ಲೋಕದರ್ಶನ ವರದಿ
ಬಳ್ಳಾರಿ06: ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಲೀಡ್ನ ವಿದ್ಯಾಥರ್ಿಗಳಿಂದ ಬಳ್ಳಾರಿಯ ಅನಾಥಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ, ಸ್ನೇಹಿತರ ದಿನಾಚರಣೆಯನ್ನು ಆಚರಿಸಲಾಯಿತು. ಬಳ್ಳಾರಿಯ ಆರ್,ವೈ,ಎಂ,ಇ,ಸಿ ತಾಂತ್ರಿಕ ಮಹಾವಿದ್ಯಾಲಯದ "ಲೀಡ್ನ ವಿದ್ಯಾಥರ್ಿಗಳು ಬಳ್ಳಾರಿಯ ಅಲ್ಲಿಪುರದ ಬಳಿ ಇರುವ ಅನಾಥಾಶ್ರಮಕ್ಕೆ ತೆರಳಿ ಅಲ್ಲಿನ ಮಕ್ಕಳೊಂದಿಗೆ ಬೆರೆತು ಸ್ನೇಹಿತರ ದಿನಾಚರಣೆಯನ್ನು ಆಚರಿಸಿದರು. ಸುಮಾರು 30ಕ್ಕೂ ಹೆಚ್ಚು ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಸಿಹಿಯನ್ನು ಹಂಚಿ , ಹಾಡಿ, ಕುಣಿದು, ಭಾವೈಕ್ಯತೆಯ ಕ್ಷಣಕ್ಕೆ ಸಾಕ್ಷಿಯಾದರು. ಈ ವೇಳೆ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಲೀಡ್ನ ಮುಖ್ಯಸ್ಥರಾದ ಜಗದೀಶ ಜಿ ಎಂ ಮಾತನಾಡಿ, ಸ್ನೇಹಕ್ಕೆ ಯಾವುದೇ ವಯಸ್ಸಿನ ಬಂಧನವಿಲ್ಲ. ಮೇಲು ಕೀಳು ಎಂಬ ಬೇಧವಿಲ್ಲ. ತಾಂತ್ರಿಕ ಶಿಕ್ಷಣದ ವಿದ್ಯಾಥರ್ಿಗಳು ಕೇವಲ ಅಧ್ಯಯನಕ್ಕಷ್ಟೇ ಸೀಮಿತವಾಗದೆ ಈ ರೀತಿಯಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಕುತ್ತಿರುವುದು. ಅನಾಥ ಮಕ್ಕಳಿಗೆ ನೆರವಾಗುವ ಮೂಲಕ ಸ್ನೇಹಿತರ ದಿನಾಚರಣೆಯನ್ನು ಆಚರಿಸುತ್ತಿರುವುದು ಹಲವಾರು ಜನರಿಗೆ ಮಾದರಿಯಾಗುವ ವಿಷಯ ಎಂದು ತಿಳಿಸಿದರು. ಲೀಡ್ನ ವಿದ್ಯಾಥರ್ಿನಿ ಅನನ್ಯ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅತ್ಯಂತ ಖುಷಿಯ ಕ್ಷಣದ ಜೊತೆಗೆ,ನಮ್ಮ ಬಾಲ್ಯದ ದಿನಗಳು ನೆನಪಾಗುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು. ವಿದ್ಯಾಥರ್ಿಗಳಾದ ಸಂತೋಷ, ಮಹಾಂತೇಶ, ಗಣೇಶ, ರಜನಿ, ಶಿವರಾಮ್ ಎಲ್ಲಾ ಮಕ್ಕಳಿಗೂ ಸಿಹಿಯನ್ನು ಹಂಚಿದರು.