ಉಚಿತ ಬಂಜೆತನ ನಿವಾರಣಾ ಶಿಬಿರ

ಲೋಕದರ್ಶನ ವರದಿ

ಕಾಗವಾಡ 22: ಕಳೇದ ಅನೇಕ ವರ್ಷಗಳಿಂದ ಮಕ್ಕಳ ಭಾಗ್ಯ ದೊರೆಯದೆಯಿರುವ ದಂಪತಿಗಳಿಗೆ ಮಿರಜದ ಡಾ.ಸಚೀನ ಆಸ್ಪತ್ರೆಯಲ್ಲಿ ಆಧುನಿಕ ಉಪಚಾರ ವ್ಯವಸ್ಥೆ ಪ್ರಾರಂಭಿಸಿದ್ದರಿಂದ ಅನೇಕರ ಬಂಜೆತನ ಸಮಸ್ಯೆಗಳು ಇತ್ಯರ್ಥಗೊಂಡಿವೆಯೆಂದು ಖ್ಯಾತ ಬಂಜೇತನ ನಿರಾವರಣಾ ತಜ್ಞರಾದ ಡಾ.ಸಚೀನ ಸುಗಣ್ಣವರ ಮಿರಜದಲ್ಲಿ ಹೇಳಿದರು. ಮಿರಜದ ಸಚೀನ ಆಸ್ಪತ್ರೆಯಲ್ಲಿ ಭಾನುವಾರ ರಂದು ಉಚಿತ ಬಂಜೆತನ ನಿರಾವಣಾ ಶಿಬಿರ ಹಮ್ಮಿಕೊಂಡಿದ್ದರು. ಶಿಬಿರ ಉದ್ಘಾಟಿಸಿ ಡಾ.ಸಚೀನ ಸುಗಣ್ಣವರ ಉಪಚಾರಿಸಿಕೊಳ್ಳುವ ದಂಪತಿಗಳಿಗೆ ಹೇಳಿದದು.

ಆಸ್ಪತ್ರೆಯಲ್ಲಿ ಆಧುನಿಕ ಉಪಚಾರ ವ್ಯವಸ್ಥೆದೊಂದಿಗೆ ಆಯ್ಯುಆಯ್, ಆಯ್ವಿಎಫ್, ಆಯ್ಸಿಎಸ್ಆಯ್, ಆಯ್ಎಮ್ಎಸ್ಆಯ್, ಲೇಸರ್ ಹಚಿಂಗ್, ವಿಟ್ರಿಫಿಕೇಶನ ಮತ್ತು ಉನ್ನತ ತಂತ್ರಜ್ಞಾನದ ಮುಖಾಂತರ ಬಂಜೇತನಯಿರುವ ದಂಪತಿಗಳ ಮೇಲೆ ಉಪಚಾರಿಸಲಾಗುತ್ತಿದೆ. ಈ ವರೆಗೆ ಸಾವಿರಾರು ದಂಪತಿಗಳು ಹಲವಾರ ಆರೋಗ್ಯ ಸಮಸ್ಯೆಗಳೊಂದಿಗೆ ಆಸ್ಪತ್ರೆಗೆ ಬಂದು, ತಮ್ಮ ಸಮಸ್ಯೆಗಳನ್ನು ನಮ್ಮ ಮುಂದೆ ಇಟ್ಟಾಗ ಅವರನ್ನು ಉಪಚಾರಿಸುವಾಗ ವಿಶ್ವಾಸಕ್ಕೆ ತೆಗೆದುಕೊಂಡು ಮಾಹಿತಿ ನೀಡಿ ಉಪಚಾರಿಸಲಾಗುತ್ತದೆ. ಈ ವರೆಗೆ ಬೇರೆ ಕಡೆ ಉಪಚಾರಿಸುವಾಗ ಲಕ್ಷಾಂತರ ರೂ. ವೆಚ್ಚುಮಾಡಿದರೂ ಅವರ ಭಾಗ್ಯ ಫಲಿಸದೆಯಿರುವದರಿಂದ ನಮ್ಮ ಬಳಿ ಉಪಚಾರಿಸಿಕೊಂಡಿದ್ದಾಗ ಅನೇಕರಿಗೆ ಬಂಜೇತನ ಎಂಬ ಹೆಸರು ಹೋಗಲಾಡಿಸುವ ಭಾಗ್ಯ ನಮ್ಮ ವೈದ್ಯ ದಂಪತಿಗಳಿಗೆ ಲಭಿಸಿದೆ ಎಂದು ಡಾ.ಸಚೀನ ಸುಗಣ್ಣವರ ಸಂತಸದಿಂದ ಹೇಳಿದರು. ಶಿಬಿರದಲ್ಲಿ ಡಾ.ನೇಹಾ ಸುಗಣ್ಣವರ, ಇನ್ನೀತರ ಶಿಬಿರಾರ್ಥಗಳು ಪಾಲ್ಗೊಂಡಿದ್ದರು.