ಹೊಸಪೇಟೆ 04: ಇಂದು ಹೊಸಪೇಟೆ ಸ್ಥಳೀಯ ಅಂಜುಮನ್ ಖಿದ್ಮತೆ ಇಸ್ಲಾಮ್ ಕಮಿಟಿ ವತಿಯಿಂದ ನಗರದ ಅಂಜುಮನ್ ಆಸ್ಪತ್ರೆಯ ಅವರಣದಲ್ಲಿ ನಗರದ ಹಾಗೂ ಗ್ರಾಮೀಣ ಭಾಗದ ಮುಸ್ಲಿಂ ಭಾಂದವರ 140 ಮಕ್ಕಳಿಗೆ ಉಚಿತ ಸುನ್ನಿತ( ಖತ್ನಾ) ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಇದೇ ವೇಳೆ ಸುನ್ನಿತಿಗೆ ಒಳಗಾದ ಎಲ್ಲಾ ಮಕ್ಕಳಿಗೂ ಜೌಷಧ ಹಾಗೂ ಪೌಷ್ಟಿಕಾಹಾರದ ಕಿಟ್ ನ್ನು ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ಕಮಿಟಿಯ ಅಧ್ಯಕ್ಷರಾದ ಹೆಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ, ಉದ್ದೇಶಿಸಿ ಮಾತನಾಡಿ, ಇಸ್ಲಾಂ ಧರ್ಮದ ಪ್ರಕಾರ ಪ್ರತಿಯೊಬ್ಬ ಮುಸ್ಲಿಂ ವ್ಯಕ್ತಿಯು ಸುನ್ನತೇ ಇಬ್ರಾಹಿಂ (ಖತ್ನಾ) ಮಾಡಿಸಿಕೊಳ್ಳುವುದು ಕಡ್ಡಾಯ ಆಚರಣೆಯಾಗಿದೆ ಈ ಆಚರಣೆಯು ಆರ್ಥಿಕವಾಗಿ ಹಿಂದುಳಿದ ಬಡ ಮುಸ್ಲಿಂ ಕುಟುಂಬಗಳಿಗೆ ಬಹಳ ಕಷ್ಟ ಸಾಧ್ಯವಾಗಿರುತ್ತದೆ, ಇಂತಹವರಿಗೆ ನೆರವಾಗಲು ಉಚಿತವಾದ ಸುನ್ನತೆ ಇಬ್ರಾಹಿಂ (ಖತ್ನಾ) ಕಾರ್ಯಕ್ರಮವನ್ನು ಕಮಿಟಿಯು ಹಮ್ಮಿಕೊಂಡು ಬರುತ್ತಿದ್ದು, ಈ ವರ್ಷ ದೇವರ ಕೃಪೆಯಿಂದ ಸುಮಾರು 140 ಕ್ಕೂ ಅಧಿಕ ಮಕ್ಕಳಿಗೆ ಉಚಿತ ಸುನ್ನತೆ ಇಬ್ರಾಹಿಂ (ಖತ್ನಾ) ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದು ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾಕ್ಟರ್ ಹಬೀಬುಲ್ಲ ಮತ್ತು ಡಾಕ್ಟರ್ ಕಲೀಮುಲ್ಲಾ, ರವರು, ಅಂಜುಮನ್ ಕಮಿಟಿಯ ಉಪಾಧ್ಯಕ್ಷರಾದ ಫೈರೋಜ್ ಖಾನ್, ಕಾರ್ಯದರ್ಶಿಗಳಾದ ಮೊಹಮ್ಮದ್ ಅಬೂಬ್ ಕರ್ ಅಶ್ರಫಿ, ಸಹಕಾರ್ಯದರ್ಶಿಗಳಾದ ಮೊಹಮ್ಮದ್ ದರ್ವೇಶ್, ಹಾಗು ಸದ್ಯಸರುಗಳಾದ ಸದ್ದಾಂ ಹುಸೇನ್ ಹಾಗೂ ನೂರಾರು ಪಾಲಕರು ಪೋಷಕರು ಸಮುದಾಯದ ಹಿರಿಯ ಮುಖಂಡರು ಉಪಸ್ಥಿತರಿದ್ದರು.