ತಾಳಿಕೋಟೆ 31: ಬಡಮಕ್ಕಳ ಕಲಿಕೆಗೆ ಅನುಕೂಲಕ್ಕಾಗಿ ಸುಮಾರು ವರ್ಷಗಳಿಂದ ಮದನಸಾಬ ಸಾಲೋಡಗಿ ಅವರು ಉಚಿತ ನೋಟಬುಕ್ಗಳನ್ನು ವಿತರಿಸುತ್ತಾ ಸಾಗಿರುವದು ಅವರ ಜನಪರ ಕಾರ್ಯವನ್ನು ಮೆಚ್ಚುವಂತಹದ್ದಾಗಿದೆ ಎಂದು ಶಿಕ್ಷಕ ರೋಷನ್ ಡೋಣಿ ಅವರು ನುಡಿದರು.
ಪಟ್ಟಣದ ಕೆಬಿಎಂಪಿಎಸ್ ಶಾಲಾ ವಿದ್ಯಾಥರ್ಿಗಳಿಗೆ ಮದನಸಾಬ ಸಾಲೋಡಗಿ ಅವರು ತಮ್ಮ ತಂದೆಯ ಸ್ಮರಣಾರ್ಥವಾಗಿ ವಿದ್ಯಾಥರ್ಿಗಳಿಗೆ ಕೊಡಮಾಡಿದ ಉಚಿತ ನೋಟಬುಕ್ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಮದನಸಾಬ ಸಾಲೋಡಗಿ ಅವರು ಅತ್ಯಂತ ಕಡುಬಡತನದಲ್ಲಿ ಬೆಳೆದುಬಂದವರಾಗಿದ್ದಾರೆ ಬಡ ವಿದ್ಯಾಥರ್ಿಗಳ ಕಷ್ಟವನ್ನು ಅರೀತವರಾಗಿದ್ದಾರೆ ಬಡತನದಿಂದ ಬೆಳೆದುಬಂದ ಅವರು ಈಗ ಮುಂಬಯಿಯಲ್ಲಿ ಪ್ರತಿಷ್ಠಿತ ಕೈಗಾರಿಕೆಗಳನ್ನು ಸ್ಥಾಪಿಸಿ ನೂರಾರು ಜನರಿಗೆ ದ್ಯೋಗ ಕೊಡುವಂತಹ ಕಾರ್ಯದಲ್ಲಿ ನಿರತರಾಗಿದ್ದಾರೆ ಮದನಸಾಬ ಅವರು ತಾಲೂಕಿನ ನೀರಲಗಿ ಗ್ರಾಮದವರಾಗಿದ್ದು ಅವರ ತಂದೆಯ ಸ್ಮರಣಾರ್ಥವಾಗಿ ಬಡಮಕ್ಕಳ ಶಿಕ್ಷಣ ಕಲಿಕೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದುಡಿಮೆಯ ಸ್ವಲ್ಪಭಾಗವನ್ನು ಜನಪಯೋಗಕ್ಕಾಗಿ ಉಪಯೋಗಿಸುತ್ತಿದ್ದಾರೆ ಅವರ ಈ ಜನಪರ ಕಾರ್ಯ ಮುಂದುವರೆಯಲಿ ಎಂದು ಆಶಿಸಿದರು.
ಇದೇ ಸಮಯದಲ್ಲಿ ಕೆಬಿಎಂಪಿಎಸ್ ಶಾಲೆಯ ಹಾಗೂ ಯುಜಿಎಸ್ ಶಾಲೆಯ ವಿದ್ಯಾಥರ್ಿಗಳಿಗೆ ಮದನಸಾಬ ಅವರು ಸಾಮೂಹಿಕವಾಗಿ ನೋಟಬುಕ್ಗಳನ್ನು ವಿತರಿಸಿದರು.
ಈ ಸಮಯದಲ್ಲಿ ಎಂ.ಎಸ್.ಮಮದಾಪೂರ, ಯುಜಿಎಸ್ ಶಾಲೆಯ ಮುಖ್ಯಗುರುಗಳಾದ ಎಂ.ಎಲ್.ಚೌದ್ರಿ, ಸಿಆರ್ಸಿ ಎಸ್.ಆರ್.ವಾಲಿಕಾರ, ಸಕರ್ಾರಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ಎಂ.ಕೆ.ಭಾಗವಾನ, ಎಚ್.ಎಂ.ಮಕಾಂದಾರ, ಎ.ವಾಯ್.ವಿಜಾಪೂರ, ಕೆಬಿಎಂಪಿಎಸ್ ಶಾಲಾ ಮುಖ್ಯಗುರುಗಳಾದ ಎಲ್.ಬಿ.ಪಾಟೀಲ, ಎಸ್.ಕೆ.ಕಾಲೇಜ್ ದೈಹಿಕ ಶಿಕ್ಷಕ ಆರ್.ಎಲ್.ಕೊಪ್ಪದ, ಎಪಿಎಂಸಿ ಸದಸ್ಯ ಬಿಜ್ಜಾನಲಿ ನೀರಲಗಿ, ಬಿ.ಎಸ್.ಹೊಳಿ, ಆರ್.ಎಂ.ಕಶಿದಗಾರ, ಬಂದೇನವಾಜ ಕಂಕರಪೀರ ಬಂದೇನವಾಜ ಸರಕೋಲಿ, ಎಫ್.ಕೆ.ಮಕಾಂದಾರ, ಮಹಿಬೂಬ ತಾರಘರ, ಮೊದಲಾದವರು ಇದ್ದರು.