ಲೋಕದರ್ಶನ ವರದಿ
ವಿಜಯಪುರ 02: ಶಿಕ್ಷಣದ ಗುಣಮಟ್ಟ ಸುಧಾರಣೆ ಮಾಡಿ ತನ್ಮೂಲಕ ಶೈಕ್ಷಣಿಕವಾಗಿ ನಮ್ಮ ವಿದ್ಯಾಥರ್ಿಗಳು, ಅತ್ಯುನ್ನತ ಪ್ರಗತಿ ಸಾಧಿಸಲು, ಅನುಕೂಲಕರ ವಾತಾವರಣವನ್ನು ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ನಿಮರ್ಿಸಲಾಗಿದೆ ಎಂದು ಮಾಜಿ ಸಚಿವ, ಶಾಸಕ ಡಾ.ಎಂ.ಬಿ.ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿಯ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾಥರ್ಿಗಳಿಗೆ ಎಂ.ಬಿ.ಪಾಟೀಲ ಫೌಂಡೇಶನ್ನಿಂದ ಸ್ಕೂಲ್ಬ್ಯಾಗ್ ವಿತರಿಸಿ ಮಾತನಾಡಿದ ಅವರು ಹಿಂದಿನ ಸಕರ್ಾರದ ಅವಧಿಯಲ್ಲಿ ಆರಂಭಗೊಂಡ ಕ್ಷೀರಭಾಗ್ಯ, ಉಚಿತ ಶೂ ವಿತರಣೆ ಶಾಲಾ ಮಕ್ಕಳ ಆರೋಗ್ಯದ ದೃಷ್ಠಿಯಿಂದ ತೆಗೆದುಕೊಂಡ ಕ್ರಾಂತಿಕಾರಿ ಕ್ರಮಗಳಾಗಿದ್ದವು. ಎಂ.ಬಿ.ಪಾಟೀಲ ಫೌಂಡೇಶನ್ನಿಂದ ಸ್ಕೂಲ್ಬ್ಯಾಗ್, ಡಿಜಿಟಲ್ ಕ್ಲಾಸ್ರೂಂ, ಟಾಕಿಂಗ್ ಟ್ರೀ, ಡಿಕ್ಸನರಿ, ಜಾಮಿಟ್ರಿ ಬಾಕ್ಸ್, ಆಟದ ಕಿಟ್ ಸೇರಿದಂತೆ ಹಲವಾರು ಕೊಡುಗೆಗಳನ್ನು ಬಬಲೇಶ್ವರ ಕ್ಷೇತ್ರದ ಎಲ್ಲ ಮಕ್ಕಳಿಗೆ ನೀಡಿದ್ದು, ಇದರಿಂದ ಶೈಕ್ಷಣಿಕ ಪ್ರಗತಿ ಸಾಧಿಸಲು ಸಹಕಾರಿಯಾಗಿದೆ.
ಅಣ್ಣ ಬಸವಣ್ಣನವರ ತತ್ವದಲ್ಲಿ ನಂಬಿಕೆ ಇಟ್ಟಿರುವ ನಾನು ಅವರ ಕಾಯಕ ಮತ್ತು ದಾಸೋಹ ತತ್ವದ ಅನುಸಾರ ನಡೆದಿದ್ದೇನೆ. ಅತ್ಯುತ್ತಮ ಸಮಾಜಮುಖಿಯಾಗಿ ಕಾಯಕವನ್ನು ಮಾಡುವದು, ನನಗೆ ದೊರೆತಿರುವ ಸಂಪತ್ತನ್ನು ದಾಸೋಹ ರೂಪದಲ್ಲಿ ಈ ರೀತಿಯ ಕೊಡುಗೆಗಳನ್ನು ನೀಡುವದರಿಂದ ಮನಸ್ಸಿಗೆ ತೃಪ್ತಿಯಿದೆ ಎಂದರು.
ಎಂ.ಬಿ.ಪಾಟೀಲ ಫೌಂಡೇಶನ್ ಪ್ರಧಾನ ಕಾರ್ಯದಶರ್ಿ ಸಂಗಮೇಶ ಬಬಲೇಶ್ವರ ಮಾತನಾಡಿ, ಚುನಾವಣೆಗಳು ಬಂದಾಗ ರಾಜಕಾರಣಿಗಳು ಉಡುಗೊರೆಗಳನ್ನು ಕೊಡುವುದು ಸಾಮಾನ್ಯ. ಆದರೆ 224 ಜನಪ್ರತಿನಿಧಿಗಳಲ್ಲಿ ಭಿನ್ನವಾಗಿರುವ ಎಂ.ಬಿ.ಪಾಟೀಲರು ಇದೀಗ ಚುನಾವಣೆ ಮುಗಿದಿದ್ದರೂ ಶಾಲಾ ಮಕ್ಕಳಿಗೆ ಉಚಿತವಾಗಿ ಸ್ಕೂಲ್ಬ್ಯಾಗ್ ಉಡುಗೊರೆ ನೀಡುತ್ತಿರುವುದು ಶ್ಲ್ಯಾಘನೀಯವಾಗಿದೆ.
ತಮ್ಮ ಸಾಮಾಜಿಕ ಕಳಕಳಿಯಿಂದ ಇಂದು ಶೈಕ್ಷಣಿಕ ರಂಗದಲ್ಲಿ ಭಾರಿ ಬದಲಾವಣೆಯನ್ನು ತಂದಿರುವ ಪರಿಣಾಮ ರಾಜ್ಯದಲ್ಲಿಯೇ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದ್ದ ವಿಜಯಪುರ ಜಿಲ್ಲೆಯನ್ನು 9ನೇ ಸ್ಥಾನಕ್ಕೆ ತಂದು ನಿಲ್ಲಿಸಿದ ಕೀತರ್ಿ ಎಂ.ಬಿ.ಪಾಟೀಲರಿಗೆ ಮತ್ತು ಈ ಫೌಂಡೇಶನ್ಗೆ ಸಲ್ಲುತ್ತದೆ ಎಂದರು. ಜಿ.ಪಂ ಸದಸ್ಯೆ ದಾನಮ್ಮ ಗುರುಲಿಂಗಪ್ಪ ಅಂಗಡಿ, ತಾ.ಪಂ ಸದಸ್ಯ ಎ.ಎನ್.ಪಟೇಲ ನಂದ್ಯಾಳ, ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎನ್.ಹುರಳಿ, ಸುರೇಶ ಕುಪ್ಪಿ, ಗಣ್ಯರಾದ ಡಾ.ಕೆ.ಎಚ್.ಮುಂಬಾರೆಡ್ಡಿ, ಅಪ್ಪುಗೌಡ ಪಾಟೀಲ, ಎಂ.ಬಿ.ಪಾಟೀಲ ಫೌಂಡೇಶನ್ ನಿದರ್ೆಶಕರಾದ ಪ್ರಕಾಶ ಸೊನ್ನದ, ರಾಮನಿಂಗ ಕೊಕಟನೂರ, ಗ್ರಾಮದ ಪ್ರಮುಖರಾದ ರಾಚಪ್ಪ ಅಂಗಡಿ, ಸದಾಶಿವ ಸಜ್ಜನ, ರಮೇಶ ಸಜ್ಜನ, ಮಲ್ಲಿಕಾಜರ್ುನ ಅಂಗಡಿ, ತಾರಪಾಶ್ಯಾ ಜಾಗಿರದಾರ, ಸಯ್ಯದ ಅತ್ತಾರ, ಪಾಂಡು ಕಾಖಂಡಕಿ, ಪರಸು ಲೋಣಾರ, ಡಾ. ಭರತ ಲೋಣಾರ, ನಾಗು ಹೊಳೆಪ್ಪಗೋಳ ಮತ್ತಿತರರು ಉಪಸ್ಥಿತರಿದ್ದರು.