ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೋಶಿ

ಲೋಕದರ್ಶನ ವರದಿ

ಗದಗ 04: ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ದುಂದು ವೆಚ್ಚ ಹಾಗೂ ಆಡಂಭರದ ವಿವಾಹಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಸಾಮೂಹಿಕ ವಿವಾಹಗಳು ನಿರಂತರವಾಗಿ ನಡೆದರೆ, ಸಮಾಜದಲ್ಲಿ ಬಡತನ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಹೇಳಿದರು.

ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಸಮೀಪದ ಕರ್ಕಿಕಟ್ಟಿ ಗ್ರಾಮದಲ್ಲಿ ಇತ್ತೀಚಿಗೆ ನಡೆದ ವಾಡ ಪುರುಷ ಕಲಬುಗರ್ಿ ಶರಣ ಬಸವೇಶ್ವರರ 16ನೇ ವರ್ಷದ ಪುರಾಣ ಮಹಾಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ವಧು ವರರಿಗೆ ಶುಭ ಹಾರೈಸಿ ಮಾತನಾಡಿದರು. ಸಮಾಜದಲ್ಲಿ ಬಡತನಕ್ಕೆ ವಿವಾಹಗಳು ಒಂದು ಕಾರಣವಾಗಿದೆ. ಮದ್ಯಮ ವರ್ಗ ಹಾಗೂ ಕೆಳ ವರ್ಗದ ಜನರಿಗೆ ಮದುವೆ ಮಾಡುವುದು ಒಂದು ದೊಡ್ಡ ಸವಾಲಿನ ಕೆಲಸವಾಗಿದೆ. ಮದುವೆ ಮಾಡಲು ಹೋಗಿ ಸಾಲ ಮಾಡಿಕೊಂಡು ಆ ಸಾಲದ ಸುಳಿಗೆ ಸಿಲುಕಿ ಬಹಳಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು. ಆದ್ದರಿಂದ ಸಾಮೂಹಿಕ ವಿವಾಹಗಳಲ್ಲಿ ಸರಳ ರೀತಿಯಲ್ಲಿ ಹಸೆಮಣೆ ಏರುವುದರಿಂದ ಈ ಎಲ್ಲ ಕಷ್ಟಗಳಿಂದ ಮುಕ್ತಿ ಹೊಂದುವುದರ ಜೊತೆಗೆ ಸಮಾಜದಲ್ಲಿ ಬಡತನವನ್ನು ಮೆಟ್ಟಿ ಆಥರ್ಿಕವಾಗಿ ಸಬಲರಾಗಲು ಸಾಧ್ಯವಾದಂತಾಗುತ್ತದೆ ಎಂದರು.

ಕಕರ್ಿಕಟ್ಟಿ ಎನ್ನುವ ಒಂದು ಸಣ್ಣ ಗ್ರಾಮದಲ್ಲಿ ಕಳೆದ 16 ವರ್ಷಗಳಿಂದ ನಿರಂತರವಾಗಿ ಸಾಮೂಹಿಕ ವಿವಾಹ ಏರ್ಪಡಿಸುತ್ತಾ ಬಂದಿರುವುದು ಅತ್ಯಂತ ಸಂತಸದ ವಿಷಯ. ಈ ಕಾರ್ಯಕ್ರಮಗಳನ್ನು ಮಾಡಿ ಸಮಾಜಕ್ಕೆ ಕಕರ್ಿಕಟ್ಟಿ ಗ್ರಾಮದ ಜನರು ಅದ್ದೂರಿ ವಿವಾಹಗಳಿಗೆ ಕಡಿವಾಣ ಹಾಕುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಸಾಮೂಹಿಕ ವಿವಾಹ ಸಮಾರಂಭದ ಸಾನಿಧ್ಯವಹಿಸಿದ್ದ ಬೆನಹಾಳ ಹಿರೇಮಠದ ಸದಾಶಿವ ಮಹಾಂತ ಶಿವಾಚಾರ್ಯರು ಆಶೀರ್ವಚನ ನೀಡಿ, ಸಮಾಜದಲ್ಲಿ ತಲೆದೋರಿದ್ದ ವರ್ದಕ್ಷಿಣೆ ಪಿಡುಗನ್ನು ಹೋಗಲಾಡಿಸಲು ಸಾಮೂಹಿಕ ವಿವಾಹಗಳು ಸಹಕಾರಿಯಾಗಿವೆ. ನೂತನವಾಗಿ ದಾಂಪತ್ಯಕ್ಕೆ ಕಾಲಿಟ್ಟ ವಧು ವರರು, ಸಂಸಾರದಲ್ಲಿ ಏನೇ ಸಣ್ಣ, ಪುಟ್ಟ ವೈಮನಸ್ಸು ಬಂದರೆ, ಅದನ್ನು ಮರೆತು ಕಷ್ಟ, ಸುಖಗಳಲ್ಲಿ ಸಮಪಾಲುದಾರರಾಗಿ, ಮನೆಯ ಹಿರಿಯರನ್ನು ಗೌರವಿಸುವ ಮೂಲಕ ಜೀವನದಲ್ಲಿ ಅನ್ಯೋನ್ಯತೆಯಿಂದ ಬಾಳಿ ಸಮಾಜಕ್ಕೆ ಮಾದರಿ ದಂಪತಿಗಳಾಗಬೇಕೆಂದು ನೂತನ ವಧು-ವರರಿಗೆ ಕಿವಿ ಮಾತು ಹೇಳಿದರು. ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಅವರು ನೂತನ ದಾಂಪತ್ಯಕೆ ಕಾಲಿಟ್ಟ ವಧು-ವರರಿಗೆ ಉಡುಗೊರೆ ನೀಡಿ ಶುಭ ಹಾರೈಸಿದರು.

   ಗ್ರಾಮದ ಮುಖಂಡರಾದ ಈರಣ್ಣ ದೇಸಾಯಿ ಅವರು ಮಾತನಾಡಿ, ಗ್ರಾಮದಲ್ಲಿ ಸರ್ವರ ಸಹಕಾರದಿಂದ ಕಳೆದ ಹಲವಾರು ವರ್ಷಗಳಿಂದ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಕರ್ಕಿಕಟ್ಟಿ ಗ್ರಾಮದಲ್ಲಿ ಶರಣ ಬಸವೇಶ್ವರರ ಪುರಾಣ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದೇವೆ. ಅಲ್ಲದೇ ಸಾಮೂಹಿಕ ವಿವಾಹಗಳನ್ನು ನೆರವೇರುತ್ತಿರುವುದಕ್ಕೆ ಗ್ರಾಮದ ಹಾಗೂ ಸುತ್ತಮುತ್ತಲಿನ ಹಳ್ಳಿಯ ಜನರು ಸೇರಿದಂತೆ ಅನೇಕ ದಾನಿಗಳು ಸಹಾಯ ಮಾಡಿದ್ದಾರೆ. ಎಲ್ಲ ದಾನಿಗಳಿಗೆ ದೇವರು ಆಯಷ್ಯ ಆಯುರಾರೋಗ್ಯ ನೀಡಲಿ ಎಂದು ಹೇಳಿದರು.

  ಸಾಮೂಹಿಕ ವಿವಾಹದಲ್ಲಿ 3 ಜೋಡಿಗಳು ಹಸೆ ಮಣೆ ಏರುವುದರ ಮೂಲಕ ನೂತನ ದಾಂಪತ್ಯಕ್ಕೆ ಕಾಲಿಟ್ಟರು. ಕರ್ಕಿಕಟ್ಟಿ ಗ್ರಾಮದ ಹಿರಿಯರು ಗದಗ ಜಿಲ್ಲಾ ಎಸ್ಪಿ ಶ್ರೀನಾಥ ಜೋಶಿ, ಗಣ್ಯ ವ್ಯಾಪಾರಸ್ಥ ಈರಯ್ಯ ಮಠದ, ನರಗುಂದ ತಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡರ, ಗದಗನ ಪ್ರಕಾಶ ಮೋಟರ್ಸ್ನ ಮಾಲೀಕರಾದ ಪ್ರಕಾಶ ಕರಿ, ಗಣ್ಯ ವ್ಯಾಪಾರಸ್ಥ ಶ್ರೀಧರ ವಜ್ರಬಂಡಿ, ಬಿಜೆಪಿ ಮುಖಂಡ ಬಸಯ್ಯ ಹಿರೇಮಠ ಸೇರಿದಂತೆ ಅನೇಕರನ್ನು ಸನ್ಮಾನಿಸಿ ಗೌರವಿಸಲಾಯಿತು.