ಬಾಗಲಕೋಟೆ: ಅಕ್ಟೋಬರ 10 (ಕನರ್ಾಟಕ ವಾತರ್ೆ) : ಮಹತ್ಮಾ ಗಾಂದಿ 150 ನೇ ಜನ್ಮ ವಷರ್ಾಚರಣೆ ಅಂಗವಾಗಿ ಅಕ್ಟೋಬರ 15 ರಿಂದ 17 ರವರೆಗೆ ವಾತರ್ಾ ಇಲಾಖೆಯಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಗಾಂಧಿ-150 ಸ್ತಬ್ದ ಚಿತ್ರವು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಂಚರಿಸಲಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಗಾಂಧಿ-150 ಅಭಿಯಾನ ಕಾರ್ಯಕ್ರಮ ಕುರಿತು ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವಷರ್ಾಚರಣೆ ಹಿನ್ನಲೆಯಲ್ಲಿ ಅವರ ವಿಚಾರಧಾರೆ ಕುರಿತು ಸ್ತಬ್ದಚಿತ್ರಗಳ ಮೂಲಕ ರಾಜ್ಯಾದ್ಯಂತ ಸಂಚರಿಸಲಿದ್ದು, ಅಕ್ಟೋಬರ 15 ರಿಂದ 17 ರವರೆಗೆ ಜಿಲ್ಲೆಯ 5 ತಾಲೂಕುಗಳಲ್ಲಿ ಸಂಚರಿಸಲಿದೆ. ಜಿಲ್ಲೆಯ ಆಯಾ ತಾಲೂಕಾ ಗಡಿಯಲ್ಲಿ ಬಂದಾಗ ಗಾಂಧಿ ಸ್ತಬ್ದಚಿತ್ರ ಸ್ವಾಗತಿಸಿ ಬೀಳ್ಕೊಡುವ ಕೆಲಸವಾಗಬೇಕೆಂದರು.
ಜಿಲ್ಲಾ ವಾತರ್ಾಧಿಕಾರಿಗಳಾದ ಮಂಜುನಾಥ ಸುಳ್ಳೊಳ್ಳಿ ಗಾಂಧಿ ಸ್ತಬ್ದಚಿತ್ರ ಸಂಚಿರಿಸುವ ಮಾರ್ಗ ಹಾಗೂ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸುತ್ತಾ, ಅಕ್ಟೋಬರ 15 ರಂದು ರೋಣ ಮಾರ್ಗವಾಗಿ ಸಂಜೆ 4 ಗಂಟೆಗೆ ಬಾದಾಮಿಗೆ ಆಗಮಿಸಿ ಸಂಚಾರ ಮಾಡಿ ಬಾದಾಮಿಯಲ್ಲಿ ವಾಸ್ತವ್ಯ ಹೂಡಲಿದೆ. 16 ರಂದು ಬೆಳಿಗ್ಗೆ 8 ಗಂಟೆಗೆ ಸಂಚರಿಸಿ ಮದ್ಯಾಹ್ನ 12 ಗಂಟೆಗೆ ಮುಧೋಳಕ್ಕೆ ಆಗಮಿಸುವುದು. ಮುಧೋಳದಿಂದ ಮದ್ಯಾಹ್ನ 2 ಗಂಟೆಗೆ ಸಂಚರಿಸಿ ಸಾಯಂಕಾಲ 4 ಗಂಟೆಗೆ ಬೀಳಗಿಗೆ ಆಗಮಿಸಿ ವಾಸ್ತವ್ಯ ಮಾಡಲಿದೆ. 17 ರಂದು ಬೆಳಿಗ್ಗೆ 10ಕ್ಕೆ ಸಂಚರಿಸಿ ಮದ್ಯಾಹ್ನ 12 ಗಂಟೆಗೆ ಬಾಗಲಕೋಟೆ ಆಗಮಿಸುವುದು. ನಂತರ ಮದ್ಯಾಹ್ನ 3 ಗಂಟೆಗೆ ಸಂಚರಿಸಿ ಸಾಯಂಕಾಲ 4 ಗಂಟೆಗೆ ಆಗಮಿಸಿ ವಾಸ್ತವ್ಯ ಹೂಡಲಿದೆ ಎಂದು ಸಭೆಗೆ ತಿಳಿಸಿದರು.
ಪ್ರತಿ ತಾಲೂಕು ಗಡಿ ಕೇಂದ್ರಗಳಲ್ಲಿ ಗಾಂಧಿ ಸ್ತಬ್ದಚಿತ್ರ ಆಗಮಿಸಿದಾಗ ತಹಶೀಲ್ದಾರರು, ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿಗಳು ಹಾಗೂ ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು ಸ್ವಾಗತಿಸುವ ಮೂಲಕ ಸ್ತಬ್ದಚಿತ್ರದ ಮೆರವಣಿಗೆ ಏರ್ಪಡಿಸಬೇಕು. ಮೆರವಣಿಗೆಯಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾಥರ್ಿಗಳು, ವಸತಿ ನಿಲಯಗಳ ವಿದ್ಯಾಥರ್ಿಗಳು, ಅಂಗನವಾಡಿ ಕಾರ್ಯಕತರ್ೆಯರು, ಯುವಕ, ಯುವತಿ ಸಂಘ ಸಂಸ್ಥೆಗಳು ಪಾಲ್ಗೊಳ್ಳುವಂತೆ ಮಾಡಿ ಗಾಂಧೀಜಿಯವರ ವಿಚಾರಧಾರೆಗಳು ಜನರಿಗೆ ಮುಟ್ಟಿಸುವ ಕೆಲಸವಾಗಬೇಕು. ಅಲ್ಲದೇ ಆಯಾ ತಾಲೂಕಿಗೆ ಆಗಮಿಸಿದಾಗ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯ ಗಾಂಧಿ ಸ್ತಬ್ದಚಿತ್ರ ಸಂಚರಿಸುವ ಪ್ರತಿ ತಾಲೂಕಾ ಮಾರ್ಗದ ಮಧ್ಯ ಬರುವ ಎಲ್ಲ ಗ್ರಾಮ ಪಂಚಾಯತಿಗಳ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು ಸ್ವಾಗತಿಸಿ ಬೀಲ್ಕೊಡುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಆಯಾ ಗ್ರಾ.ಪಂ ಪಿಡಿಓಗಳಿಗೆ ನಿದರ್ೇಶನ ನೀಡುವಂತೆ ಜಿ.ಪಂ ಉಪ ಕಾರ್ಯದಶರ್ಿಗಳಿಗೆ ತಿಳಿಸಿದರು. ಬಾದಾಮಿ ಮತ್ತು ಜಿಲ್ಲಾ ಕೇಂದ್ರವಾದ ಬಾಗಲಕೋಟಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಜಿಲ್ಲಾ ವಾತರ್ಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಜಿ.ಪಂ ಉಪಕಾರ್ಯದಶರ್ಿ ಅಮರೇಶ ನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕಿ ಎಂ.ಆರ್.ಕಾಮಾಕ್ಷಿ, ಸಮಾಜ ಕಲ್ಯಾಣ ಇಲಾಖೆಯ ಉಪನಿದರ್ೇಶಕ ಜಗದೀಶ ಹೆಬ್ಬಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಿ.ಬಿಬಾರಕೇರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿದರ್ೇಶಕ ಬಸವರಾಜ ಶಿರೂರ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ ಸೇರಿದಂತೆ ಆಯಾ ತಾಲೂಕಾ ತಹಶೀಲ್ದಾರರು ಉಪಸ್ಥಿತರಿದ್ದರು.