ಲೋಕದರ್ಶನ ವರದಿ
ಬೆಳಗಾವಿ 08: ಇಲ್ಲಿನ ಅರ್ಧ ಶತಮಾನ ಪೂರೈಕೆಯತ್ತ ದಾಪುಗಾಲಿಡುತ್ತಿರುವ ಹೈಸ್ಕೂಲ್ ಬ್ರಿಟಿಷ್ ಕೌನ್ಸಿಲ್ ಆಫ್ ಯುನೈಟೆಡ್ ಕಿಂಗಡಮ್ ಪ್ರಶಸ್ತಿಗೆ ಭಾಜನವಾಗಿದೆ. ಬ್ರಿಟಿಷ್ ಕೌನ್ಸಿಲ್ನ ಹೊಸ ಶಿಕ್ಷಣ ಪದ್ಧತಿ "ಟಿಣಜಡಿಟಿಚಿಣಠಟಿಚಿಟ ಛಿಠಠಟ ಚಿಜಟಜಟಿಣ'' ನ್ನು ಅಳವಡಿಸಿ ಕೊಳ್ಳುವದಲ್ಲಿ ಭಾತಕಾಂಡೆ ಹೈಸ್ಕೂಲ್ ಸಫಲವಾಗಿದ್ದು ಅವರ ಪ್ರಶಸ್ತಿಗೆ ಹಾಗೂ ಗೌರವಕ್ಕೆ ಪಾತ್ರವಾಗಿದೆ.ಈ ಪರಿಕಲ್ಪನೆಯ ಬಗ್ಗೆ 2017ರಲ್ಲಿ 3ದಿನಗಳ ತರಬೇತಿ ಕಾರ್ಯಗಾರ ಚೆನೈನಲ್ಲಿ ಜರುಗಿತು. ಯೋಜನೆಗಳು ಮತ್ತು ಚಟುವಟಿಕೆಗಳ ಬಗ್ಗೆ ಸೃಷ್ಟೀಕರಣ ನೀಡಲು ಬೆಂಗಳೂರಿನಲ್ಲಿ 2ನೇ ಕಾಯರ್ಾಗಾರ ನಡೆಸಲಾಯಿತು.
ಪ್ರಾಯೋಗಿಕವಾಗಿ ಎಲ್ಲಾ ಶಿಕ್ಷಕ ವರ್ಗ ಪಾಲಕರು ಮತ್ತು ವಿದ್ಯಾಥರ್ಿಗಳು ಅನೇಕ ಯೋಜನೆಗಳನ್ನು ತಯಾರಿಸಿದರು. ವಿಡಿಯೋ, ಸ್ಕೈಪ್ ಮತ್ತು ವಿದೇಶಿಪಾಲುದಾರ ಶಾಲೆಗಳು ಇತ್ಯಾದಿಗಳ ಜೊತೆ ಸಂವಹನ ನಡೆಸಿದರು. ಇದರಲ್ಲಿ ಹೂವುಗಳು, ಸೌರ್ಯಶಕ್ತಿ, ಪ್ರವಾಸೋದ್ಯಮ, ಸಾರಿಗೆ ವ್ಯವಸ್ಥೆ, ಇಂಗ್ಲೀಷ್ ನಾಟಕ ಇಂತಹ ವಿಷಯಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ದೃಷ್ಟಿಕೋನದಿಂದ ವಿದ್ಯಾಥರ್ಿಗಳಿಗೆ ಕಲಿಸಲಾಗಿತ್ತು. ಇದೆಲ್ಲದರ ಠಿಡಿಠರಿಜಛಿಣ ಡಿಜಠಿಠಡಿಣ ನ್ನು ಕೌನ್ಸಿಲ್ ಗೆ ಕಳುಹಿಸಲಾಗಿತ್ತು. ಬ್ರಿಟಿಷ್ ಕೌನ್ಸಿಲ್ ಈ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಿಪಡಿಸಿ ಭಾತಕಾಂಡೆ ಹೈಸ್ಕೂಲಿಗೆ ಬೆಂಗಳೂರಿನ ತಾಜ್ ಹೋಟೆಲ್ನಲ್ಲಿ ಭಾರತದ ಎಲ್ಲಾ ರಾಜ್ಯಗಳಿಂದ ಆಗಮಿಸಿದ್ದ ಶಾಲೆಗಳ ಪ್ರತಿನಿಧಿಗಳ ಸಾನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಿತು. ನಿಜಕ್ಕೂ ಸಾಧನೆ ಒಂದು ಅದ್ಭುತ ಸಾಧನೆಯಾಗಿದೆ. ಉತ್ತರ ಕನರ್ಾಟಕದಲ್ಲಿ ಈ ಪ್ರಶಸ್ತಿ ಪಡೆದ ಮೊದಲ ಶಾಲೆ ಎಂಬ ಹೆಗ್ಗಳಿಕೆಗೆ ಭಾತಕಾಂಡೆ ಹೈಸ್ಕೂಲ್ ಪಾತ್ರವಾಗಿದೆ. ವಿಶ್ವದ್ಯಾಂತ ಸುಮಾರು 400ಶಾಲೆಗಳಲ್ಲಿ ಈ ಪದ್ಧತಿ ಅಳವಡಿಸಿಕೊಳ್ಳಲಾಗಿತ್ತು.
ಈ ಪ್ರಶಸ್ತಿ ಲಭಿಸಿದ್ದಕ್ಕೆ ಹೈಸ್ಕೂಲ್ ಅಧ್ಯಕ್ಷ ಮಿಲಿಂದ ಭಾತಕಾಂಡೆ, ಮುಖ್ಯಾಧ್ಯಾಪಾಕಿ ದಯಾ ಶಹಾಪೂರಕರ ಕಾರ್ಯದಶರ್ಿ ಮಧುರಾ ಭಾತಕಾಂಡೆ, ಸ್ವಪ್ನೀಲ್ ಮೊದಲಾವರು ಹರ್ಷ ವ್ಯಕ್ತಪಡಿಸಿದ್ದಾರೆ.