ನೂತನ ವಧು-ವರರ ಉಚಿತ ಸಾಮೂಹಿಕ ವಿವಾಹ

ಲೋಕದರ್ಶನ ವರದಿ

ಬೈಲಹೊಂಗಲ 18:  ಇಸ್ಸಾ ಫೌಂಡೇಶನ್ ಜಾಮಿಯಾ ಫೈಜಾನುಲ್ ಕುರಾನ ಅಹ್ಮದಾಬಾದ ಹಾಗೂ ಇಸ್ಲಾಮಿಯಾ ಸೋಶಿಯಲ್ ವೆಲಫೇರ್, ಏಜುಕೇಶನಲ್ ಸೊಸಾಯಿಟಿ ಬೈಲಹೊಂಗಲ ಇವರ ಸಂಯುಕ್ತ ಆಶ್ರಯದಲ್ಲಿ ಹಿಂದೂ ಹಾಗೂ ಮುಸ್ಲಿಂ ಧರ್ಮದ 100 ವಧುವರರ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಫೆ.21 ಶುಕ್ರವಾರ ಮುಂಜಾನೆ 10 ಘಂಟೆಗೆ ತಾಲೂಕಿನ ಬೈಲವಾಡ ಕ್ರಾಸ ಹತ್ತಿರದ ಮದರಸಾ-ಎ-ಅರಬಿಯಾ ಅನ್ವಾರೂಲ ಉಲೂಮದಲ್ಲಿ  ಜರುಗಲಿದೆ ಎಂದು ಇಸ್ಲಾಮಿಯಾ ಸೋಶಿಯಲ್ ವೆಲ್ಫೇರ್ ಮತ್ತು ಏಜುಕೇಶನಲ್ ಸೊಸಾಯಿಟಿ ಉಪಾಧ್ಯಕ್ಷ ಡಾ.ಎಸ್.ಐ.ಖಾಜಿ ಹೇಳಿದರು.

 ಪಟ್ಟಣದ  ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,  ಕೋಮು ಸೌಹಾರ್ಧತೆಯನ್ನು ದೇಶಕ್ಕೆ ಸಾರಬೇಕೆಂಬ ಉದ್ದೇಶದಿಂದ ಹಿಂದೂ-ಮುಸ್ಲಿಂ ವಧುವರರ ಉಚಿತ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿದ್ದು, ಹಿಂದೂ ವಧು-ವರರಿಗೆ ಹಿಂದೂ ಸಂಪ್ರದಾಯದಂತೆ, ಮುಸ್ಲಿಂ ವಧು-ವರರಿಗೆ ಮುಸ್ಲಿಂ ಸಂಪ್ರದಾಯದಂತೆ ಮೌಲಾನಾಗಳು ಮತ್ತು ಸ್ವಾಮೀಜಿಗಳು ವಿವಾಹ ಕಾರ್ಯವನ್ನು ನೆರವೇರಿಸುವರು. 

      ಅಹ್ಮದಾಬಾದದ ಇಸ್ಸಾ ಫೌಂಡೇಶನ್ ಜಾಮಿಯಾ ಫೈಜಾನುಲ್ ಕುರಾನ ವತಿಯಿಂದ ಒಂದು ಜೋಡಿಗೆ ಐದು ಜೊತೆ ಸಮವಸ್ತ್ರ, ಪ್ರಿಜ್, ಹೊಲಿಗೆಯಂತ್ರ, ಪಲ್ಲಂಗ, ಕುಚರ್ಿ, ಬಾಂಡೆ ಸಾಮಾಗ್ರಿಗಳು, ಟ್ರೇಜರಿ ಹೀಗೆ ಇನ್ನೂ ಅನೇಕ ಮನೆ ಬಳಕೆ ಸಾಮಾಗ್ರಿಗಳನ್ನು ಸುಮಾರು   60 ರಿಂದ 70 ಸಾವಿರ ರೂಪಾಯಿ ಬೆಲೆಯುಳ್ಳ ಸಾಮಾಗ್ರಿಗಳನ್ನು, ಮುಸ್ಲಿಂ ವಧು-ವರರಿಗೆ ಕುರಾನ ಮತ್ತು ಹಿಂದೂ ವಧು-ವರರರಿಗೆ ಭಗವದ್ಗೀತೆ ನೀಡಲಾಗುತ್ತಿದೆ ಎಂದರು. ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಉಚಿತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸದಲ್ಲದೇ ಹಿಂದೂ ಮುಸ್ಲಿಂ ಭಾವೈಕ್ಯತೆ ಸಂದೇಶ ದೇಶಾದ್ಯಂತ ಮೊಳಗಲಿ ಎಂಬ ಉದ್ದೇಶವೇ ನಮ್ಮದಾಗಿದ್ದು. ಬೃಹದಾಕಾರ ಪೆಂಡಾಲ ಕುಡಿಯುವ ನೀರು, ಪಾಕರ್ಿಂಗ, ಸಸ್ಯಾಹಾರಿ ಊಟ, ಶಿಸ್ತುಬದ್ದವಾಗಿ ಮಾಡಲಾಗಿದೆ. ತಾಲೂಕಿನ ಹಿಂದೂ-ಮುಸ್ಲಿಂ ಹಿರಿಯರು ಹಾಗೂ ಯುವಕರ ಸೇವಾ ತಂಡಗಳು ಕಾರ್ಯನಿರ್ವಹಿಸಲಿವೆ ಎಂದರು.

    ಮೊಹ್ತಮಿಂ ಮದರಸಾ ಅರಬಿಯಾ ಅನ್ವಾರುಲ್ ಉಲೂಮ  ಮೌಲಾನಾ ಶೌಕತ ದೀವಾನಗೇರಿ ಮಾತನಾಡಿ, ಬಡ ಜನತೆಗೆ ಮದುವೆ ಮಾಡಿಕೊಳ್ಳಲು ಕಷ್ಟಕರವಾಗಿದೆ. ಕಷ್ಟವನ್ನು ದೂರಮಾಡಿ ಬಡವರು ಖುಷಿ ಜೀವನ ಸಾಗಿಸಲೆಂಬ ಉದ್ದೇಶ ಹೊಂದಿದ್ದು, ಈ ರೀತಿಯಾಗಿ ಸರ್ವಧರ್ಮಗಳ ಬಡ ಮಕ್ಕಳ ಮದುವೆಗಳನ್ನು ದೇಶಾದ್ಯಂತ ದಾನಿಗಳು ಮಾಡಲಿ ಎಂಬ ಸದುದ್ದೇಶ ಹೊತ್ತು ಇಲ್ಲಿ ಸರ್ವಧರ್ಮಗಳ ವಧು-ವರರ ಉಚಿತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿದ್ದೆವೆ. ಭಾರತ ದೇಶ ಜಾತ್ಯಾತೀತ ದೇಶವೆಂದು ಇಡೀ ವಿಶ್ವಕ್ಕೆ ಸಂದೇಶ ಸಾರಲು ಈ ಉಚಿತ ಸಾಮೂಹಿಕ ವಿವಾಹಗಳನ್ನು ನೆರವೇರಿಸುತ್ತಿದ್ದೇವೆ. ಈ ಭಾವೈಕ್ಯತೆಯ ಸಾಮೂಹಿಕ ವಿವಾಹದಲ್ಲಿ ಹಿಂದೂ,ಕ್ರೈಸ್ತ್, ಮುಸಲ್ಮಾನ ಧರ್ಮಗುರುಗಳು ನೇತೃತ್ವ ವಹಿಸಲಿದ್ದಾರೆ. 

        ಗುಜರಾತ ರಾಜ್ಯದ  ಶೇಖುಲ ಹದೀಸ ಜಾಮಿಯಾ ಅರಬಿಯಾ ಕಾಸಮಿಯಾ ಖರೋಡ ಹಜರತ ಮೌಲಾನಾ ಮುಹಮ್ಮದ ಹನೀಫ ಲೋಹಾರವಿ ಅಧ್ಯಕ್ಷತೆ ವಹಿಸುವರು. ಶಾಸಕರು, ಮಾಜಿ ಶಾಸಕರು, ಗಣ್ಯರು, ಅಧಿಕಾರಿಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ.

         ಗೋಷ್ಠಿಯಲ್ಲಿ ಡಾ.ಎಸ್.ಎಂ.ಸಂಗೊಳ್ಳಿ, ಅಖ್ತರ ತಾಳಿಕೋಟಿ, ಸಲೀಂ ತಿಗಡಿ, ಮಹ್ಮದಸಾಬ ನದಾಫ, ಮಹ್ಮದಹಾಶೀಂ ಕಂಪು, ಮುಪ್ತಿ ಅಬ್ಬಾಸ ರಫಾಯಿ, ದಸ್ತಗೀರಸಾಬ ದಾಸ್ತಿಕೊಪ್ಪ, ಬುಡ್ಡೇಸಾಬ ಮದಲಮಟ್ಟಿ, ಮಹ್ಮದರಫೀಕ ನಾಯಿಕ, ಶಫೀ ಹುಬ್ಬಳ್ಳಿ, ತಮೀಮ ಮಾನೂರಶೇಖ, ಹಾಫೀಜ ಇಸಾಕ ದೇಸಾಯಿ, ಫಕ್ರುದ್ದೀನ ಮೊಖಾಶಿ, ಶಕೀಲ ಸೈಯದ ಇದ್ದರು.