ಆಯುಷ್ಮಾನ್ ಭಾರತ್ ಯೋಜನೆಯಡಿ ಕೋಟಿ ಮಂದಿಗೆ ಉಚಿತ ಚಿಕಿತ್ಸೆ; ಪ್ರಧಾನಿ ಮೋದಿಗೆ ಅಭಿನಂದನೆ

ನವದೆಹಲಿ, ಮೇ ೨೦,ಆಯುಷ್ಮಾನ್  ಭಾರತ್  ಯೋಜನೆಯಡಿ ದೇಶದಲ್ಲಿ  ಕಳೆದ ೧೯ ತಿಂಗಳಲ್ಲಿ  ೧ ಕೋಟಿ ಮಂದಿ  ಉಚಿತವಾಗಿ  ವೈದ್ಯಕೀಯ ಚಿಕಿತ್ಸೆ ಕಲ್ಪಿಸಲಾಗಿದ್ದು,  ಇದೊಂದು  ದಾಖಲೆ   ಎಂದು  ಕೇಂದ್ರ ವಾರ್ತಾ ಮತ್ತು  ಪ್ರಸಾರ ಖಾತೆ  ಸಚಿವ  ಪ್ರಕಾಶ್  ಜಾವಡೇಕರ್   ಟ್ವೀಟ್ ಮಾಡಿದ್ದಾರೆ. ಆಯುಷ್ಮಾನ್  ಭಾರತ್  ಯೋಜನೆ  ದೇಶದ  ಅತ್ಯಂತ  ಯಶಸ್ವಿ ಹಾಗೂ  ಅತಿ ದೊಡ್ಡ ಆರೋಗ್ಯ  ರಕ್ಷಣೆಯ ಯೋಜನೆಯಾಗಿದೆ.  ಇಂತಹ  ಮಹತ್ವದ ಯೋಜನೆಯನ್ನು  ದೇಶಕ್ಕೆ ನೀಡಿದ  ಪ್ರಧಾನಿ ನರೇಂದ್ರ ಮೋದಿ  ದೂರದರ್ಶಿತ್ವವನ್ನು   ಪ್ರಕಾಶ್ ಜಾವಡೇಕರ್ ಅಭಿನಂದಿಸಿದ್ದಾರೆ.