ಒಂದು ವಿಕೆಟ್ ನಿಂದ ಐರ್ಲೆಂಡ್ ಮಣಿಸಿದ ವಿಂಡೀಸ್ ಗೆ, ಸರಣಿ

ಕಿಂಗ್ ಸ್ಟನ್, ಜ.10 :            ವೇಗಿ ಅಲ್ಜರಿ ಜೋಸೆಫ್ (32ಕ್ಕೆ 4) ಹಾಗೂ ನಿಕೋಲಸ್ ಪೂರನ್ (52) ಇವರುಗಳ ಭರ್ಜರಿ ಆಟದ ನೆರವಿನಿಂದ ವೆಸ್ಟ್ ಇಂಡೀಸ್ ಒಂದು ವಿಕೆಟ್ ನಿಂದ ಐರ್ಲೆಂಡ್ ತಂಡವನ್ನು ಮಣಿಸಿ, ಮೂರು ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಗೆದ್ದು ಕೊಂಡಿತು.   

ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ 50 ಓವರ್ ಗಳಲ್ಲಿ 9 ವಿಕೆಟ್ ಗೆ 237 ರನ್ ಗಳಿಸಿತು. ಗುರಿಯನ್ನು ಹಿಂಬಾಲಿಸಿದ ವಿಂಡೀಸ್ 49.5 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 242 ರನ್ ಕಲೆ ಹಾಕಿ ಮಿಂಚಿತು.   

ಐರ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಆದರೆ ಮೂರನೇ ವಿಕೆಟ್ ಗೆ ಪಾಲ್ ಸ್ಟಿರ್ಲಿಂಗ್, ವಿಲಿಯಂ ಪೋರ್ಟರ್ಫಲ್ಡ್ ಜೋಡಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಯಶಸ್ವಿಯಾದರು. ಈ ಜೋಡಿ ತಂಡಕ್ಕೆ ಅರ್ಧಶತಕ ಜೊತೆಯಾಟದ ಕಾಣಿಕೆ ನೀಡಿತು. ವಿಲಿಯಂ ಪೋರ್ಟಫರ್ಿಲ್ಡ್ 46 ಎಸೆತಗಳಲ್ಲಿ 29 ರನ್ ಸಿಡಿಸಿದರು. ಪಾಲ್ ಸ್ಟಿಲರ್ಿಂಗ್ 79 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 63 ರನ್ ಸಿಡಿಸಿದರು.   

ಉಳಿದಂತೆ ಕೆವಿನ್ ಒ ಬ್ರಿಯಾನ್ 31, ಸಿಮಿ ಸಿಂಗ್ 34 ರನ್ ಸೇರಿಸಿ ತಂಡದ ಮೊತ್ತ ಹಿಗ್ಗಿಸಿದರು. ವಿಂಡೀಸ್ ಪರ ಶೆಲ್ಡನ್ ಕಾಟ್ರೆಲ್ 3 ಹಾಗೂ ಅಲ್ಜಾರಿ ಜೋಸೆಫ್ 4 ವಿಕೆಟ್ ಕಬಳಿಸಿದರು.   

ಗುರಿಯನ್ನು ಹಿಂಬಾಲಿಸಿದ ವಿಂಡೀಸ್ ತಂಡದ ಆರಂಭ ಕಳಪೆಯಾಗಿತ್ತು. 3 ವಿಕೆಟ್ ಗೆ 24 ರನ್ ಸೇರಿಸಿದ್ದ ತಂಡಕ್ಕೆ ಶಾಯ್ ಹೋಪ್ (25) ಹಾಗೂ ನಿಕೋಲಸ್ ಪೂರನ್ ಆಧಾರವಾದರು. ಈ ಜೋಡಿ ತಂಡಕ್ಕೆ 52 ರನ್ ಸೇರಿಸಿತು. ನಾಲ್ಕನೇ ವಿಕೆಟ್ ಗೆ ನಿಕೋಲಸ್ ಹಾಗೂ ಕೀರನ್ ಪೊಲಾರ್ಡ್ಜೋಡಿ ಸಹ 50ಕ್ಕೂ ಹೆಚ್ಚು ರನ್ ಸೇರಿಸಿ ತಂಡಕ್ಕೆ ನೆರವಾಯಿತು. ನಿಕೋಲಸ್ 44 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 52 ರನ್ ಬಾರಿಸಿದರು. ಕಿರನ್ 32 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 40 ರನ್ ಸಿಡಿಸಿದರು. ಕೆಳ ಕ್ರಮಾಂಕದಲ್ಲಿ ಹೇಡನ್ ವಾಲ್ಷ್ ಅಜೇಯ 46 ರನ್ ಬಾರಿಸಿ ತಂಡದ ಜಯದಲ್ಲಿ ಮಿಂಚಿದರು.