ಉಚಿತ ಪಠ್ಯೋಪಕರಣಗಳ ವಿತರಣಾ ಕಾರ್ಯಕ್ರಮ


ಗುತ್ತಲ 22: ಸಮೀಪದ ಗುಡೂರ ಗ್ರಾಮದ ಪ್ರಾಥಮಿಕ ಶಾಲಾ ಮಕ್ಕಳಿಗೆ ಎಚ್.ಎಮ್.ಕ್ಲಾಸ್ ಇಂಡಿಯಾ ಪ್ರೈವೇಟ ಲಿಮಿಟೆಡ್ ವತಿಯಿಂದ ಒದಗಿಸಲ್ಪಡುತ್ತಿರುವ ಉಚಿತ ಪಠ್ಯೋಪಕರಣಗಳ ವಿತರಣಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಸದಸ್ಯ ಶಿದ್ದರಾಜ ಕಲಕೋಟಿ ಉದ್ಘಾಟನೆ ಮಾಡಿದರು.  ನಂತರ ಮಾತನಾಡಿ ಮಕ್ಕಳಿಗೆ ಆಸ್ತಿ ಮಾಡಬೇಡಿ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ,ಮಕ್ಕಳನ್ನು ಶಾಲೆ ಬಿಡಿಸಬೇಡಿ ಎಂದು ಜಿಲ್ಲಾ ಪಂಚಾಯತ ಸದಸ್ಯ ಸಿದ್ದರಾಜ ಕಲಕೋಟಿ ಹೇಳಿದರು. ಎಚ್.ಎಂ.ಇಂಡಿಯಾ ಪ್ರೈವೇಟ ಲಿಮಿಟೆಡ್ ಕಂಪನಿಯ ರಾಷ್ಟ್ರೀಯ ಉತ್ಪಾದನಾ ಮುಖ್ಯಸ್ಥರಾದ ಅನಿಲಕುಮಾರ ಜಾತ್ಕರ ಮಾತನಾಡಿ ಎಲ್ಲರು ಸಕರ್ಾರಿ ಶಾಲೆಯಲ್ಲಿ ಶಿಕ್ಷಣ ಪಡೆಯಿರಿ, ಶಿಕ್ಷಣಕ್ಕೆ ಹೆಚ್ಚು ಆಸಕ್ತಿ ವಹಿಸಿ ಬಾಲ ಕಾಮರ್ಿಕರ ಪದ್ಧತಿ ಸಂಪೂರ್ಣ ಬಂದ ಮಾಡಿ ಪ್ರತಿಯೊಬ್ಬ ಮಕ್ಕಳು ಉತ್ತಮ ಶಿಕ್ಷಣ ಪಡೆಯಿರಿ ಎಂದು ಅವರು ಹೇಳಿದರು.

  ಕಾರ್ಯಕ್ರಮದಲ್ಲಿ ಕಂಪನಿ ವತಿಯಿಂದ ಪ್ರಾಥಮಿಕ ಶಾಲೆಯ 1 ರಿಂದ 7 ನೇ ತರಗತಿಯವರೆಗೆ ಶಿಕ್ಷಣ ಪಡೆಯುತ್ತಿರುವ 120 ಮಕ್ಕಳಿಗೆ ಉಚಿತವಾಗಿ ತಲಾ ಒಂದು ವಿಧ್ಯಾಥರ್ಿಗೆ ಒಂದು ಬ್ಯಾಗ ಮತ್ತು 12 ನೋಟ್ಬುಕ್ಗಳನ್ನು ವಿತರಣೆ ಮಾಡಲಾಯಿತು.

ಜಿಲ್ಲೆಯಲ್ಲಿ 1100 ಮಕ್ಕಳಿಗೆ ಉಚಿತವಾಗಿ ಬ್ಯಾಗ ಮತ್ತು ನೋಟಬುಕ್ ವಿತರಣೆ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕ್ರಮದ ಕಂಪನಿ ಅಧಿಕಾರಿ ರವಿಚಂದ್ರ ಚಾರ್ಮಡಿ ಹೇಳಿದರು.

ಗ್ರಾಮಸ್ಥರು ಕಂಪನಿಯ ಎಲ್ಲ ಅಧಿಕಾರಿಗಳನ್ನು ಸನ್ಮಾನಿಸಿದರು.ಎಸ್ಡಿಎಂಸಿ ಅಧ್ಯಕ್ಷ ಶಂಕ್ರಣ್ಣ ಕಂಬಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮರೋಳ ಗ್ರಾಮ ಪಂಚಾಯತ ಅಧ್ಯಕ್ಷ ಲಕ್ಷ್ಮವ್ವ ಕುದಿರಾಳ, ಸಧಸ್ಯ ತಿಪ್ಪಣ್ಣ ಚೂರಿ,ಮಾಲತೇಶ ರಿತ್ತಿ, ಪ್ರಕಾಶ ಅಂಬಿಗೇರ,ನಿಂಗಪ್ಪ ಹೋಟ್ಟಿ,ಮಲ್ಲಮ್ಮ ಹುಚ್ಚಮ್ಮನವರ,ನಿಂಗಪ್ಪ ಹಡಪದ, ಶಶಿಕುಮಾರ, ಗಣೇಶ ಓಲೇಕಾರ,ಎಸ್.ಎಂ.ಕಂಬಳಿ,ಬಸವರಾಜ ಕಟಗಿ, ಎ.ಟಿ.ಎಳವತ್ತಿಮಠ, ಶಿವಾ ಶಿದ್ದಾಪೂರ, ಮಂಜು ಗುಳೇದ, ಎಸ್.ಎನ್.ಕಂಬಳಿ, ಯಲ್ಲಪ್ಪ ಹುಚ್ಚಮ್ಮನವರ,ಮಾರುತಿ ಮುದ್ದಿ, ಕೃಷ್ಣಾ ಡೋಲೆ, ಮಂಜು ಡೋಲೆ, ಪಂಚಾಯತ ಕಾರ್ಯದಶರ್ಿ ಪ್ರಕಾಶ ಹಕ್ಕಿ,ಆನಂದ ಕುಲಕಣರ್ಿ, ಭೀಮಣ್ಣ ಹೋರಕೇರಿ,ಬಾಪೂಜಿ ಶಿದ್ದಾಪೂರ, ಭೀಮಣ್ಣ ಹೋರಕೇರಿ, ಪರಸಣ್ಣ ಕಂಬಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.