ಇಂದಿನಿಂದ ರಾಘವೇಂದ್ರ ಶ್ರೀಗಳ 348ನೇ ಆರಾಧನಾ ಮಹೋತ್ಸವ

ಲೋಕದರ್ಶನವರದಿ

ಮಹಾಲಿಂಗಪುರ : ಸ್ಥಳೀಯ ವಾಸವಿ ನಗರದ ಮಂತ್ರಾಲಯ ರಾಘವೇಂದ್ರ ಶ್ರೀಗಳ ಶಾಖಾ ಮಠದಲ್ಲಿ ಆ. 17 ರಿಂದ 18 ರ ವರೆಗೆ ಮೂರು ದಿನಗಳ ಕಾಲ ಜರುಗಲಿದೆ.  

   ಶುಕ್ರವಾರ ಪೂರ್ವಾರಾಧನೆ, ಶನಿವಾರ ಮಧ್ಯಾರಾಧನೆ, ರವಿವಾರ ಉತ್ತರಾರಾಧನೆ ಕಾರ್ಯಕ್ರಮ ಜರುಗಲಿದೆ. ಪ್ರತಿದಿನ ಪ್ರಾಥಃ ಕಾಲ 5 ಗಂಟೆಗೆ ಸುಪ್ರಭಾತ, ಬೆಳಿಗ್ಗೆ 5.30 ಕ್ಕೆ ನಿಮರ್ಾಲ್ಯ ವಿಸರ್ಜನೆ, ಬೆ. 7 ಕ್ಕೆ ಅಷ್ಟೋತ್ತರ ಪಾರಾಯಣ, ಬೆ. 7.30 ಕ್ಕೆ ಪಂಚಾಮೃತ ಅಭಿಷೇಕ, ಬೆ. 10 ಕ್ಕೆ ಕನಕಾಭಿಷೇಕ, ಮಧ್ಯಾಹ್ನ 12.30 ಕ್ಕೆ ನೈವೇದ್ಯ, ಹಸ್ತೋದಕ ಅಲಂಕಾರ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ಮತ್ತು ಸಾಯಂಕಾಲ 8 ಕ್ಕೆ ಸ್ವಸ್ತಿ ವಾಚನ,  ಮಹಾಮಂಗಳಾರತಿ ಕಾರ್ಯಕ್ರಮ ಜರುಗುವುದಾಗಿ ರಾಜು ತಾಳಿಕೋಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.