ಕೊಪ್ಪಳದಲ್ಲಿ ಜರುಗಿದ ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿ
ಕೊಪ್ಪಳ 21: ನಗರದ ಸರ್ದಾರಗಲ್ಲಿಯಲ್ಲಿಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಯ ಖ್ಯಾತ ವೈದ್ಯರಿಂದ ಅಲ್ಫಾ ಹೆಲ್ತ್ ಎಜುಕೇಷನ್ ಅಂಡ್ ರೂರಲ್ ಡೆವೆಲೆಪ್‌ಮೆಂಟ್ ಫೌಂಡೇಷನ್, ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಘ ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಕೊಪ್ಪಳ ತಾಲೂಕ (ಗ್ರಾ) ಘಟಕದ ಸಹಯೋಗದಲ್ಲಿಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮ ಇಂದು ದಿನಾಂಕ 21ರಂದು ಬೆಳಗ್ಗೆ 10:30 ಕ್ಕೆ ಯಶಸ್ವಿಯಾಗಿ ಜರುಗಿತು.
ರಾಜ್ಯ ನದಾಫ್ ಪಿಂಜಾರ ಸಂಘದ ರಾಜ್ಯ ಕೋಶಾಧಿಕಾರಿ ಹಾಗೂ ಕೊಪ್ಪಳ ನಗರಸಭೆ ಮಾಜಿ ಸದಸ್ಯ ಶಹಾಬುದ್ದೀನ್ ಸಾಬ್ ಇವರು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಕಾಸಿಂ ಅಲಿ ಮುದ್ದಾಬಳ್ಳಿ, ತಾಲೂಕು ಅಧ್ಯಕ್ಷರಾದ ಅಸ್ಮಾನ ಸಾಬ್ ಕರ್ಕಿ ಹಳ್ಳಿ, ಆಲ್ಫಾ ಫೌಂಡೇಶನ್ ಹಾಗೂ ನದಾಫ್ ಜಿಲ್ಲಾ ಸಂಘದ ಮಹಿಳಾ ಜಿಲ್ಲಾ ಅಧ್ಯಕ್ಷರಾ ಸಲಿಮಾಜಾನ್, ಮಹಿಳಾ ಧ್ವನಿ ಕ್ಷೇಮಾಭಿವೃದ್ಧಿ ಅಧ್ಯಕ್ಷರಾದ ಪ್ರಿಯದರ್ಶಿನಿ, ಶಿಫಾ ಕ್ಲಿನಿಕ್ ಡಾ. ಎಸ್ ಕೆ ರಾಜೂರ, ಜೋಶಿ ಆಸ್ಪತ್ರೆ ವ್ಯವಸ್ಥಾಪಕ ಬಸಯ್ಯ ಹಿರೇಮಠ, ಪಂಚಕಮಿಟಿ ಅಧ್ಯಕ್ಷರಾದ ಖಾದರ್ ಸಾಬ್ ಕುದ್ರಿಮೋತಿ, ನಗರಸಭೆ ಮಾಜಿ ಸದಸ್ಯರಾದ ಮಾನ್ವಿ ಪಾಷಾಸಾಬ್ ಉಪಾಧ್ಯಕ್ಷರಾದ ಫಕ್ರುಸಾಬ್ ನದಾಫ್ , ಮೀರಾಸಾಬ ಬನ್ನಿಗೋಳ, ಮುರ್ತುಜಾಸಾಬ ಚುಟ್ಟದ, ಕಾರ್ಯದರ್ಶಿ ಮುಸ್ತಫಾ ಕುದ್ರಿಮೋತಿ, ಖಜಾಂಚಿ ಮರ್ದಾನಸಾಬ್ ಲುಂಗಿ, ರಶೀದ್ ನೀರಲಗಿ, ಹಸನ್ ಸಾಬ್ ಮಂಗಳಾಪೂರ, ಪೀರಸಾಬ್ ಭೈರಾಪುರ, ರಿಯಾಜ್ ಕುದ್ರಿಮೋತಿ, ಮುಮ್ತಾಜ್ ಬೇಗಂ ರೋಣ, ಸಿರಾಜ್ ಕೋಲ್ಕಾರ್, ನಗರಸಭೆ ಮಾಜಿ ಸದಸ್ಯ ಖಾಜಾವಲಿ ಬನ್ನಿಕೊಪ್ಪ, ಗೌಸಾಬ್ ಸರ್ದಾರ್, ರಮ್ಜಾನ್ ಸಾಬ್ ಕಂಬಳಿ, ಶಾಕಿರ್, ರಾಜಾಬಕ್ಷಿ, ಬಡೇಸಾಬ್ ಪಾಲ್ಗೊಂಡಿದ್ದರು. ಕೊಪ್ಪಳ ನಗರದ ಸರ್ದಾರಗಲ್ಲಿಯ ಸಾಲಾರಜಂಗ್ ರೋಡಿನಲ್ಲಿರುವ ಶಿಫಾ ಕ್ಲಿನಿಕ್ (ಡಾಽಽ ಎಸ್ ಕೆ ರಾಜೂರ ಆಸ್ಪತ್ರೆ) ಯಲ್ಲಿ ಕೊಪ್ಪಳ ಹಾಗೂ ಇತರ ತಾಲೂಕಿನ ಗ್ರಾಮೀಣ ಹಾಗೂ ನಗರದ ಹಿಂದುಳಿದ ಪ್ರದೇಶದ ಬಡ ಜನರ ಆರೋಗ್ಯದ ಹಿತದೃಷ್ಟಿಯಿಂದ ‘ಉಚಿತ ನೇತ್ರ ತಪಾಸಣಾ ಶಿಬಿರ’ ಹಾಗೂ ‘ಉಚಿತ ಕನ್ನಡಕ’ (8 ದಿನಗಳ ನಂತರ ಅರ್ಹ ಕಡು ಬಡವರಿಗೆ ಮಾತ್ರ) ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರತಿಯೊಬ್ಬ ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಕಂಣ್ಣಿದ್ದರೆ ಮಾತ್ರ ಎಲ್ಲವನ್ನು ನೋಡಿ ಅನುಭವಿಸಬಹುದು. ಆದಕಾರಣ ಕಂಣ್ಣಿನ ಆರೈಕೆಗೆ ಬಹಳ ಮಹತ್ವ ನೀಡುವುದರ ಮೂಲಕ ಈ ಉಚಿತ ಶಿಬಿರದಲ್ಲಿ ಸದುಪಯೋಗ ಪಡಿಸಿಕೊಳ್ಳಲು ನೋಂದಣಿ ಮಾಡಿದ ಸುಮಾರು 200 ಕ್ಕೂ ಹೆಚ್ಚು ಫಲಾನುಭವಿಗಳನ್ನು ತಪಾಸಣೆ ಮಾಡಲಾಯಿತು.ನಿರೂಪಣೆಯನ್ನು ಬಾಬು ಎಂಕರ್ ರವರು ಮಾಡಿದರು.