ಲೋಕದರ್ಶನ ವರದಿ
ಕೊಪ್ಪಳ 02: ಕೊಪ್ಪಳ ಪ್ರಿಮೀಯರ್ ಲೀಗ್-2018 ಕ್ರಿಕೇಟ್ ಪಂದ್ಯಾವಳಿಯ ಕ್ರೀಡಾಪಟುಗಳಿಗೆ ರೈಮಂಡಸ್ ಷೋ ರೂಂ ಮಾಲೀಕರಾದ ಮುಸ್ತಫಾ ಹುಸೇನ್ ಕಂಪ್ಲಿ ಉಚಿತ ಸಮವಸ್ತ್ರ ನೀಡಿ ಪ್ರೋತ್ಸಾಹಿಸಿದರು.
ನಂತರ ಮಾಲೀಕರಾದ ಮುಸ್ತಫಾ ಹುಸೇನ್ ಕಂಪ್ಲಿ ಮಾತನಾಡಿ ಐಪಿಎಲ್ ಮಾದರಿಯಲ್ಲಿ ನಗರದಲ್ಲಿ ಪ್ರಪಥಮ ಬಾರಿಗೆ ಕ್ರಿಕೇಟ್ ಪಂದ್ಯಾವಳಿಯನ್ನು ಏರ್ಪಡಿಸುವ ಮೂಲಕ ಜಿಲ್ಲೆಯಲ್ಲಿ ಇರುವ ಯುವ ಪ್ರತಿಭಾವಂತ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸಿ ಕೊಡುವ ಪ್ರಯತ್ನವನ್ನು ಅಮೀನಪುರ ಸ್ಪೋಟ್ರ್ಸ ಕ್ಲಬ್ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಕೆ.ರಾಜಶೇಖರ ಹಿಟ್ನಾಳ, ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ, ಡಾ.ಮಹೇಂದ್ರ ಕಿಂದ್ರೆ, ಡಾ.ಅಜಯ್ ಬಾಚಲಾಪುರು, ಸೇರಿದಂತೆ ಕ್ರೀಡಾಪಟುಗಳು ಉಪಸ್ಥಿತರಿದ್ದರು.