ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರ ಕಾರ್ಯಕ್ರಮ

Free summer camp program for SSLC children

ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ  ಉಚಿತ ಬೇಸಿಗೆ ಶಿಬಿರ ಕಾರ್ಯಕ್ರಮ

ಹುಕ್ಕೇರಿ, 02; ಬೇಸಿಗೆ ರಜೆಯನ್ನು ವ್ಯರ್ಥ ಮಾಡದೇ ಸದಭಿರುಚಿಯ ಚಟುವಟಿಕೆಗಳಲ್ಲಿ ಮಕ್ಕಳು  ಪಾಲ್ಗೊಳ್ಳಲಿ ಎಂದು ಶಿಬಿರದ ನಿರ್ವಾಹಕ  ಶಶಿಕಾಂತ ಬಂಗಿ ಹೇಳಿದರು. 

       ಅವರು ಹುಕ್ಕೇರಿ ತಾಲೂಕು ನೇರ್ಲಿ ಗ್ರಾಮದಲ್ಲಿ ಹೆಲ್ಪಿಂಗ್ ಹ್ಯಾಂಡ್ ಚಾರಿಟೇಬಲ್ ಟ್ರಸ್ಟ್‌ ಮತ್ತು ಸರ್ಕಾರಿ ಪ್ರೌಢ ಶಾಲೆ ನೇರಲಿ ಇವರ ಸಹಯೋಗದಲ್ಲಿ  ಹಮ್ಮಿಕೊಂಡ ಎಸ್ ಎಸ್ ಎಲ್ ಸಿ ಮಕ್ಕಳಿಗಾಗಿ  ಉಚಿತ ಬೇಸಿಗೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

    ಗ್ರಾಮದ ಸರಕಾರಿ  ಪ್ರೌಢಶಾಲೆಯಲ್ಲಿ ಏಪ್ರಿಲ್ 1ರಿಂದ ಮೇ 25 ರ ವರೆಗೆ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ನಮ್ಮ ಟ್ರಸ್ಟ್‌ ಹಮ್ಮಿಕೊಂಡಿದೆ. ವೈವಿಧ್ಯಮಯ ಚಟುವಟಿಕೆ ನಡೆಸಲು ಈ ಟ್ರಸ್ಟ್‌ ಉದ್ದೇಶಿಸಿದೆ. ಪ್ರತಿ ದಿನ ಬೆಳಿಗ್ಗೆ ಎಂಟು ಗಂಟೆಯಿಂದ ನಡೆಸಲಾಗುವ ಶಿಬಿರದಲ್ಲಿ ವಿಜ್ಞಾನ, ಗಣಿತ, ಇಂಗ್ಲಿಷ್, ಸೇರಿದಂತೆ ಮಕ್ಕಳಿಗೆ ಸಂಬಂಧಿಸಿದ ಇತರೆ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಲಿ ಎಂಬುದು ಶಿಬಿರ ಆಯೋಜನೆಯ ಉದ್ದೇಶವಾಗಿದೆ. ಮಕ್ಕಳು ಸರಿಯಾದ ಸಮಯಕ್ಕೆ ಬಂದು ಬೇಸಿಗೆ ಶಿಬಿರ ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.  

    ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್ ಎಸ್ ಹಿರೇಮಠ. ಮಾತನಾಡಿ, ನಮ್ಮ ಶಾಲೆಯಲ್ಲಿ ಹೆಲ್ಪಿಂಗ್ ಹ್ಯಾಂಡ್ ಚಾರಿಟೇಬಲ್ ಟ್ರಸ್ಟ್‌ ನವರು ಯಾವುದೇ ರೀತಿಯ ಸಂಭಾವನೆ ಅಪೇಕ್ಷಿಸದೆ ನಮ್ಮ ಮಕ್ಕಳಿಗೆ ಉಚಿತವಾಗಿ ನಿರಂತರ  ಎರಡು ತಿಂಗಳು ಕಾಲ ಬೇಸಿಗೆ ಶಿಬಿರ ನಡೆಸುತ್ತಿದ್ದಾರೆ.  ಅವರಿಗೆ ನಮ್ಮ ಶಾಲೆಯ ಶಿಕ್ಷಕ,  ಪಾಲಕ ಮತ್ತು ಮಕ್ಕಳ ವತಿಯಿಂದ ತುಂಬು ಹೃದಯದ ಧನ್ಯವಾದ ಹೇಳಿದರು. 

 ಈ ಶಿಬಿರ 10ನೇ ತರಗತಿಗೆ ಬರುವ ಮಕ್ಕಳಿಗೆ ಕಲಿಕೆಯ ಮಾರ್ಗದರ್ಶನ ಮಾಡಲಿದೆ. ನಮ್ಮ ಪ್ರೌಢಶಾಲಾ ಆವರಣ  ವಿಶಾಲವಾಗಿದ್ದು ಮಕ್ಕಳು ಶಿಬಿರದಲ್ಲಿ ಓದುವದರ ಜೊತೆಗೆ ಸ್ವಲ್ಪ ಓದು ಸ್ವಲ್ಪ ಮೋಜು ಮಾದರಿಯಲ್ಲಿ ಪಾಠಗಳು ನಡೆಯುತ್ತವೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಆಯಾ ವಿಷಯವಾರು ಮಕ್ಕಳಿಗೆ  ಹೇಳಿಕೊಡಲಾಗುವುದು. ಇದೆಲ್ಲದರ ಜೊತೆಗೆ ಮಕ್ಕಳು ಶಿಸ್ತಿನ ಸಿಪಾಯಿಗಳಂತೆ ಹಾಜರಾತಿಯ ಮೂಲಕ  ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಅವರು ಹೇಳಿದರು. ಎಸ್ ಡಿ ಎಮ್ ಸಿ ಅಧ್ಯಕ್ಷ ಚಿದಾನಂದ ದೇಸಾಯಿ ಶಿಬಿರ ಉದ್ದೇಶಿಸಿ ಮಾತನಾಡಿದರು.  

  ಶಾರದಾ ದೇವಿ ಪೂಜೆ ಮತ್ತು ದ್ವೀಪ  ಪ್ರಜ್ವಲನೆ ಮೊದಲು ಮಾಡಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸುಭಾಸ ಹಂದಿಗೂಡಮಠ, ಸತಿಗೌಡ ಪಾಟೀಲ, ಶಿವಾನಂದ ಸೆಂಡೂರೆ, ಸಂಜು ಹುಬರಟ್ಟಿ, ಶಿಲ್ಪಾ ಪಾಟೀಲ, ರಕ್ಷಿತಾ ಸನದಿ, ಶ್ರೀದೇವಿ ಹುದ್ದಾರ, ಲಕ್ಷ್ಮಿ ಮಠಪತಿ,    ಶಿಕ್ಷಕರಾದ ಎಸ್‌ಎಂ ಮನಗುತ್ತಿ, ರಾಜಶ್ರೀ ಬಿ ಎಸ್, ಗಂಗಾಧರ ವನ್ನೂರ, ಉಷಾ ಹಿಪ್ಪರಗಿ, ಪ್ರಸಾದ ಕುಲಕರ್ಣಿ, ಶ್ರೇಯ ಪಟೇದ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ರಾಜು ನಡುಮನಿ ಸ್ವಾಗತಿಸಿದರು, ಜಯಶ್ರೀ ಕುಲಕರ್ಣಿ ನಿರೂಪಿಸಿದರು ಪ್ರೀತಮ್ ನಿಡಸೋಶಿ ವಂದಿಸಿದರು.