ಉಚಿತ ಕಣ್ಣಿನ ತಪಾಸಣಾ ಶಿಬಿರ
ಸವಣೂರು 19 : ತಾಲ್ಲೂಕಿನ ಕಳಸೂರ ಗ್ರಾಮದ ಭೋಗೇಶ್ವರ (ಈಶ್ವರ) ದೇವಸ್ಥಾನದಲ್ಲಿ ಗುರುವಾರ (ಮಾರ್ಚ-20) ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಘಂಟೆಯವರಿಗೆ ಕಳಸೂರ ಗ್ರಾಮ ಪಂಚಾಯತಿ, ಅಮ್ಮಾ ಸಂಸ್ಥೆ(ರಿ) ಹಿರೇಮುಗದೂರ, ಶಂಕರ ಆಸ್ಪತ್ರೆ ಶಿವಮೊಗ್ಗ,ಶಂಕರ ವಿಷನ ಸೆಂಟರ್ ಹಾನಗಲ್- ರಾಣೆಬೆನ್ನೂರ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು,ಕಳಸೂರ ಹಾಗೂ ಸುತ್ತಮುತ್ತಲಿನ ಊರಿನ ಹಿರಿಯರು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅಮ್ಮಾ ಸಂಸ್ಥೆ(ರಿ) ಸಂಸ್ಥಾಪಕರಾದ ನಿಂಗಪ್ಪ ಆರೇರ ಪ್ರಕಟಣೆಯಲ್ಲಿ ಕೋರಿದ್ದಾರೆ.