ಬಡ ಜನರಿಗೆ ಉಚಿತ ಆರೋಗ್ಯ ತಪಾಸನೆ ಶಿಬಿರ

ಲೋಕದರ್ಶನ ವರದಿ

ಹುಕ್ಕೇರಿ 06:  ಇಂದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹಾಯಟೆಕ್ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಷ್ಟೋ ಬಡ ಜನ ಅನಾರೋಗ್ಯಕ್ಕೆ ಯೋಗ್ಯ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆಂದು ಸಂಕೇಶ್ವರದ ಕೃಷ್ಣ ಆಯುವರ್ೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಪ್ರಾಚಾರ್ಯ ಡಾ. ಮಂಜುನಾಥ ಗವಿಮಠ ವಿಷಾದ ವ್ಯಕ್ತ ಪಡಿಸಿದರು. 

ನಗರದ ಅಡವಿಸಿದ್ಧೇಶ್ವರ ಮಠದಲ್ಲಿ ಗುರುವಾರದಂದು ವೀರಶೈವ ಲಿಂಗಾಯತ ಸಮಾಜ ಸೇವಾ ಅಭಿವೃದ್ಧಿ ಸಂಘ, ಅಡವಿಸಿದ್ಧೇಶ್ವರ ಟ್ರಸ್ಟ ಹಾಗೂ ಕೃಷ್ಣ ಆಯುವರ್ೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಉಚಿತ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಮತ್ತು ಔಷಧಿ  ವಿತರಣೆ ಶಿಬಿರವನ್ನು ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಬಡ ಜನರಿಗೆ ಉಚಿತ ಚಿಕಿತ್ಸೆ ನೀಡಲು ಕೃಷ್ಣ ಆಯುವರ್ೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಸಾರ್ವಜನಿಕರಿಗೆ ಮನೆ ಬಾಗಿಲಿಗೆ ತಲುಪಿದೆ. ಸಂಕೇಶ್ವರದ ಆಸ್ಪತ್ರೆಯಲ್ಲಿ ಕ್ಷ ಕಿರಣ, ರಕ್ತ ತಪಾಸನೆ, ಪಂಚ ಕರ್ಮ ಚಿಕಿತ್ಸೆ ಹಾಗೂ ಸುಸಜ್ಜಿತ ಆಪರೇಶನ್ ಥೇಟರದ ವ್ಯವಸ್ಥೆ ಇದೆ. ಬಡವರಿಗೆ ಒಳ್ಳೇ ಚಿಕಿತ್ಸೆ ನೀಡುವದೇ ಈ ಶಿಬಿರದ ಮುಖ್ಯ ಉದ್ದೇಶವಾಗಿದ್ದು ಇದರ ಜೊತೆಗೆ ರೋಗಿಗಳ ತಪಾಸಣೆ ಮಾಡಿ ಉಚಿತವಾಗಿ ಔಷದಿಗಳನ್ನು ವಿತರಿಸಲಾಗುವದೆಂದರು. ಈ ಉಚಿತ ಔಷದಿಗಳನ್ನು ಕಡೆಗಣಿಸದೆ ನಿಯಮಿತವಾಗಿ ತೆಗೆದುಕೊಂಡು ಶೀಘ್ರವಾಗಿ ಗುಣಮುಖರಾಗಲು ಕರೆ ನೀಡಿದರು.

ಆಸ್ಪತ್ರೆಯ ಕಾರ್ಯದಶರ್ಿಗಳಾದ ಡಾ. ಸಂತೋಷಕುಮಾರ ಅವರು ಶಿಬಿರವನ್ನದ್ಧೇಶಿಸಿ ಮಾತನಾಡಿ ಮನುಷ್ಯನಿಗೆ ಆರೋಗ್ಯವೇ ಸಂಪತ್ತು  ಆರೋಗ್ಯದ ಕಡೆ ನಿರ್ಲಕ್ಷ ಮಾಡಿದ್ದಾದರೆ ಅನೇಕ ರೋಗಗಳಿಗೆ ಬಲಿಯಾಗುವ ಸಾಧ್ಯತೆಯಿದೆ ಕಾರಣ ಮುಂಜಾಗ್ರತೆ ಕ್ರಮವಾಗಿ ಈ ಶಿಬಿರವನ್ನು ನಗರದಲ್ಲಿ ಪ್ರತಿ ಗುರುವಾರ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆಯುವದರೊಂದಿಗೆ ನೆರೆ ಹೊರೆಯವರಿಗೆ ಶಿಬಿರದ ಬಗ್ಗೆ ತಿಳಿಸಲು  ವಿನಂತಿಸಿಕೊಂಡರು.

ಡಾ. ಚೇತನ ಹೊನವಾಡೆ, ಡಾ. ದೀಪಕ ಮಗದುಮ್ಮ, ಡಾ. ಅಶ್ವಿನಿ ಕುದರಿಮಠ, ಡಾ. ವಿಜಯಾನಂದ ಕಲ್ಲೋಳಿ, ಡಾ. ಖಜನ್ನವರ ರೋಗಿಗಳ ತಪಾಸಣೆ ಮಾಡಿ ಉಚಿತವಾಗಿ ಔಷದಿ ಹಾಗೂ ಮಾತ್ರೆಗಳನ್ನು ವಿತರಿಸಿದರು ಈ ಸಂರ್ಭದಲ್ಲಿ ಜಯಗೌಡ ಪಾಟೀಲ, ಡಾ. ನಾಗರಾಜ ಚರಂತಿಮಠ, ವೀರಶೈವ ಲಿಂಗಾಯತ ಸಮಾಜ ಸೇವಾ ಅಭಿವೃದ್ಧಿ ಸಂಘದ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಉಪಾಧ್ಯಕ್ಷ ವಿರುಪಾಕ್ಷಿ ಅಲಗರಾವುತ, ನಿದರ್ೇಶಕರಾದ ದೇವಪ್ಪಾ ಕುಂದನ್ನವರ, ಅಣ್ಣಪ್ಪ ಪಾಟೀಲ, ಸಾವಂತ ಕುಂಬಾರ ಪತ್ರಕರ್ತ ರಾಮಣ್ಣಾ ನಾಯಿಕ, ಉಪಸ್ಥಿತರಿದ್ದರು. ನಿದರ್ೇಶಕ ರಾಮಗೌಡ ಪಾಟೀಲ ಸ್ವಾಗತಿಸಿ ವಂದಿಸಿದರು.