ಕಂಪ್ಲಿ:01 ಸೈಕಲ್ ಬಳಕೆಯಿಂದ ಸದೃಢ ಆರೋಗ್ಯಗಳಿಸುವುದರ ಜೊತೆಗೆ . ನಿತ್ಯ ಸೈಕಲ್ ಬಳಸಿ ಶಾಲೆಗೆ ಸಕಾಲಕ್ಕೆ ಬರುವಲ್ಲಿ ವಿದ್ಯಾಥರ್ಿಗಳು ಜಾಗೃತಿ ತೋರಬೇಕು ಎಂದು ಇಲ್ಲಿನ ಕಲ್ಮಠದ ಗುರುಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜಿ.ಜಿ.ಚಂದ್ರಣ್ಣ ಹೇಳಿದರು.
ಅವರು ಇಲ್ಲಿನ ಕಲ್ಮಠದ ಪ್ರಭುಸ್ವಾಮಿಗಳ ಅನುದಾನಿತ ಪ್ರೌಢಶಾಲೆ ಮಕ್ಕಳಿಗೆ ಸಕರ್ಾರದ ಉಚಿತ ಬೈಸಿಕಲ್ ವಿತರಣಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಶಿಕ್ಷಣ ಇಲಾಖೆಯು ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಿದ್ದು ಸರ್ವರಿಗೂ ಶಿಕ್ಷಣ ಒದಗಿಸುವ ಹಿನ್ನಲೆಯಲ್ಲಿ ನಾನಾ ಯೋಜನೆಗಳನ್ನು ಹಮ್ಮಿಕೊಂಡಿದೆ. ಸಕರ್ಾರದ ಸೌಲಭ್ಯಗಳನ್ನು ಪಡೆದುಕೊಂಡು ಗುಣಾತ್ಮಕ ಶಿಕ್ಷಣ ಪಡೆಯುವಲ್ಲಿ ಜಾಗೃತಿ ತೋರಬೇಕು. ಎಂದರು.
ಕಲ್ಮಠ ಪ್ರಭುಸ್ವಾಮಿಗಳ ಪ್ರೌಢಶಾಲೆಯ ಮುಖ್ಯಗುರು ಎ.ಎಂ.ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾಥರ್ಿಗಳಿಗೆ ಸಮವಸ್ತ್ರ ವಿತರಿಸಿದ್ದು, ಇದೀಗ 72 ವಿದ್ಯಾಥರ್ಿಗಳಿಗೆ ಸಕರ್ಾರದ ಉಚಿತ ಸೈಕಲ್ಗಳನ್ನು ವಿತರಿಸಲಾಗುತ್ತಿದೆ. ವಿದ್ಯಾಥರ್ಿ ವೇತನಕ್ಕಾಗಿ ಸಮಾಜ ಕಲ್ಯಾಣ ಇಲಾಖೆಗಳಿಗೆ ಅಜರ್ಿ ಸಲ್ಲಿಸಲಾಗಿದೆ. ವಿದ್ಯಾಥರ್ಿಗಳು ನಿತ್ಯ ಸೈಕಲ್ ಬಳಸಿ ಸಕಾಲಕ್ಕೆ ಶಾಲೆಗೆ ತೆರಳಬೇಕು. ಎಂದು ವಿದ್ಯಾಥರ್ಿಗಳಿಗೆ ಸಲಹೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಸಪ್ಪರದ ರಾಘವೇಂದ್ರ, ನಿವೃತ್ತ ಶಿಕ್ಷಣಾಧಿಕಾರಿ ಟಿ.ನಾಗರಾಜರೆಡ್ಡಿ, ಆಡಳಿತ ಮಂಡಳಿ ಸದಸ್ಯರಾದ ಟಿ.ತಿಪ್ಪೇಸ್ವಾಮಿ, ಕೆ.ಚಂದ್ರಶೇಖರ್, ಖಜಾಂಚಿ ಜಿ.ಚಂದ್ರಶೇಖರಗೌಡ, ಶಿಕ್ಷಕರಾದ ಬಿ.ಬೀರಲಿಂಗಪ್ಪ, ನಾಗನಗೌಡ ಸೇರಿದಂತೆ ಸಹ ಶಿಕ್ಷಕರು ಆಡಳಿತ ಮಂಡಳಿ ಸದಸ್ಯರು ಇದ್ದರು.