ಮುಂಬೈ, ಫೆ 4 :ಬಾಲಿವುಡ್ ಚಾಕಲೇಟ್ ನಟ ಕಾರ್ತಿಕ್ ಆರ್ಯನ್ ಗೆ ತೆರೆಯ ಮೇಲೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆಯಂತೆ.
ಖಳನಾಯಕನಾಗಿ ತಾವು ನಟಿಸಲು ಇಚ್ಛೀಸುತ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾರ್ತಿಕ್, ನನಗೆ ಅಂತಹ ಪಾತ್ರಕ್ಕೆ ಬಣ್ಣ ಹಚ್ಚಬೇಕು ಎಂಬ ಹಂಬಲವಿದೆ. ಹೀಗಾಗಿ ಖಳನಾಯಕ ಪಾತ್ರದ ಹುಡುಕಾಟದಲ್ಲಿರುವೆ. ನಕಾರಾತ್ಮಕ ಪಾತ್ರ ಇರಬೇಕು. ಶೀಘ್ರವೇ ಅಂತಹ ಪಾತ್ರ ಸಿಗಬಹುದು ಎಂಬ ಭರವಸೆ ತಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ತಿಕ್ ಸದ್ಯ ಲವ್ ಆಜ್ ಕಲ್ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದಕ್ಕೆ ನಿರ್ದೇಶಕ ಇಮ್ತಿಯಾಜ್ ಅಲಿ ಅವರಿಗೆ ಚಿರಖಣಿಯಾಗಿದ್ದೇನೆ ಎಂದರು.
ಈ ಚಿತ್ರದ ಪಯಣ ಮುಗಿಯುವ ಹಂತದಲ್ಲಿದೆ ಎಂದು ನಂಬಲು ಆಗುತ್ತಿಲ್ಲ. ಶೀಘ್ರವೇ ಈ ಚಿತ್ರ ಬಿಡುಗಡೆಗೊಳ್ಳಲಿದೆ ಎಂದರು.
ಈ ಚಿತ್ರ ವು ಪ್ರೇಮಿಗಳ ದಿನ ಫೆ.14ಕ್ಕೆ ತೆರೆಕಾಣಲಿದೆ.