ಬಳ್ಳಾರಿ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರಮಾರೆಮ್ಮ ಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ಉಚಿತ ಬೆಂಚ್ಗಳನ್ನು ನೀಡುವ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹಾಗೆಯೇ ಈ ಕಾರ್ಯಕ್ರಮದ ಕುರಿತಾಗಿ ರೋಟರಿ ಕ್ಲಬ್ನ ಅಧ್ಯಕ್ಷ ಹೆಚ್.ವಿಷ್ಣುವರ್ಧನ್ರೆಡ್ಡಿ ಮತ್ತು ಮಾಜಿ ಅಧ್ಯಕ್ಷರಾದ ಮಾನ್ಯ ಶ್ರೀ ಗುರು ಮ್ಯಾಲೆವ್ ರವರು ಇಂದಿನ ಮಕ್ಕಳು ನಾಳಿನ ಪ್ರಜೆಗಳು ಮಕ್ಕಳು ದೇಶದ ಆಸ್ತಿ ಎಂಬಂತೆ ತಮ್ಮ ಹಿತನುಡಿಗನ್ನು ಒಳ್ಳೆಯ ವ್ಯಕ್ತಿಗಳಾಗಬೇಕು ಎಂದು ಹಾರೈಸಿದರು. ಉಪಾಧ್ಯಕ್ಷರಾದ ಮಾನ್ಯ ಶ್ರೀಧರ್ ಸರ್ ಮಕ್ಕಳ ಕಲಿಕೆಯ ಅಭಿವೃದ್ಧಿಗಾಗಿ ರೋಟರಿ ಕ್ಲಬ್ ಸದಾ ಸಿದ್ಧ ಎಂದು ಹೇಳಿದರು.
ಸರಕಾರಿ ಹಿರಿಯ ಪ್ರಾಥಮಕ ಶಾಲೆ ಕರಿಮಾರೆಮ್ಮ ಕಾಲೋನ ಶಾಲೆಯ ಶಿಕ್ಷಕರಾದ ಕುಮಾರಿ ಶಾರದಾ .ಬಿ ರವರು ಸ್ವಾಗತ ಕೋರಿದರು. ಈ ಕಾರ್ಯಕ್ರಮದ ಕುರಿತಾಗಿ ಎರಡು ಶಾಲೆಯ ಮುಖ್ಯ ಗುರುಗಾದ ಶ್ರೀಮತಿ ಶಶಿಕಲಾ .ಕೆ ಹಾಗೂ ಶ್ರೀಮತ ನಸ್ರೀನ್ ಇವರು ಹಿತನುಡಿಗಳನ್ನು ಹೇಳುವುದರ ಜೊತೆಗೆ ಶ್ರೀಮತಿ ಶಶಿಕಲಾ ಜೆ.ಎಸ್. ಇವರು ವಂದನಾರ್ಪಣೆ ಮಾಡಿಕೊಟ್ಟರು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ನ ಅಧ್ಯಕ್ಷರು, ಸದಸ್ಯರು, ಸೆಕ್ರಟರಿ ಹಾಗೂ ಎರಡೂ ಶಾಲೆಯ ಮುಖ್ಯಗುರುಗಳು, ಸಹ ಶಿಕ್ಷಕರು ಹಾಗೂ ಮಕ್ಕಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.