ಲೋಕದರ್ಶನ ವರದಿ
ರಾಣಿಬೆನ್ನೂರು06: ಇಂದಿನ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಮಕ್ಕಳ ಪ್ರತಿಭೆಯನ್ನು ಹೊರ ಹಾಕಲು ಸೆಮಿನಾರ್ಗಳು ಅವಶ್ಯಕವಾಗಿವೆ ಎಂದು ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಂ.ಎಂ.ಈಟಗೇರ ಹೇಳಿದರು.
ಇಲ್ಲಿನ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ಚರ್ಚ ರಸ್ತೆಯ ಶಿಕ್ಷಕರ ಸಂಘದ ಸಭಾಭವನದಲ್ಲಿ ಆಯೋಜಿಸಿದ್ದ ವಿದ್ಯಾಥರ್ಿಗಳು, ಪೋಷಕರು ಹಾಗೂ ಉಪಾಧ್ಯಾಯರುಗಳಿಗೆ ಉಚಿತ ಮೆಮೋರಿ ಸೆಮಿನಾರ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಮಾನಗಳಲ್ಲಿ ನಿತ್ಯ ಜೀವನದ ಒತ್ತಡದಲ್ಲಿ ಮಕ್ಕಳನ್ನು ಶೈಕ್ಷಣಿಕವಾಗಿ ಎಲ್ಲ ರೀತಿಯಿಂದ ಸಿದ್ಧತೆ ಮಾಡುವುದು ಕಷ್ಟಕರ ವಿಷಯ ಹೀಗಿರುವಾಗ ಇಂತಹ ಸೆಮಿನಾರ್ಗಳು ಮಕ್ಕಳನ್ನು ಮಾನಸಿಕವಾಗಿ ಸಿದ್ಧಗೊಳಿಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಸಹಾಯಕವಾಗುವುದು.
ಪರಿಣಿತ ಪಡೆದ ಸಂಪನ್ಮೂಲ ವ್ಯಕ್ತಿಗಳಿಂದ ಜ್ಞಾನ ಸಂಪಾದಿಸಿಕೊಂಡು ಪಾಲಕರಾದವರು ಮಕ್ಕಳನ್ನು ಪ್ರೋತ್ಸಾಹಿಸಿ ಹೊಸ-ಹೊಸ ಆವಿಷ್ಕಾರಗಳತ್ತ ಕೊಂಡೊಯ್ಯುವಂತೆ ಪ್ರೇರೇಪಿಸಬೇಕೆಂದರು.
ಶಿಕ್ಷಕರ ಸಹಕಾರಿ ಪತ್ತಿನ ಮಾಜಿ ಅಧ್ಯಕ್ಷೆ ಜಯಶ್ರೀ ಮುರಡೆಪ್ಪನವರ ಮಾತನಾಡಿ, ಇಂದಿನ ಮಕ್ಕಳು ಒತ್ತಡದ ಜೀವನ ಶೈಲಿಯಲ್ಲಿ ಅತೀ ಹೆಚ್ಚು ಮೊಬೈಲ್ ಬಳಕೆಯಿಂದ ಓದಿನಲ್ಲಿ ಏಕಾಗ್ರತೆ ಕ್ಷೀಣಿಸುತ್ತಿದ್ದು ಪರೀಕ್ಷೆಯಲ್ಲಿ ವಿಷಯಗಳು ಮರೆತು ಅಂಕಗಳಿಸುವಲ್ಲಿ ಹಿನ್ನಡೆ ಅನುಭವಿಸುವರು ಈ ನಿಟ್ಟಿನಲ್ಲಿ ಮಕ್ಕಳು ಇಂತಹ ಸೆಮಿನಾರ್ಗಳ ಸದುಪಯೋಗ ಪಡೆಯಬೇಕೆಂದರು.
ಮೈಸೂರಿನ ಖ್ಯಾತ ಅಂತರಾಷ್ಟ್ರೀಯ ತರಬೇತಿದಾರ ಎಸ್.ಪ್ರಶಾಂತ, ವಿದ್ಯಾಥರ್ಿಗಳು ಸ್ಪಧರ್ಾತ್ಮಕ ಪರೀಕ್ಷೆಗಳ ತಯಾರಿ, ವಿಷಯ ಗ್ರಹಿಕೆ, ನೆನೆಪಿನ ಶಕ್ತಿ ವೃದ್ಧಿಸುವ ಮತ್ತು ಓದುವ ಪದ್ಧತಿ ಕುರಿತು ಸವಿಸ್ತಾರವಾಗಿ ಮಕ್ಕಳಿಗೆ ಮಾಹಿತಿ ಒದಗಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಎಸ್.ಸಿ.ಷಡಕ್ಷರಿಮಠ, ಗೀತಾಂಜಲಿ, ಕಲಾವತಿ, ಸಂಘದ ಸದಸ್ಯರು ಸೇರಿದಂತೆ ಪಾಲಕರು, ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ಮಕ್ಕಳು ಇದ್ದರು.