ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ತಾಳಿಕೋಟಿ 21: ತಾಲೂಕಿನ ತುಂಬಗಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರ ಇಂದು( ಡಿ.22) ನಡೆಯಲಿದೆ. ಮುಂಜಾನೆ 10-00 ಘಂಟೆಗೆ ಆರಂಭವಾಗುವ ಈ ಶಿಬಿರದಲ್ಲಿ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ನಾಡಿನ ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ( ಚಬನೂರ) ಇವರು ಕಣ್ಣಿನ ಉಚಿತ ತಪಾಸಣೆ ನಡೆಸಲಿದ್ದಾರೆ ಹಾಗೂ ವಿಜಯಪುರ ಯಶೋಧಾ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಅತ್ರೇಶ ಬಿರಾದಾರ( ತುಂಬಗಿ)ಖ್ಯಾತ ಯಲಬು,ಕೀಲು ತಜ್ಞರು,ಡಾ. ರವೀಂದ್ರ ಎಂ.ಮದ್ದರಕಿ,ಡಾ. ಶ್ರೀನಿವಾಸ ಜೆ.ಎಲ್.ಡಾ.ಪ್ರಶಾಂತ ಕೆಂಗನಾಳ ಇವರು ರೋಗಿಗಳ ತಪಾಸಣೆ ನಡೆಸಲಿದ್ದಾರೆ.ಗ್ರಾಮಸ್ಥರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ಶ್ರೀ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಸಕಲ ಸದ್ಭಕ್ತ ಮಂಡಳಿ ತಿಳಿಸಿದೆ.