ರಾಣೇಬೆನ್ನೂರಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ

ರಾಣೇಬೆನ್ನೂರು27: ಎದೆ ಉರಿತ ಬಂದಾಗ ನಾವು ಎಸಿಡಿಟಿ ಎಂದು ಅಲಕ್ಷ್ಯ ಮಾಡುತ್ತೇವೆ ನಾವು  ವೈದ್ಯರಿಗೆ  ತೋರಿಸದೆ ಔಷಧಿ ತೆಗೆದುಕೊಳ್ಳುತ್ತೇವೆ. ಇದು ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತದೆ ಎಂದು ಲಯನ್ಸ ಕ್ಲಬ್ ಅಧ್ಯಕ್ಷ ಬಸವರಾಜ ಬಡಿಗೇರ ಹೇಳಿದರು.

    ಶನಿವಾರ ಇಲ್ಲಿನ ಮೆಡ್ಲೇರಿ ರಸ್ತೆ ಲಯನ್ಸ ಶಾಲೆಯಲ್ಲಿ ಲಯನೆಸ್ ಹಾಗೂ ಲಿಯೋ ಕ್ಲಬ್ಸ ಹಾಗೂ ಎಸ್.ಎಸ್. ನಾರಾಯಣ ಹಾರ್ಟ ಸೆಂಟರ್ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ದಿನ ಒಂದು ಗಂಟೆ ವಾಕಿಂಗ್  ಮಾಡಬೇಕು ಮತ್ತು ಯೋಗಾಸನ ಮಾಡಬೇಕು. ಆಹಾರದಲ್ಲಿ ಉಪ್ಪು ಕಡಿಮೆ ಉಪಯೋಗಿಸಬೇಕು ಅಂದಾಗ ಮಾತ್ರ ಆರೋಗ್ಯ ಉತ್ತಮವಾಗಿರಲು ಸಾಧ್ಯ ಎಂದರು.

    ಅಲ್ಲದೆ  ಹೆಚ್ಚಾಗಿ ತರಕಾರಿ, ಹಣ್ಣು ಹೆಚ್ಚು ಉಪಯೋಗಿಸಬೇಕು, ಅರ್ಧ ಕಿ.ಮೀ ನಡೆದರೆ ಸುಸ್ತಾಗುವುದು ಧಮ್ಮು, ಕೆಮ್ಮು, ಅಸ್ತಮ ಇರುವವರು ವೈದ್ಯರ ಹತ್ತಿರ ಹೋಗಿ ಇ.ಸಿ.ಜಿ  ಮಾಡಿಸಿಕೊಳ್ಳಬೇಕು ಎಂದರು 

ದಾವಣಗೆರೆ ನಾರಾಯಣ ಹಾರ್ಟ ಸೆಚಿಟರ್ನ ವೈದ್ಯ ಡಾ. ಗುರುರಾಜ ಎಸ್.ಎಸ್. ಮಾತನಾಡಿ, ಇತ್ತೀಚೆಗೆ  ಹೃದಯ ಕಾಯಿಲೆಗಳು ಹೆಚ್ಚು ಕಂಡು ಬರುತ್ತವೆ. ಹಿಂದೆ ಬಿ.ಪಿ ಮತ್ತು ಮಧುಮೇಹ ಕಾಯಿಲೆ ಬರುತ್ತಾ ಇತ್ತು  ಬೀಡಿ, ಸಿಗರೇಟು ಸೇದುವುದು, ಮದ್ಯಪಾನ ಮಾಡುವುದು ತಂಬಾಕು ಹಾಕುವುದುದರಿಂದ ಈ ಕಾಯಿಲೆ ಕಂಡು ಬರುತ್ತವೆ ಎಂದರು.

  ಎಮ್. ಎಸ್ ಅರಕೇರಿ, ಬಿ.ಎನ್. ಪಾಟೀಲ, ಎಲ್. ಜಿ. ಶೆಟ್ರ, ಪ್ರೊ. ಬಿ.ಬಿ. ನಂದ್ಯಾಲ ಡಾ| ಗುರುರಾಜ, ರಜಿನಿ ಕುಲಕಣರ್ಿ, ಸ್ವಪ್ನಾ ಮುದ್ದಿ ಸೇರಿದಂತೆ ಮತ್ತಿತರರು ಇದ್ದರು. ಶಿಬಿರದಲ್ಲಿ  ವೈದ್ಯರು 250 ಕ್ಕೂ ಹೆಚ್ಚು ಶಿಬಿರಾಥರ್ಿಗಳ ಹೃದಯ ತಪಾಸಣೆ ನಡೆಸಿ ಸಲಹೆ ಸೂಚನೆ ನೀಡಿದರು.