ರೋಟರಿ ಕ್ಲಬ್ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ

Free eye checkup in collaboration with Rotary Club

ರೋಟರಿ ಕ್ಲಬ್ ಸಹಯೋಗದಲ್ಲಿ  ಉಚಿತ ನೇತ್ರ ತಪಾಸಣಾ  

ಬ್ಯಾಡಗಿ  11: ಪಟ್ಟಣದ ರೋಟರಿ ಕ್ಲಬ್ ಸಹಯೋಗದಲ್ಲಿ  ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವು ಸಮಾಜ ನಿರ್ವಾಹಣಾ ಕೇಂದ್ರ ಸ್ನೇಹ ಸದನ ಸಭಾಭವನದಲ್ಲಿ ಬುಧವಾರ ನಡೆಯಿತು.ನಿವೃತ್ತ ಸೈನಿಕ ಮಲ್ಲೇಶಣ್ಣ ಚಿಕ್ಕಣ್ಣನವರ ಕಣ್ಣಿನ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ  ಕಳೆದ ಹಲವು ವರ್ಷಗಳಿಂದ  ಶಂಕರ ಕಣ್ಣಿನ ಆಸ್ಪತ್ರೆಯ ವತಿಯಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹತ್ತಾರು ಕಣ್ಣಿನ ಶಿಬಿರಗಳು ನಡೆದಿವೆ.  

ಇಂತಹ ಶಿಬಿರದಿಂದ  ನೂರಾರು ಜನರು ತಮ್ಮ ಕಣ್ಣಿನ ವಿವಿಧ ರೋಗಗಳಿಂದ ಮುಕ್ತರಾಗಿದ್ದಾರೆ.  ಶಂಕರ ಕಣ್ಣಿನ ಆಸ್ಪತ್ರೆಯ ಜೊತೆಗೆ ರೋಟರಿ ಸಂಸ್ಥೆಯವರ  ಸಹಯೋಗದಲ್ಲಿ ಶಿಬಿರ ನಡೆಸುತ್ತಾ ಬಂದಿದ್ದು ಸಹಸ್ರಾರು ಬಡ ಸಾರ್ವಜನಿಕರು ಮತ್ತು ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಇದರಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಯವರ ಶ್ರಮ ಸಹಾಯ ಬಹಳ ಇದ್ದು ಇನ್ನೂ ಮುಂದಿನ ದಿನಗಳಲ್ಲಿ ಕಣ್ಣಿನ ತೊಂದರೆ ಇರುವ ಎಲ್ಲ ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಲಿ ಎಂದರು.ಕಾರ್ಯಕ್ರಮದಲ್ಲಿ  ಮಂಜುನಾಥ ಉಪ್ಪಾರ,ಸ್ನೇಹ ಸದನದ ನಿರ್ದೇಶಕಿ ರೂಪಾ, ಸಿದ್ಧಲಿಂಗಯ್ಯ ಬೂದಿಹಾಳಮಠ, ಪವಾಡೆಪ್ಪ ಆಚನುರ,  ನಿರಂಜನ ಶೆಟ್ಟಿಹಳ್ಳಿ, ಕಿರಣ ವರ್ಣೇಕರ, ಕಿರಣ ಮಾಳೆನಹಳ್ಳಿ, ನಾಗರಾಜ ಕಾಯ್ಕದ, ಮಹಾಂತೇಶ ಸುಂಕದ, ವಿಶ್ವನಾಥ ಅಂಕಲಕೋಟಿ, ಶಿವರಾಜ ಚೂರಿ ಇದ್ದರು