ಗದಗ 27: ಸ್ನೇಹ ತಂತ್ರಾಂಶ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಡಿಜಿಟಲ್ ಪರಿಹಾವಾಗಿರುತ್ತದೆ. ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು.
ಅವರು ಗದಗ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಸ್ನೇಹ ತಂತ್ರಾಂಶವನ್ನು ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ವಿಸ್ತರಿಸಲು ಸಿ-ಸ್ಟೇಪ್ (ಅ-ಖಣಜಠಿ) ಸಂಸ್ಥೆ ವತಿಯಿಂದ ನಿನ್ನೆ (ದಿ.26 ರಂದು) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಜಯಪುರ, ಬಾಗಲಕೋಟ, ಧಾರವಾಡ, ಕೊಪ್ಪಳ ಹಾಗೂ ಗದಗ ಜಿಲ್ಲೆಯ ಮೇಲ್ವೀಚಾರಕಿಯರಿಗೆ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ, ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ಎರಡು ದಿನಗಳ ವಿಭಾಗೀಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಐದು ಜಿಲ್ಲೆಗಳ ವಿಭಾಗೀಯ ಮಟ್ಟದ ಕಾಯರ್ಾಗಾರವನ್ನು ಗದಗದಲ್ಲಿ ನಡೆಸುತ್ತಿದ್ದು ಈ ತಂತ್ರಾಂಶದಿಂದ ಎಲ್ಲಾ ಅಂಗನವಾಡಿ ಕೇಂದ್ರಗಳ ಉಸ್ತುವಾರಿ ಮಾಡಲು ಸಾದ್ಯವಾಗುವುದು. ಇದರಿಂದ ಮಹಿಳೆಯ ಮತ್ತು ಮಕ್ಕಳ ಅಪೌಷ್ಟಿಕತೆಯ ಮಟ್ಟವನ್ನು ಟ್ರ್ಯಾಕ್ ಮಾಡಲು ಮತ್ತು ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೇವೆಗಳಲ್ಲಿ ಸುಧಾರಣೆ ಮಾಡಲು ಸಹಕರಿಸುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನುಡಿದರು.
ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ. ಅವರು ಮಾತನಾಡಿ ಈ ತಂತ್ರಾಂಶನಿಂದ ಸುಲಭವಾಗಿ ಫಲಾನುಭವಿಗಳಿಗೆ ಸೌಲಭ್ಯ ನೀಡಿದ ಬಗ್ಗೆ ಖಚಿತಪಡಿಸಿಕೊಳ್ಳಬಹುದು. ಇದರಿಂದ ಮಕ್ಕಳ ತೂಕ, ಎತ್ತರ ಮತ್ತು ತೋಳಿನ ಸುತ್ತಳತೆ ನಿಖರವಾದ ಛಾರ್ಟಗಳು ತನ್ನಿಂದತಾನೆ ಉತ್ಪತ್ತಿಯಾಗುತ್ತವೆ ಅದರಂತೆ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯಕವಾಗುತ್ತದೆ. ಚುಚ್ಚುಮದ್ದು ಮಾಹಿತಿಯು ನೇರವಾಗಿ ಆರ್.ಸಿ.ಎಚ್ ಫೋರ್ಟಲ್ನಿಂದ ಲಭ್ಯವಾಗುವುದರಿಂದ ಅಂಗನವಾಡಿ ಕಾರ್ಯಕತರ್ೆಯರು ಪುನಃ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಈ ತಂತ್ರಾಂಶನ್ನು ಸರಿಯಾಗಿ ಬಳಸುವುದರಿಂದ ಯೋಜನೆಗಳ ಸದ್ಭಳಕೆ ಯಾಗುವುದೆಂದು ಅವರು ನುಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಗದಗ ಉಪನಿದರ್ೇಶಕಿ ಅಕ್ಕಮಹಾದೇವಿ ಕೆ.ಎಚ್. ಸ್ವಾಗತಿಸಿದರು, ಸೀ-ಸ್ಟೇಪ್ ಲೀಡ್ ಇಂಜನಿಯರ್ ರಾಜೇಶ ಶೆನೈ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಸೀ-ಸ್ಟೇಪ್ ಸಿಬ್ಬಂದಿಯವರಿಂದ ಕಾರ್ಯಾಗಾರವನ್ನು ಮುಂದುವರೆಸಲಾಯಿತು.