ಫ್ರೆಂಚ್ ಓಪನ್: ಸೆಮಿಫೈನಲ್ಸ್ ಗೆ ಸಾತ್ವಿಕ್-ಚಿರಾಗ್ ಶೆಟ್ಟಿ ಜೋಡಿ

ಪ್ಯಾರಿಸ್, ಅ 26:     ಪ್ರಶಸ್ತಿ ಗೆಲ್ಲುವ ಸಂಭಾವ್ಯ ಆಟಗಾರ್ತಿಯರೆಂದೇ ಬಿಂಬಿತರಾಗಿದ್ದ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಅವರು ಫ್ರೆಂಚ್ ಓಪನ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೋತು ಹೊರ ನಡೆದಿದ್ದಾರೆ. ಆದರೆ, ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಭಾರತ ಅಗ್ರ ಪುರುಷರ ಡಬಲ್ಸ್ ಜೋಡಿ ಸೆಮಿಫೈನಲ್ಸ್ ಗೆ ಪ್ರವೇಶ ಮಾಡಿದೆ. ಪ್ರಸಕ್ತ ಆವೃತ್ತಿಯ ಕಳೆದ ಆಗಸ್ಟ್ ತಿಂಗಳಿನಲ್ಲಿ ಥಾಯ್ಲೆಂಡ್ ಓಪನ್ ಟೂರ್ನಿಯಲ್ಲಿ ಭಾರತದ ಜೋಡಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ವಿಶ್ವದ ಎಂಟನೇ ಶ್ರೇಯಾಂಕದ ಕಿಮ್ ಅಸ್ಟ್ರುಪ್ ಹಾಗೂ ಆಂಡರ್ಸ್ ಸ್ಕಾರುಪ್ ವಿರುದ್ಧ ಗೆದ್ದು 21-13, 22-20 ಅಂತರದಲ್ಲಿ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಮಾಡಿತು.  ಗೆಲುವಿನೊಂದಿಗೆ ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ ಜೋಡಿ ಫ್ರೆಂಚ್ ಓಪನ್ನಲ್ಲಿ ಸತತ ಎರಡನೇ ಬಾರಿ ಸೆಮಿಫೈನಲ್ಸ್ ಪ್ರವೇಶ ಮಾಡಿದಂತಾಯಿತು.