ಶುಕ್ರವಾರ ‘ಅಸುರ ಸಂಹಾರ’

ಬೆಂಗಳೂರು, ಫೆ 25, ಹರಿಪ್ರಸಾದ್ ನಿರ್ಮಿಸಿ, ನಾಯಕನಾಗಿ ನಟಿಸಿರುವ ‘ಅಸುರ ಸಂಹಾರ’ ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗಲಿದೆ.ಒಳ್ಳೆ ಸಿನಿಮಾ ಮಾಡುವ ಯೋಜನೆ ಇತ್ತು ಗೆಳೆಯ ಪ್ರದೀಪ್ ಈ ಕತೆ ಹೇಳಿದಾಗ ಸಿನಿಮಾ ಶುರುವಾಯ್ತು.ಚಿತ್ರದಲ್ಲಿ ನನ್ನದು ಸ್ಟಿಲ್ ಫೋಟೋಗ್ರಾಫರ್ ಪಾತ್ರವಾಗಿದ್ದು ಮುಂದಿನ ತಂಗಿಯ ಒಳ್ಳೆಯ ಅಣ್ಣ ಆಗಿರುತ್ತೇನೆ ಎಂದು ನಾಯಕ ಹರಿಪ್ರಸಾದ ತಿಳಿಸಿದ್ದಾರೆ.

ಸೆನ್ಸಾರ್ ಮಂಡಲಿಯಿಂದ ಯು/ಎ ಪ್ರಮಾಣ ಪತ್ರ ಪಡೆದುಕೊಂಡಿರುವ ಚಿತ್ರವನ್ನು ಪ್ರದೀಪ್ ನಿರ್ದೇಶಿಸಿದ್ದಾರೆ. ರಕ್ತ ಪಾತ ಅತ್ಯಾಚಾರಕ್ಕೆ ಸಂಬಂದಿಸಿದ ಸಿನಿಮಾ ಇದಾಗಿದೆ. ಅಣ್ಣಾ ತಂಗಿ ಸೆಂಟಿಮೆಂಟ್ ಕೂಡ ಇದೆ.   ಅತ್ಯಾಚಾರಿಗಳಿಗೆ ಹೇಗೆ ಶಿಕ್ಷೆಯಾಗಬೇಕು,  ಅತ್ಯಾಚಾರಿಗಳನ್ನು ಹೇಗೆ ಕಂಟ್ರೋಲ್ ಮಾಡಬಹುದು ಎಂದು ತೋರಿಸಲಾಗಿದೆ ಎಂದು ಪ್ರದೀಪ್ ತಿಳಿಸಿದ್ದಾರೆ. ಹಾಸನದ ಶ್ರವಣಬೆಳಗೊಳ, ಚನ್ನರಾಯಪಟ್ಟಣ ಮುಂತಾದ ಕಡೆ ಚಿತ್ರೀಕರಣ ಆಗಿದ್ದು, ಹಾಡು ಟ್ರೇಲರ್ ಗೆ ಒಳ್ಳೆ ರೆಸ್ಪಾನ್ಸ್ ಬಂದಿದೆ.ಹರಿಪ್ರಸಾದ್, ಹರ್ಷಲ್ ರವಿ, ಲೋಕಿ, ದೀಕ್ಷಾ ಶೆಟ್ಟಿ, ಶಿವು, ಮಂಜುನಾಥ್ ಮೊದಲಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.