ಮುಂಡಗೋಡ 15: ಶ್ರೀ ಎಸ್,ಜಿ,ಎಮ್. ನೇತ್ರ ಭಂಡಾರ ಹಾಗೂ ಸಂಶೋಧನಾ ಪ್ರತಿಷ್ಟಾನ ಮತ್ತು ಜೆಕೊ ಪೌಂಡೇಶನ್ (ಕೆನಡಾ) ಲೊಯೋಲ ವಿಕಾಸ ಕೇಂದ್ರ, ಗ್ರಾಮ ಅಭಿವೃದ್ಧಿ ಸಮಿತಿ,ಸಂಯೋಜನೆ ಅಡಿಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ನ್ಯಾಸರ್ಗಿ ಗ್ರಾಮದ ಹಳೆಊರ ಬಸವೇಶ್ವರ ದೇವಸ್ಥಾನದಲ್ಲಿ ಏರಿ್ಡಸಲಾಗಿತ್ತು.
ಕಣ್ಣಿನ ತಪಾಸಣಾ ಆಸ್ಪತ್ರೆಯ ಅಸ್ತೋಮೆಟ್ರಿಸ್ಟರಾದ ಡಾ. ಕೀರ್ತಿ ಲಮಾಣಿ ಯವರು ಮಾತನಾಡಿ ಕಣ್ಣಿನ ಪೋರೆ ಎಂದರೇನು? ನೈಸರ್ಗಿಕವಾಗಿ ನಮ್ಮ ಕಣ್ಣಿನ ಲೆನ್ಸ್ ಪೊರೆಯಾಗಿ ಪರಿವರ್ತನೆಯಾಗಿ ಪೊರೆಯಾಗುತ್ತದೆ ಎಂದರು. ವಿಷ್ಣು ಹೊಸೂರರವರು ಹುಬ್ಬಳ್ಳಿಯ ಎಂ,ಎಂ ಜೋಶಿ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಪ್ರತಿ ತಿಂಗಳು ಉಚಿತವಾಗಿ ನಡೆಯುತ್ತದೆ. ದುರ್ಮಾಂಸವು ಕಂಜಸ್ಟೀವಾ ಮತ್ತು ಕಾರ್ನಿಯಾದ ಹತ್ತಿರ ಬೆಳೆಯುತ್ತದೆ. ಅದನ್ನು ಕೂಡ ಶಸ್ತ್ರಚಿಕಿತ್ಸೆ ಮಾಡಿಸುವ ಸೌಲಭ್ಯ ಇರುತ್ತದೆ. ಗ್ಲೋಕೋಮಾ ಡಯಾಬಿಟಿಸ್, ಇದ್ದವರಿಗೆ ಉಚಿತ ರೆಟಿನಾ ತಪಾಸಣೆ ಇರುತ್ತದೆ. ದೃಷ್ಟಿ ದೋಷಗಳಿಂದ ದೃಷ್ಟಿ ಮಾಂದ್ಯವಾಗಬಹುದು ಓದುವಾಗ ಪುಸ್ತಕ ಹತ್ತಿರ ಹಿಡಿಯುವದು, ತಲೆಹತ್ತಿರ ಭಾಗಿಸುವದು ಇತ್ಯಾದಿ ಪರೀಕ್ಷಿಸಲು ದೃಷ್ಟಿ ಕೇಂದರಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದರು. ಮಂಗಳಾ ಮೋರೆ ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. 43 ಫಲಾನುಭವಿಗಳು ಭಾಗವಹಿಸಿ ತಪಾಸಣೆ ಮಾಡಿಸಿಕೊಂಡವರಲ್ಲಿ 5 ಜನ ಕನ್ನಡಕವನ್ನು ಪಡೆದರು, 1 ಕಣ್ಣಿನಪೊರೆ ಇರುವವರು,2 ಜನ ದುರ್ಮಾಂಶವುಳ್ಳವರು, 6 ಜನ ಕಣ್ಣಿಗೆ ಕನ್ನಡಕ ನಂಬರ ಬಂದವರು ಎಂದು ತಪಾಸಣೆ ವೇಳೆಗೆ ಮಾಹಿತಿ ತಿಳಿದು ಬಂದಿದೆ.
ಕಣ್ಣಿನ ಪೊರೆಯುಳ್ಳವರಿಗೆ ಮುಂದಿನವಾರ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುವದು ಎಂದು ಹೇಳಿದರು. ಉಚಿತ ಕಣ್ಣಿನ ತಪಾಸಣಾ ಶಿಬಿರದ ಅಧ್ಯಕ್ಷತೆಯನ್ನು ರಾಮು ಗೌಳಿ.ಯವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಹಿರಿಯರಾದ ನಿಜಲಿಂಗಪ್ಪಾ ಮಡ್ಲಿ.ಶಿವಾಜಪ್ಪ ಕುಡ್ಡಿಕೇರಿ, ಉದಯನ್ ನ್ಯಾಸರ್ಗಿ, ನಿಂಗಮ್ಮಾ ಧರ್ಮೋಜಿ, ಜನಸ್ಪೂರ್ತಿ ಒಕ್ಕೂಟದ ಕಾರ್ಯದರ್ಶಿ ಸುನಿತಾ ಗೌಳಿ ಉಪಸ್ಥಿತರಿದ್ದರು.
ಎಂ,ಎಂ,ಜೋಶಿ ಸಿಬ್ಬಂದಿಯಾದ ಸುಮಂಗಲಾ ಕುಂದಗೋಳ.ಎಲ್.ವಿ,ಕೆ ಮುಂಡಗೋಡ ವಲಯದ ಸಂಯೋಜಕರಾದ ಮಂಗಳಾ ಮೋರೆ. ಸಂಘದ ಮಹಿಳೆಯರು, ಗ್ರಾಮದ ಹಿರಿಯರು, ಗ್ರಾಮ ಅಭಿವೃದ್ಧಿ ಸಮಿತಿ ಸದಸ್ಯರು, ಸುತ್ತಮುತ್ತಲಹಳ್ಳಿ ಹಳ್ಳಿಯ ಫಲಾನುಭವಿಗಳು ಸದುಪಯೋಗ ಪಡೆದುಕೊಂಡರು.ಭಾರತಿ ಧರ್ಮೋಜಿ ಸ್ವಾಗತಿಸಿದರು.ಸುನಿತಾ ಗೌಳಿ ನಿರೂಪಿಸಿದರು.ಸುಮಂಗಲಾ ವಂದಿಸಿದರು.