ಲೋಕದರ್ಶನ ವರದಿ
ಬೆಳಗಾವಿ 28: ಶಿವಬಸವನಗರದ ಎಸ್ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಕದ ವತಿಯಿಂದ ಡಾ. ಶಿವಬಸವಸ್ವಾಮಿಯವರ 130ನೆಯ ಜನ್ಮ ವಾಷರ್ಿಕೊತ್ಸವದ ಸವಿ ನೆನಪಿಗಾಗಿ ಒಂದು ದಿನದ ರಕ್ತದಾನ ಶಿಬಿರವನ್ನು ಎಚ್ಡಿಎಪಿಎಸ್ ಮತ್ತು ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನೆ ಕೇಂದ್ರರವರ ಸಹಯೊಗದಲ್ಲಿ ಏರ್ಪಡಿಸಲಾಗಿತ್ತು.
ರಕ್ತದಾನ ಶಿಬಿರವನ್ನು ನಾಗನೂರ ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಜಿ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಸಿದ್ರಾಮಪ್ಪ ವಿ ಇಟ್ಟಿ ಸ್ವಾಗತಿಸಿದರು. ವಿದ್ಯಾಥರ್ಿಗಳಿಗೆ ರಕ್ತದಾನದ ಮಹತ್ವವನ್ನು ತಿಳಿಸಿದರು. ಈಗಿನ ಕಾಲದಲ್ಲಿ ದಾನಗಳಲ್ಲಿ ಅತಿ ಶ್ರೇಷ್ಠದಾನ ರಕ್ತದಾನವಾಗಿದೆ, ವಿದ್ಯಾಥರ್ಿಗಳು ರಕ್ತದಾನವನ್ನು ಮಾಡಿ ಹಲವಾರು ಜೀವಿಗಳಿಗೆ ಮರುಜನ್ಮ ಕೊಡುವ ಕಾರ್ಯಕ್ರಮದಲ್ಲಿ ತೊಡಗಬೇಕು. ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಆದ್ದರಿಂದ ಈ ಎರಡು ಕ್ಷೇತ್ರಗಳು ಒಂದೇ ದಿಕ್ಕಿನಲ್ಲಿ ಸಾಗುತ್ತವೆ.
ಶಿಬಿರದ ಮುಖ್ಯ ಅತಿಥಿಯಾಗಿ ಡಾ.ಎಸ್ವಿ ವೀಗರ್ಿ ವಹಿಸಿ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಾ, ಈಗಿನ ಮುಂದುವರೆದ ತಾಂತ್ರಿಕ ಯುಗದಲ್ಲಿ ಹಲವಾರು ಹೊಸ ರೀತಿಯ ರಕ್ತದಾನದ ವಿಧಾನಗಳ ಬಗ್ಗೆ ಮತ್ತು ಅದರ ಉಪಯೋಗಗಳ ಬಗ್ಗೆ ಹೆಳಿದರು.
ಈ ರೀತಿಯ ಶಿಬಿರಗಳಲ್ಲಿ ವಿದ್ಯಾಥರ್ಿಗಳು ಪಾಲ್ಗೊಂಡು ರಕ್ತದಾನ ಮಾಡಬೇಕೆಂದರು. ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ತಮ್ಮ ಆಶೀರ್ವಚನದಲ್ಲಿ ರಕ್ತದಾನದ ಮಹತ್ವವನ್ನು ವಿದ್ಯಾಥರ್ಿಗಳಿಗೆ ಹೇಳಿದರು. ರಕ್ತದಾನ ಶಿಬಿರದಲ್ಲಿ ಕಾಲೇಜಿನ ಸಿಬ್ಬಂದಿಗಳು, ಎನ್ಎಸ್ಎಸ್ ಘಟಕದ ಸಿಬ್ಬಂದಿ, ಪ್ರೊ.ಪ್ರಸಾದ ಕಲ್ಲೊಳಿಮಠ, ಕೂ:ಸಿಜಿನ್ಚೆರಿಯಾನ ನಡೆಸಿಕೊಟ್ಟರು ಹಾಗೂ ವಿದ್ಯಾಥರ್ಿಗಳು ಭಾಗವಹಿಸಿದ್ದರು.