಯವಿರುವಾಗಲೇ ಪ್ರವಾಸ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ಸಸಾಲಟ್ಟಿಯವರನ್ನು ಸನ್ಮಾನಿಸಲಾಯಿತು.
ಆರಂಭದಲ್ಲಿ ರಾಜೇಶ್ವರಿ ಹಿರೇಮಠರಿಂದ ನಾಡಗೀತೆ, ಶಿವು ನಂದಗಾಂವರಿಂದ ಸ್ವಾಗತಗಳಾದವು. ಡಾ. ಡಾ. ಹೇಮಾವತಿ ಸೊನೊಳ್ಳಿ ನಿರೂಪಿಸಿದರು. ನ್ಯಾಯವಾದಿ ಎ. ಜಿ. ಮುಳವಾಡಮಠ, ಸ.ರಾ.ಸುಳಕೂಡೆ, ಆರ್ ಎಸ್ ಚಾಪಗಾವಿ, ಶಿವಾಪುರೆ, ಹೊಸಮನಿ, ಭೈರನಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಪ್ರೊ. ವಿಠ್ಠಲ ವಂದಿಸಿದರು.