ರೈತ ದಿನಾಚರಣೆಯ ಅಂಗವಾಗಿ ಉಚಿತ ನೇತ್ರ ಮತ್ತು ಮನೋರೋಗ ತಪಾಸಣಾ ಶಿಬಿರ
ಬೀಳಗಿ 21: ರೈತ ದಿನಾಚರಣೆಯ ಅಂಗವಾಗಿ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಬಳಸಿಕೊಂಡು ಎಸ್.ಆರ್.ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲಿ ಬೃಹತ್ ಉಚಿತ ನೇತ್ರ ಮತ್ತು ಮನೋರೋಗ ತಪಾಸಣಾ ಶಿಬಿರವನ್ನು ದಿ.23 ಸೋಮವಾರ ಬೆಳಗ್ಗೆ 10ಗಂಟೆಯಿಂದ ಸಾಯಂಕಾಲ 5ಗಂಟೆವರೆಗೆ ನಡೆಯಲಿದೆ. ಈ ಭಾಗದ ಬಡ ಕುಟುಂಬಗಳು, ನಾಗರಿಕರು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಎಸ್.ಆರ್.ಪಾಟೀಲ್ ಹೇಳಿದರು.
ತಾಲೂಕಿನ ಬಾಡಗಂಡಿಯ ಎಸ್.ಆರ್.ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಕಣ್ಣಿನ ವಿಭಾಗದಲ್ಲಿ ಸಾಮಾನ್ಯ ಕಣ್ಣಿನ ಪರೀಕ್ಷೆ, ಅತ್ಯಾಧುನಿಕ ಪೊರೆ ಶಸ್ತ್ರಚಿಕಿತ್ಸೆ, ಕಾಚಬಿಂದು (ಗ್ಲುಕೋಮಾ) ಸೇವೆಗಳು, ಅಕ್ಷಿಪಟಲ್ (ರೇಟಿನಾ) ಸೇವೆಗಳು, ಮಧುಮೇಹ ಕಣ್ಣಿನ ತಪಸಣೆ, ಅತ್ಯಾಧುನಿಕ ಕಣ್ಣಿನ ದುರಮಾಂಸದ ಶಸ್ತ್ರಚಿಕಿತ್ಸೆ, ಕುಣಿಕೇ ಹುಣ್ಣು ಕಣ್ಣಿನ ಭಾದೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯನ್ನು ನುರಿತ ತಜ್ಞ ವೈದ್ಯರಿಂದ ಮಾಡಲಾಗುವುದು ಎಂದರು.
ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯದರ್ಶಿ ಎಂ ಎನ್.ಪಾಟೀಲ್ ಮಾತನಾಡಿ ಎಷ್ಟೋ ಬಡ ಕುಟುಂಬಗಳು ನೇತ್ರ ಚಿಕಿತ್ಸೆಗೆ ಹಣದ ಕೊರತೆಯಿಂದಾ ಚಿಕಿತ್ಸೆ ಮಾಡಿಕೊಳ್ಳದೆ ಬಳಲುತ್ತಿರುತ್ತಾರೆ. ಮನೋರೋಗದಿಂದ ಕೊರಗುತ್ತಿರುತ್ತಾರೆ ಇಂತವರಿಗೆ ಸಹಾಯ ಮಾಡುವ ಉದ್ದೇಶದೊಂದಿಗೆ ನಮ್ಮ ವೈದ್ಯಕೀಯ ಮಹಾವಿದ್ಯಾಲಯದಿಂದ ಉಚಿತ ಚಿಕಿತ್ಸೆ ಮತ್ತು ಓಷಧಗಳನ್ನು ನೀಡಲಾಗುತ್ತದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.ಡಿನ್ ಡಾ.ಧರ್ಮರಾಯ್ ಇಂಗಳೆ, ವೈದ್ಯಕೀಯ ಉಪದೀಕ್ಷಕಿ ಡಾ.ಜಯಶ್ರೀ ಎಮ್ಮಿ, ಲೆಕ್ಕ ಪರಿಶೋಧಕ ಅಶೋಕ್ ದಾದ್ಮಿ ಇತರರು ಇದ್ದರು.