ಜಿಲ್ಲೆಯಲ್ಲಿ 13,500 ರೋಗಿಗಳಿಗೆ ಉಚಿತ ಚಿಕಿತ್ಸೆ

ಬಾಗಲಕೋಟೆ: ಆರೋಗ್ಯ ಸೇವೆ ಒದಗಿಸುವ ಮಹತ್ವದ ಆಯುಷ್ಮಾನ ಭಾರತ್-ಆರೋಗ್ಯ ಕನರ್ಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 13,500 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ 3700 ರೋಗಿಗಳು ಚಿಕಿತ್ಸೆ ಪಡೆದರೆ, ಹೆಚ್ಚಿನ ಚಿಕಿತ್ಸೆಗಾಗಿ ರೆಫರಲ್ ಪತ್ರ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ 9800 ರೋಗಿಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಈ ಪೈಕಿ 4800 ಜನ ಬಾಗಲಕೋಟೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಿಪಿಎಲ್ ಕಾರ್ಡ ಹೊಂದಿರುವ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ರೂ.ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದ್ದು, ಎ.ಪಿ.ಎಲ್ ಕುಟುಂಬಗಳಿಗೆ ಸಕರ್ಾರಿ ಪ್ಯಾಕೇಜ್ ದರದ ಶೇ.30 ರಷ್ಟು ವೆಚ್ಚ ಲಭ್ಯವಿದ್ದು, ವಾಷರ್ಿಕ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂ.ವರೆಗೆ ಲಭ್ಯವಿರುತ್ತದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯಡಿಯಲ್ಲಿ ಚಿಕಿತ್ಸೆಗಾಗಿ ಹತ್ತಿರದ ಜಿಲ್ಲಾ, ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ತೆರಳಿ ಆಧಾರ ಕಾರ್ಡ ಮತ್ತು ಪಡಿತರ ಕಾರ್ಡ ಹಾಜರುಪಡಿಸಿ ರೂ.10 ಪಾವತಿಸಿ ಆರೋಗ್ಯ ಕಾರ್ಡ ಪಡೆಯಬಹುದಾಗಿದೆ. ಅಲ್ಲದೇ ಕನರ್ಾಟಕ ಒನ್, ಸೇವಾ ಸಿಂಧೂ ಕೇಂದ್ರಗಳಲ್ಲಿ ಕಾಗದದ ಕಾಡರ್ಿಗೆ 10 ರೂ., ಪ್ಲಾಸ್ಟಿಕ್ ಕಾಡರ್ಿಗೆ 35 ರೂ.ಗಳನ್ನು ಪಾವತಿಸಿ ಕಾರ್ಡ ಪಡೆಯಬಹುದಾಗಿದೆ. ಈ ಕಾರ್ಡ ಮೂಲಕ ನಿಮ್ಮ ಕಾಯಿಲೆಗೆ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ರೆಫರಲ್ ಪತ್ರದೊಂದಿಗೆ ನೊಂದಾಯಿತ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ. ತುತರ್ು ಚಿಕಿತ್ಸೆಗಳಿಗೆ ಯಾವುದೇ ರೀತಿಯ ರೆಫರಲ್ ಇರುವದಿಲ್ಲ ಎಂದು ತಿಳಿಸಿದ್ದಾರೆ. 

ಬಾಗಲಕೋಟೆ ಜಿಲ್ಲೆಯಿಂದ ಒಟ್ಟು 98 ಸಾವಿರ ಆಯುಷ್ಮಾನ್ ಭಾರತ-ಆರೋಗ್ಯ ಕನರ್ಾಟಕ ಕಾರ್ಡಗಳನ್ನು ನೀಡಲಾಗಿದೆ. ಈ ಯೋಜನೆಯಡಿ 1650 ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಲಭ್ಯವಿದ್ದು, ಸಾಮಾನ್ಯ ದ್ವಿತೀಯ ಹಂತದಲ್ಲಿ 291 ಚಿಕಿತ್ಸೆಗಳನ್ನು ಸಕರ್ಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತದೆ. ಕ್ಲಿಷ್ಟಕರ ದ್ವಿತೀಯ ಹಂತರ 254 ಮತ್ತು ತೃತೀಯ ಹಂತರ 900 ಚಿಕಿತ್ಸಾ ವಿಧಾನಗಳನ್ನು ಹಾಗೂ 169 ತುತರ್ು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೇ ನೋಂದಾಣಿತ ಸಕರ್ಾರಿ ಮತ್ತು ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಆರೋಗ್ಯ ಕನರ್ಾಟಕ ಎಂಬ ಆರೋಗ್ಯ ರಕ್ಷಣಾ ಯೋಜನೆಯನ್ನು ಕನರ್ಾಟಕ ಸರಕಾರ ಮಾರ್ಚ 2, 2018 ರಿಂದ ಜಾರಿಯಲ್ಲಿದ್ದು, ನಂತರ ಭಾರತ ಸರಕಾರವು ಸಹ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಿದೆ. 

  ಈ ಎರಡು ಯೋಜನೆಗಳನ್ನು ಸಂಯೋಜಿಸಿ ಆಯುಷ್ಮಾನ ಭಾರತ್-ಆರೋಗ್ಯ ಕನರ್ಾಟಕ ಎಂಬ ಯೋಜನೆಯನ್ನು ಭರವಸೆಯ ಮಾದರಿಯಲ್ಲಿ ಅಕ್ಟೋಬರ 30, 2018 ರಿಂದ ಅನುಷ್ಠಾನಗೊಳಿಸಿದೆ. ಎಲ್ಲರಿಗೂ ಒಂದೇ ಸೂರಿನಡಿ ಚಿಕಿತ್ಸೆ ನೀಡುವ ಯೋಜನೆ ಇದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಡಾ.ಪ್ರಕಾಶ ಬಿರಾದಾರ ಪ್ರಕಟಣೆಯಲ್ಲಿ ಕೋರಿದ್ದಾರೆ.