ಉಚಿತ ಆರೋಗ್ಯ ವಿಚಾರ ಸಂಕೀರ್ಣ ಶಿಬಿರ
Free health awareness camp
ಯಮಕನ ಮರಡಿ 28 : ಉಚಿತ ಆರೋಗ್ಯ ವಿಚಾರ ಸಂಕೀರ್ಣ ಶಿಬಿರ ಯಮಕನ ಮರಡಿ ಸಮೀಪದ ಹತ್ತರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ದಾದಬಾಣಹಟ್ಟಿ ಗುಡ್ಡದ ಬಸವೇಶ್ವರ ಮಂದಿರದ ಅವ ರನದಲ್ಲಿ ದಿ 30ರಂದು ಉಚಿತ ಆರೋಗ್ಯ ತಪಾಸಣಾ ಮತ್ತು ವಿಚಾರ ಸಂಕೀರ್ಣಶಿಬಿರವನ್ನು ಆಯೋಜಿಸಲಾಗಿತ್ತು ಧರ್ಮಸ್ಥಳ ಪದ್ಮಭೂಷಣ ಡಾ. ಧರ್ಮಾಧಿಕಾರಿಗಳ ವೀರೇಂದ್ರ ಹೆಗಡೆ ಹಾಗೂ ಅಮ್ಮನವರ ಕೃಪಾಶೀರ್ವಾದದಿಂದ ಹುಕ್ಕೇರಿ ಬೀಸಿ ಟ್ರಸ್ಟ್ ಇವರುಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಸ್ಥಳೀಯ ಜ್ಞಾನವಿಕಾಸ ಯೋಜನೆ ಅಡಿಯಲ್ಲಿ ಆರೋಗ್ಯದ ಬಗ್ಗೆ ಮಹಿಳಾ ಸಬಲೀಕರಣ ಕುರಿತು ಸಂಘದ ಸದಸ್ಯರಿಗೆ ಮಾಹಿತಿ ನೀಡಲಾಯಿತು ಕಾರ್ಯಕ್ರಮಕ್ಕೆ ತಾಲೂಕು ಧರ್ಮಸ್ಥಳ ಟ್ರಸ್ಟ್ ರವರು ಆಯೋಜಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹತ್ತರಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಯುವದೂರಿಣರು ಆದ ಮಹಾದೇವ ಪಟ್ಟೋಳಿ ಅವರು ಯೋಜನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕ್ಷೇತ್ರ ಧರ್ಮಸ್ಥಳದ ಯೋಜನೆಗಳಿಂದ ಮಹಿಳಾ ಸಂಘಗಳು ಸಾಕಷ್ಟು ಜಾಗೃತಿ ಹೊಂದಿ ತಮ್ಮ ಭಾವಿ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇತರ ಶ್ರೇಯಸ್ಸು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಸಲ್ಲಬೇಕಾಗಿದೆ ಈಗಾಗಲೇ ಸಾಕಷ್ಟು ಧರ್ಮಸ್ಥಳ ಮಹಿಳಾ ಸಂಘದ ವತಿಯಿಂದ ಸಹಾಯವನ್ನು ಪಡೆದು ಅಭಿವೃದ್ಧಿ ಹೊಂದುವಲ್ಲಿ ಮಹಿಳಾ ಸಮಾಜವು ಯಶಸ್ವಿಯಾಗಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ತಾಲೂಕ ಧರ್ಮಸ್ಥಳ ಸಂಸ್ಥೆಯ ಅಧಿಕಾರಿಗಳು ಪದಾಧಿಕಾರಿಗಳು ಹಾಗೂ ದಾದಬಾಣಹಟ್ಟಿ ಗ್ರಾಮದ ಪ್ರಮುಖರಾದ ಶ ಶೆಟ್ಟಪ್ಪ ಜಮಕೋಳಿ ಮಂಜುನಾಥ್ ಓಮಣ್ಣವರ್ ಹಾಗೂ ಎಲ್ಲಾ ಮಹಿಳಾ ಮಂಡಲಗಳ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 