ಲೋಕದರ್ಶನ ವರದಿ
ವಿಜಯಪುರ 11:ಸ್ಥಳೀಯ ಗಾಂಧಿನಗರದಲ್ಲಿ ಕೇಜಿಪಿಎ ಅಸೋಸಿಯೇಶನ್ ಹಾಗೂ ಅಂಜುಮನ್ ಮಹಾವಿದ್ಯಾಲಯದ ಎನ್.ಎನ್.ಎಸ್ ಘಟಕ, ವಿಜಯಪುರ ವತಿಯಿಂದ ಉಚಿತ ರೋಗ ತಪಾಸಣಾ ಶೀಬಿರ" ಉಚಿತ ರೋಗ ತಪಾಸಣಾ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಹಮ್ಮಿಕೋಳಲಾಗಿತ್ತು. ಈ ಶೀಬಿರದಲ್ಲಿ ನುರಿತ ವೈದ್ಯರು ಭಾಗವಹಿಸಿದ್ದರು, ನುರಿತ ವೈದರಿಂದ ಜನರಿಗೆ ಉಚಿತ ತಪಾಸಣೆ ಉಚಿತ ಔಷಧಿಯನ್ನು ನೀಡಲಾಯಿತು. ಈ ಶಿಬಿರದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಅಂಜುಮನ್ ಮಹಾವಿದ್ಯಾಲಯದ ಪ್ರಾಚಾರ್ಯರದ ಶ್ರೀಮತಿ.ಎಸ್.ಜಿ.ಮಹಾಲದಾರ ಆಗಮಿಸಿದರು 2 ಸಂಘಟನೆಗಳು ಕೋಡಿ ಉತ್ತಮ ಕಾರ್ಯವನ್ನು ಮಾಡಿದ್ದಾರೆ ನಗರದಲ್ಲಿ ಇನ್ನೂ ಅನೇಕ ಉತ್ತಮ ಕೇಲಸ ಕಾರ್ಯಗಳಿವೆ ಇದಕ್ಕೆ ತಮ್ಮ ಸಲಹೆ ಸಹಕಾರ ಸದಾ ಇರಲಿ ಎಂದು ಹೇಳಿದರು. ಅತಿಥಿಯಾಗಿ ಆಲಮೇಲ ಡೈಮಂಡ ಶಾಲೆಯ ಅದ್ಯಕ್ಷರು, ಡಾ.ಅಫಝಲ ನಾಗರಬೌಡಿ, ಡಾ.ಅರ್.ಎಮ್.ಮುಲ್ಲಾ, ಡಾ.ಎಮ್.ಬಿ.ಅತ್ತಾರ್ ಎನ್.ಎನ್.ಎಸ್ ಘಟಕದ ಅಧಿಕಾರಿಗಳು ಪ್ರೋ.ಎಂ.ಎ.ಪಿರಾಂ ಹಾಗೂ ಐ.ಜಿ.ರುಕಯ್ಯಾ, ಕೇಜಿಪಿಎ ಅಸೋಸಿಯಶನ್, ವಿಜಯಪುರ ಉಪಾಧ್ಯಕ್ಷರಾದ ನಜೀಬ ಅರ್ಷಫ ಅಥಣಿ, ಅಂಜುಮನ್ ಇ ಇಸ್ಲಾಮ ಕಾರ್ಯದಶರ್ಿಗಳಾದ ಶ್ರೀ ಅಬ್ದುಲ್ ಹಮೀದ ಅಥಣಿ, ಆಗಮಿಸಿದ್ದರು.
ಬಶೀರ ಅಹೇಮದ ಖಾದಿಮ ಕೇಜಿಪಿಎ ಅಸೋಸಿಯಶನ್, ವಿಜಯಪುರ. ಅಧ್ಯಕ್ಷ ಇವರು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕೇಜಿಪಿಎ ಅಸೋಸಿಯಶನ್ ಸ್ಥಾಪಿಸುವ ಉದ್ದೇಶ ಕುರಿತು ಹೇಳುತ್ತಾ ನಮ್ಮ ಸಂಸ್ಥೆಯು ವಿಜಯಪುರ ನಗರದಲ್ಲಿ ಉತ್ತಮ ಶೈಕ್ಷಣಿಕ ಹಾಗೂ ಆರೋಗ್ಯಕ ವಾತಾವರಣ ನೀಮರ್ಾಣ ಮಾಡುವುದು, ಬಡ ಮಕ್ಕಳಿಗೆ, ಅಸಹಾಯ ಅನಾಥ ಹಿರಿಯ ನಾಗರಿಕರಿಗೆ, ವಿಕಲೇಚೇತನ ಅಂಧ ಮಕ್ಕಳಿಗೆ, ಹಾಗೂ ಅನಾಥ ಮಕ್ಕಳಿಗೆ ಶೈಕ್ಷಣಿಕ ಹಾದಿಯಲ್ಲಿ ಸಹಾಯ ಮಾಡುವುದು, ವಿಜಯಪುರ ನಗರವು ಉತ್ತಮ ಶಿಕ್ಷಣದಲ್ಲಿ ಬೇಳೇಸುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಉತ್ತಮ ಕೇಲಸಕ್ಕೆ ಬಿಜಾಪುರ ನಗರದ ಜನರ ಸಹಾಯ ಹಾಗೂ ಆಶರ್ಿವಾದ ನಮ್ಮೊಂದಿಗೆ ಸದಾ ಇರಲೆಂದು ಕೋರಿದರು. ಐ.ಜಿ.ರುಕಯ್ಯಾ, ಎನ್.ಎನ್.ಎಸ್ ಘಟಕದ ಅಧಿಕಾರಿ ಇವರು ಸ್ವಾಗತ ಮತ್ತು ಪರಿಚಯ ಭಾಷಣ ಮಾಡಿದರು ಕುಮಾರ ಜಿಯಾ ಪಠಾಣ ವಂದಸಿದರು. ಶಹನಾಝ ಸಯೈದ ಕಾರ್ಯಕ್ರಮವನ್ನು ನಿರೂಪಿಸಿದರು. ಗಾಂಧಿ ನಗರದ ವಿವಿಧ ಭಾಗಗಳಿಂದ ಬಡ ಜನರು ಭಾಗವಹಿಸಿ ಈ ಶಿಬೀರವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಸೈಯದ ಕಾದರಿ.ಬಿ.ಗುಡಗುಂಟಿ, ಅಂಜುಮನ್ ಮಹಾವಿದ್ಯಾಲಯದ ಎನ್.ಎನ್.ಎಸ್ ಘಟಕದ ವಿದ್ಯಾಥರ್ಿಗಳು, ಕೇಜಿಪಿಎ ಅಸೋಸಿಯಶನ್, ವಿಜಯಪುರ. ಸದಸ್ಯರು ಹಾಗೂ ನಗರದ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.